ಖಾಸಗಿ ನೌಕರರು, ರೈತರು, ವ್ಯಾಪಾರಸ್ಥರು ಸೇರಿದಂತೆ ಪ್ರತಿಯೊಬ್ಬರೂ ಅಟಲ್ ಪಿಂಚಣಿ ಸೌಲಭ್ಯ ಪಡೆಯಿರಿ: ಉಮೇಶ್ ಜಾಧವ್| ಗ್ರಾಮದ ಎಲ್ಲ ಮನೆ ಮನೆಗಳಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಪ್ರಧಾನಮಂತ್ರಿ ಸುರಕ್ಷಣಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಕುರಿತು ಜಾಗೃತಿ ಮೂಡಿಸಿ ವಿಮೆ ಮಾಡಿಸಬೇಕು|
ಕಲಬುರಗಿ[ಅ.24]: ಅಂಚೆ ಇಲಾಖೆಗೆ ಮರುಜೀವ ನೀಡಿ ಕರ್ನಾಟಕದಲ್ಲಿ ಮೊದಲೇ ಸ್ಥಾನದಲ್ಲಿರುವ ಕಲಬುರಗಿ ವಿಭಾಗವನ್ನು ಮುಂದೆ ದೇಶದಲ್ಲಿ ಒಂದನೇ ಸ್ಥಾನದಲ್ಲಿ ತರಲು ಪ್ರತಿಯೊಬ್ಬರೂ ಶ್ರಮಿಸಬೇಕು. ನಿಮ್ಮ ಬ್ಯಾಂಕ್ ನಿಮ್ಮ ಮನೆ ಬಾಗಿಲಿಗೆ ಎಂಬ ಯೋಜನೆ ಸಕ್ರಿಯಗೊಳಿಸಬೇಕೆಂದು ಸಂಸದ ಡಾ. ಉಮೇಶ್ ಜಾಧವ್ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಭಾರತೀಯ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯುವ ಪ್ರಕ್ರಿಯೆ ಹಾಗೂ ಖಾತೆಯಿಂದ ಆಗುವ ಪ್ರಯೋಜನಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮದ ಎಲ್ಲ ಮನೆ ಮನೆಗಳಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಪ್ರಧಾನಮಂತ್ರಿ ಸುರಕ್ಷಣಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಕುರಿತು ಜಾಗೃತಿ ಮೂಡಿಸಿ ವಿಮೆ ಮಾಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್‌ಗಳು ಇರುವುದಿಲ್ಲ. ಗ್ರಾಮಾಂತರ ಜನರು ಬ್ಯಾಂಕಿಗೆ ಹೋಗಿ ವ್ಯವಹಾರ ಮಾಡುವುದಕ್ಕಾಗುವುದಿಲ್ಲ. ಪಾಲಿಸಿದಾರರು ಕಾಯಿಲೆಯಿಂದ ಅಥವಾ ವಯೋಸಹಯವಾಗಿ ಮೃತಪಟ್ಟರೂ ಸಹಪಾಲಿಸಿದಾರರಿಗೆ 2 ಲಕ್ಷ ರು. ವರೆಗೆ ವಿಮೆ ಹಣ ಸಿಗುತ್ತದೆ ಎಂದು ಅರಿವು ಮೂಡಿಸಿ ಖಾತೆ ತೆರೆಯುವುದರ ಕುರಿತು ಸರಿಯಾದ ಮಾಹಿತಿ ನೀಡಬೇಕು ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಂಚೆ ನಿರೀಕ್ಷಕ ಸಿ.ಬಿ. ಕಾಂಬಳೆ ಮಾತನಾಡಿ, ಕೇಂದ್ರ ಸರ್ಕಾರ ಅಂಚೆ ಇಲಾಖೆಯಲ್ಲಿ ಹಲವಾರು ಯೋಜನೆ ಜಾರಿಗೆ ತಂದಿದೆ. ಖಾಸಗಿ ನೌಕರರು, ರೈತರು, ವ್ಯಾಪಾರಸ್ಥರು ಸೇರಿದಂತೆ ಪ್ರತಿಯೊಬ್ಬ ಗೃಹಿಣಿಯೂ ಸಹ ಈ ಯೋಜನೆಗಳ ಲಾಭ ಪಡೆಯಬಹುದು. ಬ್ಯಾಂಕಿಗೆ ಹೋಗುವ ಅವಶ್ಯಕತೆಯಿಲ್ಲ. ನಿಮ್ಮ ಮನೆಗೆ ಅಂಚೆ ಇಲಾಖೆ ನೌಕರರು ಬರುವರು. ಒಂದು ಆಧಾರ್‌ಕಾರ್ಡ್ ಕೊಟ್ಟು ಉಳಿತಾಯ ಖಾತೆ ತೆರೆಯಬಹುದು. ಇದಕ್ಕೆ ಯಾವುದೇ ಹಣ ಠೇವಣಿ ಇಡುವ ಅವಶ್ಯಕತೆಯೂ ಇಲ್ಲ ಎಂದರು.
ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ ವರ್ಷಕ್ಕೆ ಕೇವಲ 12 ರು. ಪಾವತಿಬೇಕು. 2 ಲಕ್ಷ ರು.ವರೆಗೆ ದುರ್ಘಟನಾ ವಿಮಾ ಸೌಲಭ್ಯವಿದೆ. 17 ರಿಂದ 70 ವರ್ಷದ ವರೆಗಿನ ಅಂಚೆ ಇಲಾಖೆ ಖಾತೆದಾರರು ಮಾಡಿಸಬಹುದು. ನಿಮ್ಮ ಅಕೌಂಟ್‌ನಿಂದ ಹಣ ವರ್ಗಾವಣೆ ಸೇರಿದಂತೆ, ವಿದ್ಯುತ್, ಫೊನ್ ಹಾಗೂ ಟಿವಿ ರಿಚಾರ್ಜ್ ಸಹ ಮಾಡಿಸಬಹುದು ಎಂದು ವಿವರಿಸಿದರು.
ಅಟಲ್ ಪಿಂಚಣಿ ಯೋಜನೆಯಲ್ಲಿ 18 ರಿಂದ 40 ವಯೋಮಾನದವರು ಮಾಸಿಕ 42 ರು.ಯಿಂದ 210 ರು.ವರೆಗೆ ಪಾವತಿಸುವವರು 60 ವರ್ಷದ ನಂತರ 1 ಸಾವಿರದಿಂದ 5 ಸಾವಿರ ರು. ವರೆಗೆ ಪಿಂಚಣಿ ಸೌಲಭ್ಯ ಪಡೆಯಬಹುದು. ಚಂದಾದಾರರು ನಿಧನದ ನಂತರಪತಿ, ಪತ್ನಿ ಮಾಸಿಕ ಪಿಂಚಣಿ ಪಡೆಯುವರು ಎಂದು ತಿಳಿಸಿದರು.
ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆಯೋಜನೆಯಲ್ಲಿ ವಾರ್ಷಿಕವಾಗಿ 330 ರು. ವಿಮೆ ಮಾಡಿಸಬಹುದು. 18 ರಿಂದ 50 ವಯೋಮಾನದ ಉಳಿತಾಯ ಖಾತೆದಾರರು ಮಾಡಿಸಿದರೆ ವಿಮೆಯ ಹಣ ಕುಟುಂಬದ ಪರಿವಾರಕ್ಕೂ ದೊರೆಯುತ್ತದೆ ಎಂದರು.ಕಲಬುರಗಿ ಅಂಚೆ ಇಲಾಖೆ ವತಿಯಿಂದ ಕಲಬುರಗಿ ಜಿಲ್ಲೆಯಲ್ಲಿ 22 ಹಳ್ಳಿಗಳನ್ನು ಪ್ರಧಾನಮಂತ್ರಿ ಸಾಕ್ಷಮಗ್ರಾಮವನ್ನಾಗಿ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 42 ಸಾವಿರ ಖಾತೆ ಮಾಡಿಸಲಾಗಿದೆ. ಮುಂದೆ ಜನರಲ್ಲಿಇನ್ನೂ ಹೆಚ್ಚು ಜಾಗೃತಿ ಮೂಡಿಸಿ ಹೆಚ್ಚೆಚ್ಚು ಉಳಿತಾಯಖಾತೆ ತೆರೆಯಿಸಿ ವಿಮೆಯ ಬಗ್ಗೆ ಜಾಗೃತಿಮೂಡಿಸಲಾಗುವುದು ಎಂದು ಹೇಳಿದರು.ಸಹಾಯಕ ಅಂಚೆ ಅಧೀಕ್ಷಕ ಆರ್.ಎಸ್. ಶಿವಾನಂದ,ವಿ.ಎಲ್. ಚಿತಕೋಟೆ, ಅಂಚೆ ನಿರೀಕ್ಷಕ ಶಿವಾನಂದರಬಕವಿ, ಎಂ. ರಾಘವೇಂದ್ರ ರೆಡ್ಡಿ ಇದ್ದರು.