
ಕಲಬುರಗಿ(ಅ.15): ಇಂದು ನಗರದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಎಡಪಂಥೀಯಧಾರೆಯ ಹೋರಾಟಗಾರ ಕನ್ಹಯ್ಯ ಕುಮಾರ್ ಅವರ ಉಪನ್ಯಾಸ ದಿಢೀರ್ ರದ್ದಾಗಿದೆ.
ವಿಶ್ವವಿದ್ಯಾಲಯದ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಕಂಡ, ಆಧುನಿಕ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ದ ಕುರಿತು ಕನ್ಹಯ್ಯ ಕುಮಾರ್ ಅವರು ಉಪನ್ಯಾಸ ನೀಡಬೇಕಿತ್ತು. ಗುಲಬರ್ಗಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ವಿಭಾಗ ಮತ್ತು ಸಂಸೋಧನಾ ವಿದ್ಯಾರ್ಥಿಗಳ ಒಕ್ಕೂಟ ಉಪನ್ಯಾಸವನ್ನು ಆಯೋಜಿಸಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಿನ್ನೆಯಷ್ಟೇ ಗುಲಬರ್ಗಾ ವಿಶ್ವವಿದ್ಯಾಲಯ ಷರತ್ತು ಬದ್ದ ಅನುಮತಿ ನೀಡಿತ್ತು, ಆದರೆ, ಕಳೆದ ಮಧ್ಯರಾತ್ರಿ ಏಕಾಏಕಿ ಅನುಮತಿ ನಿರಾಕರಿಸಿದೆ. ಕನ್ಹಯ್ಯ ಕುಮಾರ್ ಅವರ ಭಾಷಣದ ಬಗ್ಗೆ ಶ್ರೀರಾಮ ಸೇನೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು, ಪ್ರತಿಭಟನೆ ನಡೆಸಲು ಶ್ರೀರಾಮಸೇನೆ ಎಂದು ಸಜ್ಜಾಗಿತ್ತು, ಆದರೆ ವಿವಾದ ಅರಿತುಕೊಂಡ ಗುಲಬರ್ಗಾ ವಿಶ್ವವಿದ್ಯಾಲಯ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ.
ಕನ್ಹಯ್ಯ ಕುಮಾರ್ ಅವರ ಉಪನ್ಯಾಸ ದಿಢೀರ್ ರದ್ದಾದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸೆ.144 ಜಾರಿ ಮಾಡಲಾಗಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ರದ್ದು ಮಾಡಿದ್ದರಿಂದ ಕಾರ್ಯಕ್ರಮದ ಆಯೋಜಕರು ನಗರದ ವಿಶ್ವೇಶ್ವರಯ್ಯ ಹಾಲ್ ನಲ್ಲಿ ಉಪನದಯಾಸ ನಡೆಸಲು ತೀರ್ಮಾಣಿಸಿದ್ದಾರೆ. ಇನ್ನು ಕನ್ಹಯ್ಯ ಕುಮಾರ್ ಅವರ ಉಪನ್ಯಾಸ ದಿಢೀರ್ ರದ್ದು ಮಾಡಿದ್ದರಿಂದ ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಖಂಡಿಸಿದ್ದಾರೆ.