ಕಲಬುರಗಿಯಲ್ಲಿ ಕನ್ನಡ ಹಬ್ಬ : ಸಾಹಿತ್ಯ ಸಮ್ಮೇಳನಕ್ಕೆ ಡೇಟ್ ಫಿಕ್ಸ್

By Kannadaprabha News  |  First Published Nov 13, 2019, 10:20 AM IST

ಮುಖ್ಯಮಂತ್ರಿ ಗೋವಿಂದ ಕಾರಜೋಳ ಜತೆ ಸಭೆ ನಡೆಸಿದ ಬಳಿಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಅವರು ಸಮ್ಮೇಳನದ ದಿನಾಂಕ ಹಾಗೂ ಸ್ಥಳ ಪ್ರಕಟಿಸಿದ್ದಾರೆ.


ಕಲಬುರಗಿ [ನ.13] : 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಬಿಸಿಲ ನಗರಿ ಕಲಬುರಗಿಯಲ್ಲಿ ನಡೆಯಲಿದ್ದು, 2020ರ ಫೆ.5ರಿಂದ 7ರ ತನಕ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ಅಕ್ಷರ ಜಾತ್ರೆ ನಡೆಸಲು ತೀರ್ಮಾನಿಸಲಾಗಿದೆ.

ಸಮ್ಮೇಳನದ ಕುರಿತಂತೆ ಪೂರ್ವ ಸಿದ್ಧತೆಗಾಗಿ ಕಲಬುರಗಿಯಲ್ಲಿ ಜಿಲ್ಲಾಡಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜತೆ ಸಭೆ ನಡೆಸಿದ ಬಳಿಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಅವರು ಸಮ್ಮೇಳನದ ದಿನಾಂಕ ಹಾಗೂ ಸ್ಥಳ ಪ್ರಕಟಿಸಿದರು. 

Tap to resize

Latest Videos

ಈ ಸಂಬಂಧ ಸುದ್ದಿಗಾರರ ಜತೆ ಮಾತನಾಡಿದ ಮನು ಬಳಿಗಾರ್, ಸಮ್ಮೇಳನ ನಡೆಸಲು ಕಲಬುರಗಿ ನಗರದಲ್ಲಿರುವ ಗುಲ್ಬರ್ಗ ವಿವಿ ಜ್ಞಾನಗಂಗೆ ಅಂಗಳ ಪ್ರಶಸ್ತವಾಗಿದೆ. ವಿವಿಯ ಹೊರಾಂಗಣ ಕ್ರೀಡಾಂಗಣದ ವಿಶಾಲ ಪ್ರದೇಶ ದಲ್ಲಿ ಸಮ್ಮೇಳನದ ಪ್ರಧಾನ ವೇದಿಕೆ ನಿರ್ಮಿಸಲಾಗುವುದು. ಜತೆಗೆ ಮಹಾತ್ಮಾ ಗಾಂಧಿ ಸಭಾಂಗಣ ಹಾಗೂ ಅಂಬೇಡ್ಕರ್ ಸಭಾಂಗಣದಲ್ಲಿ ಸಮಾನಾಂತರ ವೇದಿಕೆ ನಿರ್ಮಿಸಲಾಗುವುದು. ಸಮ್ಮೇಳನದ ಅಧ್ಯಕ್ಷರ ಆಯ್ಕೆಯಾಗಾಗಿ ಡಿಸೆಂಬರ್ ತಿಂಗಳಲ್ಲಿ ಕಾರ್ಯಕಾರಿಣಿ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು. 

ಊಟೋಪಚಾರ, ಅತಿಥಿಗಳು ಉಳಿದುಕೊಳ್ಳಲು, ಮಳಿಗೆ ಸ್ಥಾಪನೆಗೆ ಸಾಕಷ್ಟು ಸ್ಥಳಾವಕಾಶವಿದೆ. ಉತ್ತಮ ಸಾರಿಗೆ ಸೌಕರ್ಯವಿರುವ ಕಾರಣ ಗುಲ್ಬರ್ಗ ವಿವಿ ಅಂಗಳದಲ್ಲೇ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು. ವಿವಿ 800 ಎಕರೆ ವಿಶಾಲ ಭೂಪ್ರದೇಶ ಹೊಂದಿದೆ. ವಿವಿ ಮುಂಭಾಗದಲ್ಲಿ ವಿಶಾಲ ಮೈದಾನವಿದ್ದು, ಇಲ್ಲಿ ಊಟದ ವ್ಯವಸ್ಥೆ ಮಾಡುವ ಚಿಂತನೆ ಇದೆ. ಊಟಕ್ಕಾಗಿ 150 ಕೌಂಟರ್ ತೆರಯುವಷ್ಟು
ಸ್ಥಳವಿದ್ದು, 750 ಮಳಿಗೆ ತೆರೆಯಬಹುದಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೈಸರ್ಗಿಕ ವಿಕೋಪ ಪರಿಹಾರ ಗೋಷ್ಠಿ: ಉತ್ತರ ಕರ್ನಾಟಕವನ್ನು ಕಾಡಿದ ಪ್ರವಾಹದಂತಹ ನೈಸರ್ಗಿಕ ವಿಕೋಪ, ಸಮಸ್ಯೆ-ಪರಿಹಾರ, ಕಲ್ಯಾಣ ಕರ್ನಾಟಕದ ಪ್ರಗತಿ-ವಿಗತಿಗಳ ವಿಚಾರದ ಮೇಲೆ ಬೆಳಕು ಚೆಲ್ಲುವಂತಹ ಗೋಷ್ಠಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. 

ಪ್ರತಿಭಟನೆ: ನೆರೆ ಸಂತ್ರಸ್ತರು ನರಳುತ್ತಿರುವಾಗ ಸಾಹಿತ್ಯ ಸಮ್ಮೇಳನ ಬೇಕೆ? ಈ ವರ್ಷ ಸಮ್ಮೇಳನ ಸಂಘಟಿಸದೆ ಮುಂದೂಡಿರಿ’ ಎಂದು ಕನ್ನಡಪರ ಸಂಘಟನೆಗಳ ಹೋರಾಟಗಾರರು ಪ್ರತಿಭಟನೆ ನಡೆಸಿದರು.

click me!