ಬಿಎಸ್'ವೈ,ಸಿದ್ದು ಇಬ್ಬರಿಗಿರುವ ವ್ಯತ್ಯಾಸ ಇಷ್ಟೆ: ರಾಜ್ಯ ಬಿಜೆಪಿ ಉಸ್ತುವಾರಿ ಬಿಚ್ಚಿಟ್ಟರು ಸತ್ಯ

Published : Apr 23, 2018, 06:18 PM IST
ಬಿಎಸ್'ವೈ,ಸಿದ್ದು ಇಬ್ಬರಿಗಿರುವ ವ್ಯತ್ಯಾಸ ಇಷ್ಟೆ: ರಾಜ್ಯ ಬಿಜೆಪಿ ಉಸ್ತುವಾರಿ ಬಿಚ್ಚಿಟ್ಟರು ಸತ್ಯ

ಸಾರಾಂಶ

ಭಾಷಣದಲ್ಲಿ ನಾಯಕರ ಮಾತಿನ ಸಮರಗಳು, ಏಟು-ಎದಿರೇಟುಗಳು ಒಬ್ಬರಿಗಿಂತಲೂ ಒಬ್ಬರದು ಹೆಚ್ಚಾಗಿ ಹರಿದಾಡುತ್ತವೆ. ಇತ್ತೀಚಿಗಷ್ಟೆ ರಾಜ್ಯ ಬಿಜೆಪಿ ಉಸ್ತುವಾರಿ ಪಿ. ಮುರಳಿಧರ್ ರಾವ್ ಹಾಗೂ ಸಿಎಂ ಸಿದ್ದರಾಮಯ್ಯ ನಡುವಿನ ಮಾತಿನ ಬಿರಿಸುಬಾಣಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಹರಿದಾಡುತ್ತಿವೆ.

ನವದೆಹಲಿ(ಏ.23): ಕರ್ನಾಟಕ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಸ್ಪರ್ಧಾ ಕಣದಲ್ಲಿರುವ ಮೂರು ರಾಜಕೀಯ ಪಕ್ಷಗಳು ಬಹುತೇಕ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.  

ಮೇ.12 ರಂದು ಚುನಾವಣೆ ನಡೆಯಲಿದ್ದು, ನಾಳೆ (ಏ.24) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏ.27 ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನ. ಹಲವು ಕ್ಷೇತ್ರಗಳಲ್ಲಿ ಘಟಾನುಘಟಿಗಳೆ ಸ್ಪರ್ಧಿಸಿರುವ ಕಾರಣ ಹಾಗೂ ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ದೊಡ್ಡ ರಾಜ್ಯ ಕರ್ನಾಟಕವಾಗಿದ್ದು, ಇದನ್ನು ಉಳಿಸಿಕೊಳ್ಳಲು ರಾಜ್ಯ ನಾಯಕರಿಗೆ ಪ್ರತಿಷ್ಟೆಯಾಗಿದ್ದರೆ, ಅಧಿಕಾರ ಕಿತ್ತುಕೊಳ್ಳಲು ಬಿಜೆಪಿ, ಜೆಡಿಎಸ್ ಹರಸಾಹಸ ಪಡುತ್ತಿವೆ.

ಭಾಷಣದಲ್ಲಿ ನಾಯಕರ ಮಾತಿನ ಸಮರಗಳು, ಏಟು-ಎದಿರೇಟುಗಳು ಒಬ್ಬರಿಗಿಂತಲೂ ಒಬ್ಬರದು ಹೆಚ್ಚಾಗಿ ಹರಿದಾಡುತ್ತವೆ. ಇತ್ತೀಚಿಗಷ್ಟೆ ರಾಜ್ಯ ಬಿಜೆಪಿ ಉಸ್ತುವಾರಿ ಪಿ. ಮುರಳಿಧರ್ ರಾವ್ ಹಾಗೂ ಸಿಎಂ ಸಿದ್ದರಾಮಯ್ಯ ನಡುವಿನ ಮಾತಿನ ಬಿರಿಸುಬಾಣಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಹರಿದಾಡುತ್ತಿವೆ.

ಮುರಳೀಧರ್ ರಾವ್  2 ದಿನಗಳ ಹಿಂದೆ ಕರ್ನಾಟಕ ರಾಜ್ಯದ ಆಡಳಿತದ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕನ್ನಡದಲ್ಲಿ ಟ್ವೀಟ್ ಮಾಡಿ ಸಾರ್ ಎಂದು ಟಾಂಗ್ ಕೊಟ್ಟಿದ್ದರು. ಕೆಲ ಹೊತ್ತಿನ ನಂತರ ಮುರಳಿಧರ್ ಅವರು ಕನ್ನಡದಲ್ಲಿ ಟ್ವೀಟ್ ಮಾಡಿದ್ದರು.

ಇಂದು ಮತ್ತೆ ಟ್ವೀಟ್ ಮಾಡಿರುವ ಮುರಳೀಧರ್ ರಾವ್ ಅವರು ಸಿದ್ದರಾಮಯ್ಯ ಹಾಗೂ ಬಿಎಸ್'ವೈ ಅವರ ಬಗ್ಗೆ ವಿಶ್ಲೇಷಿಸಿ ' ಒಬ್ಬ ನಾಯಕ ತನ್ನ ಮಗನನ್ನು ಚುನಾವಣೆಯಲ್ಲಿ ನಿಲ್ಲಬೇಡ ಎಂದರೆ ಮತ್ತೊಬ್ಬ ನಾಯಕ 2 ಕ್ಷೇತ್ರಗಳಲ್ಲಿ ತಾನು ಸ್ಪರ್ಧಿಸುವುದಲ್ಲದೆ ಮತ್ತೊಂದು ಕ್ಷೇತ್ರದಲ್ಲಿ ತನ್ನ ಮಗನನ್ನು ಕಣಕ್ಕಿಳಿಸಿದ್ದಾನೆ. ಇದು ಇಬ್ಬರು ನಾಯಕರಿಗಿರುವ ವ್ಯತ್ಯಾಸ' ಎಂದು ಟ್ವಿಟ್ ಮಾಡಿದ್ದಾರೆ.    

PREV
click me!