ಕೋವಿಡ್‌ ಮೃತರ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರ ವಿತರಣೆ

Kannadaprabha News   | Asianet News
Published : Jun 15, 2021, 08:13 AM IST
ಕೋವಿಡ್‌ ಮೃತರ ಕುಟುಂಬಕ್ಕೆ  ತಲಾ 1 ಲಕ್ಷ ಪರಿಹಾರ ವಿತರಣೆ

ಸಾರಾಂಶ

ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದ ಕುಟುಂಬಕ್ಕೆ  ಪರಿಹಾರ ತಲಾ ಒಂದು ಲಕ್ಷ ರುಪಾಯಿ ಪರಿಹಾರ ವಿತರಣೆ ಮಾಡಿದ ಕಂದಾಯ ಸಚಿವ ಆರ್‌.ಆಶೋಕ್‌ ಕ್ಷೇತ್ರದ ಮೂವರ ಮನೆಗೆ ತೆರಳಿದ ಅವರು, ಅ ಕುಟುಂಬಕ್ಕೆ ತಲಾ ಒಂದು ಲಕ್ಷ ರು. ಪರಿಹಾರ

ಬೆಂಗಳೂರು (ಜೂ.15):  ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದ ಕುಟುಂಬಕ್ಕೆ ಕಂದಾಯ ಸಚಿವ ಆರ್‌.ಆಶೋಕ್‌ ತಲಾ ಒಂದು ಲಕ್ಷ ರುಪಾಯಿ ಪರಿಹಾರ ವಿತರಣೆ ಮಾಡಿದರು.

ಸೋಮವಾರ ಕ್ಷೇತ್ರದ ಮೂವರ ಮನೆಗೆ ತೆರಳಿದ ಅವರು, ಅ ಕುಟುಂಬಕ್ಕೆ ತಲಾ ಒಂದು ಲಕ್ಷ ರು. ಪರಿಹಾರ ನೀಡಿದರು. ಕ್ಷೇತ್ರದಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿರುವವರ ಸಂಖ್ಯೆ 48 ಮಂದಿ ಇರಬಹುದು. ಅಷ್ಟೂಮಂದಿಗೂ ತಲಾ ಒಂದು ಲಕ್ಷ ರು. ನೀಡಲಾಗುವುದು. ಬಿಜೆಪಿಯ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೋವಿಡ್‌ನಿಂದ ಮೃತಪಟ್ಟಕುಟುಂಬಕ್ಕೆ ಧನ ಸಹಾಯ ಮಾಡಲಿದ್ದಾರೆ ಎಂದರು.

ಪಂಕ್ಚರ್‌ ಆದ ಬಸ್ಸಿನ ಸೀಟಿಗೆ ಟವಲ್‌ ಹಾಕಿದ್ದಾರೆ! ಸಿಎಂ ಬದಲಿಸಲು ಹೊರಟವರ ಸ್ಥಿತಿ ಇದು ...

ಇದೇ ವೇಳೆ ಪದ್ಮನಾಭ ನಗರ ಕ್ಷೇತ್ರದಲ್ಲಿ ವಿವಿಧ ವರ್ಗಗಳ 1600ಕ್ಕೂ ಹೆಚ್ಚು ಜನರಿಗೆ ದಿನಸಿ ಕಿಟ್‌ ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೋವಿಡ್‌ ಎಲ್ಲರಿಗೂ ಸಾಕಷ್ಟುಸಂಕಷ್ಟಗಳನ್ನು ತಂದೊಡ್ಡಿದೆ. ಹಲವರ ಬದುಕಿನಲ್ಲಿ ಚೇತರಿಸಿಕೊಳ್ಳಲಾಗದಷ್ಟುಆಘಾತ ನೀಡಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಅವರ ಜೊತೆಗಿರಬೇಕಾದ ಅವಶ್ಯಕತೆ ಇದೆ. ಯಾರೂ ಅನಾಥರಲ್ಲ. ಆ ಎಲ್ಲ ಕುಟುಂಬಗಳ ಜೊತೆ ನಾನು ಸದಾ ಇರುತ್ತೇನೆ. ಕೋವಿಡ್‌ನಿಂದ ನೊಂದವರ ಜೊತೆ ನಾನು ನಿಲ್ಲಲು ನಿರ್ಧರಿಸಿದ್ದೇನೆ. ಈ ವೇಳೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನ ನಾನೇ ಹೊರುತ್ತೇನೆ ಎಂದು ಭರವಸೆ ನೀಡಿದರು.

ಅಶೋಕ್‌ ಕಾರ್ಯಕ್ಕೆ  ಮೆಚ್ಚುಗೆ 

ಕಂದಾಯ ಸಚಿವ ಆರ್‌.ಅಶೋಕ್‌ ಕಾರ್ಯದ ಬಗ್ಗೆ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಕೊರೋನಾದಂತಹ ಕಷ್ಟದ ಕಾಲದಲ್ಲಿ ನೊಂದವರ ಬದುಕಿಗೆ ನೆರವಾಗಬೇಕು ಎಂಬ ಅಂತಃಕರಣ ಇಟ್ಟುಕೊಂಡು ಈ ಕಾರ್ಯ ಮಾಡುತ್ತಿರುವ ಅಶೋಕ್‌ ಅವರು ಈ ಸತ್ಕಾರ್ಯದಲ್ಲಿ ನಮ್ಮನ್ನ ಭಾಗಿ ಮಾಡಿರುವುದು ನಮ್ಮ ಪಾಲಿನ ಅದೃಷ್ಟ. ನೊಂದವರ ಮನದ ಕೂಗು ಕೇವಲ ಕಾಳಜಿಯುಳ್ಳ ಹೃದಯವುಳ್ಳವರಿಗೆ ಮಾತ್ರ ಕೇಳಿಸುತ್ತದೆ. ಅಂತಹವರು ಮಾತ್ರ ಇಂತಹ ಕಾರ್ಯ ಮಾಡುವುದಕ್ಕೆ ಸಾಧ್ಯ ಎಂದರು.

ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಮಾತನಾಡಿ, ಸರ್ಕಾರದಲ್ಲಿ ಕಂದಾಯ ಇಲಾಖೆ ಮಾತೃ ಇಲಾಖೆ ಇದ್ದಂತೆ. ಹೀಗಾಗಿ ಅಶೋಕ ಅವರು ಕೂಡಾ ಮಾತೃ ಹೃದಯ ಹೊಂದಿದವರು. ಸೋಮವಾರ ರಕ್ತದಾನ ದಿನ. ಅಷ್ಟೇ ಮಹತ್ವವಾದದ್ದು ಅನ್ನದಾನ ಕೂಡಾ. ಅಂತಹ ಕಾರ್ಯಕ್ಕೆ ಅಶೋಕ ಮುಂದಾಗಿರುವುದಕ್ಕೆ ಚಿರಋುಣಿಯಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌, ಶಾಸಕರಾದ ಎಂ.ಕೃಷ್ಣಪ್ಪ, ಸತೀಶ್‌ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?