ರಾಹುಲ್ ಗಾಂಧಿ ಪಾಪ ಇನ್ನೂ ಚಿಕ್ಕೋನು, ಅವನತ್ರ ಮೋದಿದೇನು ಜಗಳ?: ರೈ

ರಾಹುಲ್ ಗಾಂಧಿ ಪಾಪ ಇನ್ನೂ ಚಿಕ್ಕೋನು, ಅವನತ್ರ ಮೋದಿದೇನು ಜಗಳ?: ರೈ

Published : May 02, 2018, 06:51 PM IST

ಹೋಗಿ ಹೋಗಿ ಈಗಷ್ಟೇ ಕಾಂಗ್ರೆಸ್ ಅಧ್ಯಕ್ಷರಾಗಿರುವ ಹುಡುಗನೊಂದಿಗೆ ಮೋದಿಕೇಗೆ ದ್ವೇಷ? ರಾಹುಲ್‌ ಗಾಂಧಿಯೊಂದಿಗೆ ಮೋದಿಗೇಕೆ ಇದೆಂಥ ಸ್ಪರ್ಧೆ? ಎಂದು ನಟ, ಚಿಂತಕ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. ಅವನನ್ನು ಬೆಳೆಯಲು ಬಿಡಿ ಎಂದು ಆಗ್ರಹಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಈಗ ತಾನೇ ಅಧಿಕಾರ ಸ್ವೀಕರಿಸಿದ್ದಾರೆ. ಮೋದಿ ಮುಖ್ಯಮಂತ್ರಿಯಾಗಿ, ಇದೀಗ ಪ್ರಧಾನಿಯಾದವರು. ಮೋದಿ ವಯಸ್ಸೆಷ್ಟು, ರಾಹುಲ್ ವಯಸ್ಸೆಷ್ಟು? ಹೋಗಿ ಹೋಗಿ ರಾಹುಲ್‌ ವಿರುದ್ಧ ವಾಗ್ದಾಳಿ ನಡೆಸುವುದು ನ್ಯಾಯಾನಾ? ಎಂದು ಪ್ರಕಾಶ್ ರೈ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.