ನಾಡ ಪಿಸ್ತೂಲ್, ಜೀವಂತ ಗುಂಡು ವಶ| ಆರೋಪಿಯನ್ನು ಬಂಧಿಸಿದ ಪೊಲೀಸರು| ಖಚಿತ ಮಾಹಿತೆ ಮೇರೆಗೆ ದಾಳಿ|
ಅಫಜಲ್ಪುರ[ಅ.23]: ಎರಡು ವಾರದ ಹಿಂದಷ್ಟೇ ಅಕ್ರಮ ಬಂದೂಕು ಜಪ್ತಿ ಮಾಡಿದ್ದ ಅಫಜಲ್ಪುರ ಪೊಲೀಸರು ಇದೀಗ ಮತ್ತೆ ಅಂತಹುದೇ ಪ್ರಕರಣ ಒಂದನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಮಾಶಾಳ ಬೋರುಟಿ ರಸ್ತೆಯ ಮಧ್ಯದಲ್ಲಿರುವ ಕಂಕರ ಮಷೀನ ಹತ್ತಿರ ಅಕ್ರಮವಾಗಿ ನಾಡ ಪಿಸ್ತೂಲ ಹಾಗೂ ಒಂದು ಜೀವಂತ ಗುಂಡು ಇಟ್ಟುಕೊಂಡಿದ್ದ ಕರಜಗಿ ಗ್ರಾಮದ ಲಾರಿ ಚಾಲಕ ಈರಪ್ಪ ಗಂಗಾಧರ ನಾಯ್ಕೋಡಿ (27) ಎಂಬಾತನನ್ನುಅಫಜಲ್ಪುರ ಪೊಲೀಸರು ಬಂಧಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎಸ್‌ಪಿ ವಿನಾಯಕ ಪಾಟೀಲ, ಎಎಸ್‌ಪಿ ಪ್ರಸನ್ನ ಕುಮಾರ ದೇಸಾಯಿ, ಡಿವೈಎಸ್‌ಪಿ ತುಳಜಪ್ಪ ಸುಲ್ಪಿ, ಸಿಪಿಐ ಮಹಾದೇವ ಪಂಚಮುಖಿ ಮಾರ್ಗದರ್ಶನದಲ್ಲಿಅಫಜಲ್ಪುರ ಪಿಎಸ್‌ಐ ಮಂಜುನಾಥ ಹೂಗಾರ ಅವರು ಮಾಶಾಳ ಬೋರುಟಿ ರಸ್ತೆ ಮಧ್ಯೆ ಕಂಕರ ಮಷೀನ ಹತ್ತಿರ ಆರೋಪಿ ಇರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಶರಣು ಬೆಂಗಳೂರ, ಚಂದ್ರಕಾಂತ ದೊಡ್ಡಮನಿ, ಸುರೇಶ ಕಾಮಗೊಂಡ, ಗುರು ಪಾಟೀಲ್, ಶಂಕರ, ರಾಹುತ ಪಾಲ್ಗೊಂಡಿದ್ದರು. ಬಂಧಿತನಿಂದ ಒಂದು ನಾಡ ಪಿಸ್ತೂಲ ಒಂದು ಜೀವಂತಗುಂಡು ವಶಕ್ಕೆ ಪಡೆಯಲಾಗಿದೆ.