ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗಿಂದು ಕರಾಳ ಶನಿವಾರವಾಗಿ ಬದಲಾಗಿದೆ. ಸುರೇಶ್ ರೈನಾ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಇದೀಗ ಇಬ್ಬರು ಸಿಎಸ್‌ಕೆ ಆಟಗಾರರಿಗೆ ಕೊರೋನಾ ಸೋಂಕು ವಕ್ಕರಿಸಿದೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ದುಬೈ(ಆ.29): 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕೊರೋನಾ ಹೆಮ್ಮಾರಿ ಟೂರ್ನಿಯ ಮೇಲೆ ತನ್ನ ವಕ್ರದೃಷ್ಠಿ ಬೀರಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ವೇಗಿ ದೀಪಕ್ ಚಹಾರ್ ಹಾಗೂ ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಸದ್ಯ ಈ ಇಬ್ಬರು ಆಟಗಾರರು ಐಸೋಲೇಷನ್‌ಗೆ ಒಳಗಾಗಿದ್ದಾರೆ. ಇನ್ನೂ ಇವರ ಜತೆಗಿದ್ದ 10 ಆಟಗಾರರು ಕೂಡಾ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎಂದು ದ ಟೈಮ್ಸ್ ಆಫ್ ಇಂಡಿಯಾ ವೆಬ್‌ಸೈಟ್ ವರದಿ ಮಾಡಿದೆ. ಶುಕ್ರವಾರವಷ್ಟೇ ಖ್ಯಾತ ಕ್ರೀಡಾ ವೆಬ್‌ಸೈಟ್‌ವೊಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಆಟಗಾರರು ಸೇರಿದಂತೆ 13 ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿ ಮಾಡಿತ್ತು. ದಿನ ಬೆಳಗಾಗುವುದರೊಳಗಾಗಿ ಈ ಇಬ್ಬರ ಹೆಸರು ಬಹಿರಂಗವಾಗಿದೆ.
undefined
ಇದೀಗ ತಂಡದ ಆಟಗಾರರು ಹಾಗೂ ಸಿಬ್ಬಂದಿ ಮತ್ತೊಮ್ಮೆ ಕೊರೋನಾ ಟೆಸ್ಟ್‌ಗೆ ಒಳಗಾಗಬೇಕಾಗಿದೆ. ವರದಿಗಳು ನೆಗೆಟಿವ್ ಬಂದರೆ ಮಾತ್ರ ಸೆಪ್ಟೆಂಬರ್ 01ರಿಂದ ಅಭ್ಯಾಸ ಮಾಡಲು ಮೈದಾನಕ್ಕಿಳಿಯಬಹುದಾಗಿದೆ. ಒಟ್ಟಿನಲ್ಲಿ ಆಟಗಾರರು ಹಾಗೂ ಸಿಬ್ಬಂದಿಗಳು ಕೊರೋನಾ ಟೆಸ್ಟ್ ನೆಗೆಟಿವ್ ಬಂದರೆ ಮಾತ್ರ ಹೋಟೆಲ್ ಕೊಠಡಿಯಿಂದ ಹೊರಬರಬಹುದಾಗಿದೆ.
CSK ಗೆ ಬಿಗ್ ಶಾಕ್: IPL 2020 ಸಂಪೂರ್ಣ ಟೂರ್ನಿಯಿಂದ ಸುರೇಶ್ ರೈನಾ ಔಟ್..!
ಇದಿಷ್ಟು ಒಂದು ಕಡೆಯಾದರೆ ಸಿಎಸ್‌ಕೆ ತಂಡದ ಉಪನಾಯಕ ಸುರೇಶ್ ರೈನಾ ವೈಯುಕ್ತಿಕ ಕಾರಣಗಳಿಂದಾಗಿ 13ನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಇದು ತಂಡದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಸುರೇಶ್ ರೈನಾ ಸಿಎಸ್‌ಕೆ ತಂಡದ ಪರ ತನ್ನದೇ ಛಾಪು ಮೂಡಿಸಿದ್ದರು.