
ಮುಂಬೈ(ನ.03) : ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಮಹಿಳಾ IPL ಟೂರ್ನಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಆ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿ ಜಿಯೋ ಮತ್ತು ರಿಲಯನ್ಸ್ ಫೌಂಡೇಷನ್ ಎಜುಕೇಷನ್ ಅಂಡ್ ಸ್ಪೋರ್ಟ್ಸ್ ಫಾರ್ ಆಲ್ ನಿಂದ (RF ESA) ಮುಂಬರುವ ಟಿ20ಗೆ ಪ್ರಾಯೋಜಕತ್ವ ಘೋಷಿಸಿದ್ದಾರೆ.
ನ.04 ರಿಂದ ಮಹಿಳಾ IPL 2020 ಟೂರ್ನಿ; ಶಾರ್ಜಾದಲ್ಲಿ ಮೆಘಾಫೈಟ್!.
ಇದರ ಜತೆಗೆ, ನವೀ ಮುಂಬೈನಲ್ಲಿ ಇರುವ ಜಿಯೋ ಕ್ರಿಕೆಟ್ ಮೈದಾನದಲ್ಲಿ ಮಹಿಳಾ ಕ್ರಿಕೆಟರ್ ಗಳಿಗೆ ಕ್ರಿಕೆಟ್ ಫೆಸಿಲಿಟಿ ಒದಗಿಸುವುದಾಗಿ ಹೇಳಿದ್ದಾರೆ. ಜಿಯೋ ಕ್ರಿಕೆಟ್ ಮೈದಾನದಲ್ಲಿ ರಾಷ್ಟ್ರೀಯ ತಂಡಕ್ಕೆ ಟ್ರಯಲ್, ಶಿಬಿರ ಹಾಗೂ ಸ್ಪರ್ಧಾತ್ಮಕ ಪಂದ್ಯಗಳನ್ನು ವರ್ಷವಿಡೀ ಉಚಿತವಾಗಿ ನಡೆಸಬಹುದು.
ಇನ್ನು ಮುಂಬೈನಲ್ಲಿ ಇರುವ ಸರ್ ಎಚ್.ಎನ್. ರಿಲಯನ್ಸ್ ಫೌಂಡೇಷನ್ ಹಾಸ್ಪಿಟಲ್ ಅಂಡ್ ರೀಸರ್ಚ್ ಸೆಂಟರ್ ನಲ್ಲಿ ದೊರೆಯುವ ಪುನಶ್ಚೇತನ ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳನ್ನು ಮಹಿಳಾ ಕ್ರಿಕೆಟರ್ ಗಳು ಪಡೆಯಬಹುದಾಗಿದೆ.
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿನ ಭಾರತದ ಮೊದಲ ಮಹಿಳೆ ನೀತಾ ಅಂಬಾನಿ. ಭಾರತದ ಯುವಜನ ಅದರಲ್ಲೂ ಯುವತಿಯರಲ್ಲಿ ಹಲವು ಕ್ರೀಡಾ ಸಂಸ್ಕೃತಿ ಬೆಳೆಯಬೇಕು ಎಂದು ಶ್ರಮಿಸುತ್ತಿದ್ದಾರೆ. ಯುವ ಪ್ರತಿಭೆಗಳನ್ನು ಹೆಕ್ಕಿ ತೆಗೆಯುತ್ತಿದ್ದಾರೆ. ಎಲ್ಲರಿಗೂ ಕ್ರೀಡೆ ಸೌಲಭ್ಯ ದೊರೆಯುವಂತಾಗಬೇಕು ಎಂಬ ಧ್ಯೇಯ ಹೊಂದಿದ್ದಾರೆ.
ಎಜುಕೇಷನ್ ಅಂಡ್ ಸ್ಪೋರ್ಟ್ಸ್ ಫಾರ್ ಆಲ್ ರಿಲಯನ್ಸ್ ಫೌಂಡೇಷನ್ ಯೂಥ್ ಸ್ಪೋರ್ಟ್ಸ್, ಜೂನಿಯರ್ ಎನ್ ಬಿಎ, ಫುಟ್ ಬಾಲ್ ಸ್ಪೋರ್ಟ್ಸ್ ಡೆವಲಪ್ ಮೆಂಟ್ ಲಿಮಿಟೆಡ್, ಐಎಸ್ ಲ್ ಚಿಲ್ಡ್ರನ್ ಲೀಗ್ಸ್ ಮತ್ತು ಇಂಡಿಯಾ ವಿನ್ ಸ್ಪೋರ್ಟ್ಸ್ ಪ್ರೈ.ಲಿಮಿಟೆಡ್ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ನೀತಾ ಅಂಬಾನಿ, "ಮಹಿಳಾ ಟಿ20 ಆಯೋಜಿಸುತ್ತಿರುವ ಬಿಸಿಸಿಐಗೆ ನನ್ನ ಹೃದಯಪೂರ್ವಕ ಅಭಿನಂದನೆ. ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಇದು ಪ್ರಗತಿಪರ ಹೆಜ್ಜೆ. ಈ ಅದ್ಭುತ ಆರಂಭಕ್ಕೆ ಪೂರ್ಣ ಬೆಂಬಲ ನೀಡುತ್ತಿರುವುದಕ್ಕೆ ನನಗೆ ಸಂತೋಷ ಆಗ್ತಿದೆ. ನಮ್ಮ ಆಟಗಾರ್ತಿಯರ ಸಾಮರ್ಥ್ಯದ ಮೇಲೆ ಅಪಾರವಾದ ಭರವಸೆ ನನಗಿದೆ.
"ಕಳೆದ ಕೆಲ ವರ್ಷಗಳಿಂದ ಐಸಿಸಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ನಮ್ಮ ಮಹಿಳಾ ಕ್ರಿಕೆಟರ್ ಗಳು ಉತ್ತಮ ಸಾಧನೆ ಮಾಡುತ್ತಾ ಬಂದಿದ್ದಾರೆ. ನಾವು ಅವರಿಗೆ ಉತ್ತಮ ಮೂಲಸೌಕರ್ಯ, ತರಬೇತಿಯನ್ನು ನೀಡಬೇಕು. ಅಂಜುಂ, ಮಿಥಾಲಿ, ಸ್ಮೃತಿ, ಹರ್ಮನ್ ಪ್ರೀತ್ ಮತ್ತು ಪೂನಂ ಇವರೆಲ್ಲ ರೋಲ್ ಮಾಡೆಲ್ ಗಳು. ಮುಂದಿನ ಪಯಣದಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ," ಎಂದಿದ್ದಾರೆ ನೀತಾ ಅಂಬಾನಿ.
ನವೆಂಬರ್ 4, 2020ರಿಂದ ಮಹಿಳಾ T20 ಪಂದ್ಯಾವಳಿಗಳು ಶಾರ್ಜಾದಲ್ಲಿ ನಡೆಯಲಿವೆ. ಸೂಪರ್ ನೋವಾಸ್, ಟ್ರಯಲ್ ಬ್ಲೇಜರ್ಸ್ ಹಾಗೂ ವೆಲಾಸಿಟಿ ಎಂಬ ಫ್ರಾಂಚೈಸ್ ಗಳನ್ನು ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ, ಮಿಥಾಲಿ ರಾಜ್ ಮುನ್ನಡೆಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.