ಒಂದು ತಿಂಗಳಲ್ಲಿ ಚಾಮುಂಡಿ ಹುಂಡಿಯಲ್ಲಿ ಸಂಗ್ರಹವಾಯ್ತು ಕೋಟಿ ರು.

By Kannadaprabha News  |  First Published Dec 19, 2020, 8:14 AM IST

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ  ಒಂದೇ ತಿಂಗಳಲ್ಲ ಕೋಟಿ ರು. ಸಂಗ್ರಹವಾಗಿದೆ. ಕೊರೋನಾ ಇದ್ದರೂ ಹೆಚ್ಚೇ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದು ಈ ನಿಟ್ಟಿನಲ್ಲಿ ಅಧಿಕ ಹಣ ಸಂಗ್ರಹವಾಗಿದೆ. 


ಮೈಸೂರು (ಡಿ.19): ಚಾಮುಂಡಿ ಬೆಟ್ಟದ ದೇವಾಲಯದ ನವೆಂಬರ್‌ ತಿಂಗಳ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, .1 ಕೋಟಿಗಿಂತ ಹೆಚ್ಚಿನ ಹಣ ಸಂಗ್ರಹವಾಗಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿಯೂ ದೊಡ್ಡ ಮೊತ್ತದ ಆದಾಯ ಸಂಗ್ರಹವಾದಂತಾಗಿದೆ.

ಕೊರೋನಾ ಕಾರಣದಿಂದಾಗಿ ಪ್ರಮುಖ ಹಾಗೂ ವಿಶೇಷ ಧಾರ್ಮಿಕ ಆಚರಣೆಯ ದಿನಗಳಂದು ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ಚಾಮುಂಡೇಶ್ವರಿ ದೇವಾಲಯದಲ್ಲಿ ಆದಾಯ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು.

Tap to resize

Latest Videos

ಮೈಸೂರಲ್ಲಿ ಎಂಪಿಗಳಿಗೊಂದು ಕಾನೂನು, ಸಾಮಾನ್ಯರಿಗೆ ಮತ್ತೊಂದು ಕಾನೂನಾ..?

ಇದೀಗ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ದೇವಾಲಯಕ್ಕೆ ಭೇಟಿ ನೀಡಿದ್ದ ಜನರಿಂದ ಕಾಣಿಕೆ ರೂಪದಲ್ಲಿ 1,14,18,628 ರು. ಸಂಗ್ರಹವಾಗಿದೆ.

ಹುಣ್ಣಿಮೆ ಹಾಗೂ ಹಬ್ಬದ ದಿನಗಳಲ್ಲಿ ಚಾಮುಂಡಿ ಬೆಟ್ಟದ ದೇವಾಲಯ ಪ್ರವೇಶಕ್ಕೆ ಜನರಿಗೆ ನಿರ್ಬಂಧ ವಿಧಿಸಲಾಗಿದ್ದರೂ ದೊಡ್ಡ ಮೊತ್ತವೇ ಸಂಗ್ರಹವಾಗಿದೆ.

click me!