ಮಹಿಳಾ IPL ಫೈನಲ್: ಸೂಪರ್‌ನೊವಾಸ್‌ಗೆ ಸುಲಭ ಗುರಿ ನೀಡಿದ ಟ್ರೈಲ್‌ಬ್ಲೇಜರ್ಸ್

Published : Nov 09, 2020, 09:10 PM IST
ಮಹಿಳಾ IPL ಫೈನಲ್: ಸೂಪರ್‌ನೊವಾಸ್‌ಗೆ ಸುಲಭ ಗುರಿ ನೀಡಿದ ಟ್ರೈಲ್‌ಬ್ಲೇಜರ್ಸ್

ಸಾರಾಂಶ

ಸೂಪರ್‌ನೋವಾಸ್‌ಗೆ ಸುಲಭ ಟಾರ್ಗೆಟ್ ಟ್ರೈಲ್‌ಬ್ಲೇಜರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ನೋವಾಸ್

ಶಾರ್ಜಾ(ನ.09): ಮಹಿಳಾ ಐಪಿಎಲ್ ಟಿ20 ಚಾಲೆಂಜರ್ಸ್ ಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದೆ. ಸೂಪರ್‌ನೊವಾಸ್ ವಿರುದ್ಧ ದಿಟ್ಟ ಹೋರಾಟ ನೀಡಿದ ಟ್ರೈಲ್‌ಬ್ಲೇಜರ್ಸ್ 8 ವಿಕೆಟ್ ನಷ್ಟಕ್ಕೆ 118 ರನ್  ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟ್ರೈಲ್‌ಬ್ಲೇಜರ್ಸ್ ಉತ್ತಮ ಆರಂಭ ಪಡೆಯಿತು. ಡೆನಾಂಡ್ರ ಡೊಟ್ಟಿನ್ 20 ರನ್ ಸಿಡಿಸಿದರೆ, ಇತ್ತ ನಾಯಕಿ ಸ್ಮೃತಿ ಮಂದನಾ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಮಂದನಾ 68 ರನ್ ಕಾಣಿಕೆ ನೀಡಿದರು. ಆರಂಭಿಕರ ವಿಕೆಟ್ ಪತನದ ಬಳಿಕ ಟ್ರೈಲ್‌ಬ್ಲೇಜರ್ಸ್ ಕುಸಿತ ಕಂಡಿತು.

ರಿಚಾ ಘೋಷ್, ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್ ಅಬ್ಬರಿಸಲಿಲ್ಲ. ರಾಧಾ ಯಾದವ್ ದಾಳಿಗೆ ಟ್ರೈಲ್‌ಬ್ಲೇಜರ್ಸ್ ತತ್ತರಿಸಿತು. 5 ವಿಕೆಟ್ ಕಬಳಿಸೋ ಮೂಲಕ ಟ್ರೈಲ್‌ಬ್ಲೇಜರ್ಸ್ ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಅಂತಿಮವಾಗಿ ಟ್ರೈಲ್‌ಬ್ಲೇಜರ್ಸ್ 8 ವಿಕೆಟ್ ನಷ್ಟಕ್ಕೆ 118 ರನ್ ಸಿಡಿಸಿತು. ಸೂಪರ್‌ನೊವಾಸ್ ತಂಡಕ್ಕೆ 119 ರನ್ ಗುರಿ ನೀಡಲಾಗಿದೆ. ಈ ಸುಲಭ ಟಾರ್ಗೆಟ್ ಚೇಸ್ ಮಾಡಿ ಸೂಪರ್‌ನೊವಾಸ್ ಚಾಂಪಿಯನ್ ಆಗುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಆಯೋಜಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್; ಅಭಿಮಾನಿಗಳು ಹೇಳಿದ್ದೇನು?
ಆರ್‌ಸಿಬಿ ಮ್ಯಾಚ್ ಬೆಂಗಳೂರು ಬಿಟ್ ಎಲ್ಲಿಗೂ ಶಿಫ್ಟ್ ಆಗೊಲ್ಲ! ಮಹತ್ವದ ಅಪ್‌ಡೇಟ್ಸ್‌ ಕೊಟ್ಟ ಬೆಂಗಳೂರು ಫ್ರಾಂಚೈಸಿ