ಶಹಾಬಾದನಲ್ಲಿ ಡೆಂಘೀ ಭೀತಿ: ತತ್ತರಿಸಿದ ಜನತೆ

By Web Desk  |  First Published Oct 24, 2019, 12:11 PM IST

ನಗರದಲ್ಲಿ ಕಳೆದ ಮೂರು ವಾರಗಳಿಂದ ಡೆಂಘೀ ಪ್ರಕರಣ ಉಲ್ಬಣ| ನಗರದ ಡಾ.ವಿನೋದ ಕೌಲಗಿ ಆಸ್ಪತ್ರೆಯಲ್ಲಿಯೇ 15 ಕ್ಕೂ ಹೆಚ್ಚು ರೋಗಿಗಳು ದಾಖಲು|  ಆರೋಗ್ಯ ಇಲಾಖೆ ಡೆಂಘೀ ಪ್ರಕರಣಗಳ ಬಗ್ಗೆ ನಿರ್ಲಕ್ಷ| ಡೆಂಘೀ ನಿಯಂತ್ರಣ ಕುರಿತು ಮುಂಜಾಗ್ರತೆ ಕ್ರಮ ಕೈಗೊಳ್ಳುವಲ್ಲಿ ನಗರಸಭೆ, ಆರೋಗ್ಯ ಇಲಾಖೆ ಸಮನ್ವಯದ ಕೊರತೆ ಇಲ್ಲಿ ಎದ್ದು ಕಾಣುತ್ತದೆ| 


ಶಹಾಬಾದ[ಅ.24]: ನಗರದಲ್ಲಿ ಕಳೆದ ಮೂರು ವಾರಗಳಿಂದ ಡೆಂಘೀ ಪ್ರಕರಣ ಉಲ್ಬಣಿಸಿದ್ದು, ಸುಮಾರು 25 ಕ್ಕೂಹೆಚ್ಚು ಪ್ರಕರಣದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ನಗರದ ರಾಮಾ ಮೊಹಲ್ಲಾ, ಶರಣ ನಗರ, ಮಾರುಕಟ್ಟೆ, ಮಿಲತ್ ನಗರ ಪ್ರದೇಶದಲ್ಲಿ ನಗರಸಭೆ ಕಚೇರಿ ಸುತ್ತಲಿನ ಬಡಾವಣೆಗಳಲ್ಲಿ ಸಣ್ಣ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವಯಸ್ಸಿನವರಲ್ಲಿ ಡೆಂಘೀ ಕಾಣಿಸಿಕೊಂಡಿದ್ದು,ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.

ಈಗಾಗಲೇ ಡೆಂಘೀ ಪೀಡಿತರು ಸರಕಾರಿ ಆಸ್ಪತ್ರೆಯತ್ತ ಮುಖ ಮಾಡದೆ ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಹೊನಗುಂಟಾ ರಸ್ತೆಯ ಡಾ.ವಿನೋದ ಕೌಲಗಿ ಆಸ್ಪತ್ರೆಯಲ್ಲಿಯೆ 15 ಕ್ಕೂ ಹೆಚ್ಚು ರೋಗಿಗಳು ದಾಖಲಾಗಿದ್ದಾರೆ. ಇನ್ನೂ ಆರೋಗ್ಯ ಇಲಾಖೆಯೂ ಸಹ ಡೆಂಘೀ ಪ್ರಕರಣಗಳ ಬಗ್ಗೆ ನಿರ್ಲಕ್ಷವಹಿಸಿದ್ದು, ನಗರದಲ್ಲಿ ಡೆಂಘೀ ಹರಡುತ್ತಿರುವುದು ಅರೋಗ್ಯ ಇಲಾಖೆಗೆ ಮಾಹಿತಿ ಇದೆಯೋ ಇಲ್ಲವೋ ಎನ್ನುವಂತಾಗಿದ್ದು, ಡೆಂಘೀ ನಿಯಂತ್ರಣ ಕುರಿತು ಮುಂಜಾಗ್ರತೆ ಕ್ರಮ ಕೈಗೊಳ್ಳುವಲ್ಲಿ ನಗರಸಭೆ, ಆರೋಗ್ಯ ಇಲಾಖೆ ಸಮನ್ವಯದ ಕೊರತೆ ಇಲ್ಲಿ ಎದ್ದು ಕಾಣುತ್ತದೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೂಡಲೇ ನಗರಸಭೆ, ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ನಗರದ ವಿವಿಧ ಬಡಾವಣೆಯಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಡೆಂಘೀ ಕುರಿತು ಜನರಿಗೆ ತಿಳುವಳಿಕೆ, ಮುಂಜಾಗ್ರತಾ ಕ್ರಮ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕಾಗಿದೆ. ಈ ಕುರಿತು ಶಾಸಕ ಬಸವರಾಜ ಮತ್ತಿಮುಡ ನಗರಸಭೆ, ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿ, ಸಮರೋಪಾದಿಯಲ್ಲಿಕ್ರಮ ಕೈಗೊಳ್ಳುವದು ಅವಶ್ಯಕವಾಗಿದೆ. 

click me!