ರಾಜ್ಯದಲ್ಲಿ ವರ್ಕ್ ಫ್ರಂ ಹೋಮ್‌ ಕಡ್ಡಾಯ ..?

By Kannadaprabha NewsFirst Published Apr 15, 2021, 7:27 AM IST
Highlights

 ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‘ವರ್ಕ್ ಫ್ರಂ ಹೋಮ್‌’ ಕಡ್ಡಾಯ ಮಾಡುವ ಚಿಂತನೆ ನಡೆಯುತ್ತಿದೆ, 

 ಬೆಂಗಳೂರು (ಏ.15):  ‘ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‘ವರ್ಕ್ ಫ್ರಂ ಹೋಮ್‌’ ಕಡ್ಡಾಯ ಮಾಡುವ ಚಿಂತನೆ ನಡೆಯುತ್ತಿದೆ, ಜೊತೆಗೆ ರಾತ್ರಿ ಕರ್ಪ್ಯೂ ಸಮಯ ಬದಲಾವಣೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಬಾರಿ ವರ್ಕ್ ಫ್ರಂ ಹೋಮ್‌ ಮಾಡಿದ್ದರಿಂದ ಹೆಚ್ಚಿನ ಅನುಕೂಲ ಆಗಿತ್ತು. ಹಾಗಾಗಿ ಪುನಃ ಈ ವ್ಯವಸ್ಥೆ ಜಾರಿ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದರು.

‘ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಹೊರತು ಪಡಿಸಿ ಬೇರೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಯಾರ ರೀತಿಯ ಕ್ರಮ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದ್ದು ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ತೀರ್ಮಾನಕ್ಕೆ ಬರಲಾಗುವುದು. ಮದುವೆ ಸೇರಿದಂತೆ ಜನ ಸೇರುವ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು. ಜನರೇ ಸ್ವಯಂ ಆಗಿ ನಿರ್ಬಂಧ ಹಾಕಿಕೊಳ್ಳಬೇಕು. ಜನತೆ ಜನತಾ ಕಫä್ರ್ಯಗೆ ಕೈಜೋಡಿಸಬೇಕು’ ಎಂದು ಸಚಿವರು ಮನವಿ ಮಾಡಿದರು.

ಲಸಿಕೆ, ರೆಮ್ಡೆಸಿವಿರ್‌ ಕೊರತೆ ಇಲ್ಲ:  ‘ರಾಜ್ಯದಲ್ಲಿ ಕೋವಿಡ್‌ ಲಸಿಕೆಯ ಕೊರತೆಯಿಲ್ಲ. ರೆಮ್‌ಡೆಸಿವರ್‌ ಉತ್ಪಾದಿಸುವ ಕಂಪೆನಿಗಳು ನಮ್ಮ ರಾಜ್ಯದಲ್ಲೇ ಇವೆ. ಅಗತ್ಯಕ್ಕೆ ಅನುಗುಣವಾಗಿ ಔಷಧಿ, ಚಿಕಿತ್ಸೆ ನೀಡುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡಲಿದೆ. ಔಷಧಿ ಮತ್ತು ಲಸಿಕೆಯ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ. ಐಸಿಯು ಬೆಡ್‌ ಭರ್ತಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಜನ ಸೇರಿರುವುದರಿಂದ ಅಲ್ಲಿ ಹಾಸಿಗೆ ಭರ್ತಿಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ ಖಾಲಿ ಇದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!