ಭಾರತ ಹಾಗೂ ಪಾಕ್ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರಿಂದ ಯುದ್ಧದ ಕಾರ್ಮೋಡ ಆವರಿಸಿದ್ದು, ತಮ್ಮ ಅಧಿಕಾರಿಗಳ ಸೂಚನೆ ಮೇರೆಗೆ ರಜೆಗೆ ಬಂದಿದ್ದ ಕರ್ನಾಟಕದ ಯೋಧರು ದಿಢೀರ್ ಕರ್ತವ್ಯಕ್ಕೆ ಹೊರಟಿದ್ದಾರೆ.
ಕಲಬುರಗಿ, (ಫೆ.28): ಗಡಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಯುದ್ದದ ಕಾರ್ಮೋಡ ಆವರಿಸಿರುವ ಹಿನ್ನೆಲೆಯಲ್ಲಿ ರಜೆಯ ಮೇಲೆ ತೆರಳಿದ್ದ ತನ್ನ ಯೋಧರಿಗೆಲ್ಲ ಭಾರತೀಯ ಸೇನೆ ಬುಲಾವ್ ನೀಡಿದೆ.
ಇದ್ರಿಂದ ರಜೆಗೆ ಆಗಮಿಸಿದ್ದ ಕರ್ನಾಟಕ ವಿವಿಧ ಜಿಲ್ಲೆಯ ಯೋಧರು ತಮ್ಮ ಪ್ರಾಣವನ್ನ ಲೆಕ್ಕಿಸಲದೇ ಜೋಶ್‌ನಿಂದಲೇ ಕರ್ತವ್ಯಕ್ಕೆ ತೆರಳುತ್ತಿದ್ದಾರೆ. ಕುಟುಂಬಸ್ಥರು ಆರತಿ ಬೆಳಗಿ ಖುಷಿಯಿಂದಲೇ ಬೀಳ್ಕೊಡುತ್ತಿದ್ದಾರೆ.
ದೇಶದಾದ್ಯಂತ ಹೈ ಅಲರ್ಟ್ ಘೋಷಿಸಿದ ಸರ್ಕಾರ
25 ದಿನಗಳ ರಜೆಯ ಮೇಲೆ ಊರಿಗೆ ಬಂದಿದ್ದ ಕಲಬುರಗಿ ಯೋಧ ಮಹಾದೇವ ಕುಂಬಾರ, ನಿನ್ನೆಯಷ್ಟೇ (ಗುರುವಾರ) ಸೇನಾಧಿಕಾರಿಗಳ ಬುಲಾವ್ ಮೆರೆಗೆ ಕರ್ತವ್ಯಕ್ಕೆ ತೆರಳಿದ್ದರು.
ಇದೀಗ ಇದೇ ಕಲಬುರಗಿಯ ಇನ್ನೊಬ್ಬ ಯೋಧನಿಗೆ ಬುಲಾವ್ ಬಂದಿದ್ದು, ಭಾರತದ ವಾಯುಸೇನೆಯಲ್ಲಿ ಕೆಲಸ ನಿರ್ವಹಿಸುವ ಫಾರುಕ್ ಹುಸೇನ್ ಕೊತ್ವಾಲ್ ಎನ್ನುವ ಯೋಧ ತಮ್ಮ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ತೆರಳಿದರು.
ಫಾರುಕ್, ಕಲಬುರಗಿ ನಗರದ ಮಿಜಬಾ ನಗರದ ನಿವಾಸಿಯಾಗಿದ್ದು, ಒಂದು ವಾರದ ರಜೆ ಕಡಿತಗೊಳಿಸಿ ಕೆಲಸಕ್ಕೆ ಹೊರಟರು. ಅಸ್ಸಾಂ ಗಡಿಬಾಗದಲ್ಲಿನ ವಾಯುನೆಲೆಯಲ್ಲಿ Rank ಕಾರ್ಪಲ್ ಆಗಿದ್ದಾರೆ.
ಕಳೆದ ಹನ್ನೊಂದು ವರ್ಷದಿಂದ ವಾಯು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ದೇಶರಕ್ಷಣೆಗೆ ತೆರಳಿದ್ದು, ಕುಟುಂಬದವರು ನೋವು ಎದೆಯಲ್ಲಿಟ್ಡುಕೊಂಡು ಹೆಮ್ಮೆಯಿಂದ ಕಳುಹಿಸಿಕೊಟ್ಟರು.