ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳ ಕುಟುಂಬದವರು ಕೂಡಾ ಅಖಾಡಕ್ಕಿಳಿದಿದ್ದಾರೆ. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಪರವಾಗಿ ಪತ್ನಿ ಉಷಾ ಪ್ರಚಾರಕ್ಕಿಳಿದರೆ ಅತ್ತ ಶಿವಮೊಗ್ಗದಲ್ಲಿ ಈಶ್ವರಪ್ಪ ಪುತ್ರಿ ಕನಕಾ ಹಾಗೂ ಕಾಪುವಿನಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪುತ್ರಿ ದ್ವಿತಿ ಕೂಡಾ ಮನೆಮನೆಗೆ ತೆರಳಿ ತಮ್ಮ ತಂದೆ ಪರವಾಗಿ ಮತಯಾಚನೆ ಮಾಡಿದ್ದಾರೆ