ಐಎಸ್‌ಎಲ್‌: ಮುಂಬೈ ಸಿಟಿ-ಜೆಮ್ಶಡ್‌ಪುರ ಪಂದ್ಯ ಡ್ರಾ

Kannadaprabha News   | Asianet News
Published : Dec 15, 2020, 08:28 AM IST
ಐಎಸ್‌ಎಲ್‌: ಮುಂಬೈ ಸಿಟಿ-ಜೆಮ್ಶಡ್‌ಪುರ ಪಂದ್ಯ ಡ್ರಾ

ಸಾರಾಂಶ

ಮುಂಬೈ ಸಿಟಿ ಎಫ್‌ಸಿ ಹಾಗೂ  ಜೆಮ್ಶಡ್‌ಪುರ ಎಫ್‌ಸಿ ನಡುವಿನ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬಂಬೋಲಿಮ್(ಡಿ.15): ಇಂಡಿಯನ್ ಸೂಪರ್ ಲೀಗ್ 7ನೇ ಆವೃತ್ತಿಯಲ್ಲಿ ಸೋಮವಾರ ಇಲ್ಲಿ ನಡೆದ ಮುಂಬೈ ಸಿಟಿ ಎಫ್‌ಸಿ ಹಾಗೂ ಜೆಮ್ಶಡ್‌ಪುರ ಎಫ್‌ಸಿ ನಡುವಣ ಪಂದ್ಯ 1-1 ಗೋಲುಗಳಿಂದ ಡ್ರಾನಲ್ಲಿ ಅಂತ್ಯವಾಗಿದೆ. 

ಐಎಸ್‌ಎಲ್‌ ಟೂರ್ನಿಯ 28ನೇ ಪಂದ್ಯ ಇದಾಗಿತ್ತು. ಪಂದ್ಯ ಡ್ರಾನಲ್ಲಿ ಅಂತ್ಯವಾದರೂ ಮುಂಬೈ ಸಿಟಿ ಎಫ್‌ಸಿ 13 ಅಂಕಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜೆಮ್ಶಡ್‌ಪುರ ಎಫ್‌ಸಿ ಟೂರ್ನಿಯಲ್ಲಿ ನಾಲ್ಕನೇ ಡ್ರಾ ಸಾಧಿಸಿದ್ದು, 7 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಕೇರಳ ವಿರುದ್ಧ ಗೋಲಿನ ಸುರಿಮಳೆ ಸುರಿಸಿದ ಬೆಂಗಳೂರು FC!

ಪಂದ್ಯ ಆರಂಭವಾದ ಮೊದಲಾರ್ಧದಲ್ಲಿ ಉಭಯ ತಂಡಗಳ ಆಟಗರರ ನಡುವೆ ಉತ್ತಮ ಪೈಪೋಟಿ ಏರ್ಪಟ್ಟಿತ್ತು. ಜೆಮ್ಶೆಡ್ ಪುರ ತಂಡದ ವಲಾಸ್ಕಿಸ್ (9ನೇ ನಿ.) ಗೋಲು ಬಾರಿಸಿ ಖಾತೆ ತೆರೆದರು. ಇದಾಗಿ 6 ನಿಮಿಷಗಳಲ್ಲಿ ಮುಂಬೈನ ಒಬೆಚೆ (15ನೇ ನಿ.) ಜೆಮ್ಶೆಡ್ ಪುರ ಗೋಲುಗಳಿಸುವಲ್ಲಿ ಸಫಲರಾದರು. ಮೊದಲಾರ್ಧದ ಅಂತ್ಯಕ್ಕೆ ಎರಡೂ ತಂಡಗಳು ತಲಾ 1 ಗೋಲಿನಿಂದ ಸಮಬಲ ಸಾಧಿಸಿದ್ದವು. 

ದ್ವಿತೀಯಾರ್ಧದ ಆಟದಲ್ಲಿ ಉಭಯ ತಂಡಗಳ ಆಟಗಾರರಿಂದ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಅಂತಿಮವಾಗಿ ಇದೇ ಅಂತರ ಕಾಯ್ದುಕೊಂಡ ಎರಡೂ ತಂಡಗಳು ಡ್ರಾಗೆ ತೃಪ್ತಿಪಟ್ಟವು. 

ಇಂದು: ಹೈದ್ರಾಬಾದ್ ಎಫ್‌ಸಿ - ಎಸ್‌ಸಿ ಈಸ್ಟ್ ಬೆಂಗಾಲ್ 
ಸ್ಥಳ: ತಿಲಕ್ ಮೈದಾನ, 
ಆರಂಭ: ರಾತ್ರಿ 7.30ಕ್ಕೆ.
 

PREV
click me!

Recommended Stories

ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!
ಡೈಮಂಡ್‌ ಲೀಗ್ ಟ್ರೋಫಿ ಗೆಲ್ತಾರಾ ನೀರಜ್‌ ಚೋಪ್ರಾ, ಅವಿನಾಶ್ ಸಾಬ್ಳೆ?