ರಾಜಸ್ಥಾನ ಬಗ್ಗುಬಡಿದು ಪಾಯಿಂಟ್ ಪಟ್ಟಿ ರಾಜನಾದ ಡೆಲ್ಲಿ

Published : Oct 14, 2020, 11:35 PM ISTUpdated : Oct 14, 2020, 11:37 PM IST
ರಾಜಸ್ಥಾನ ಬಗ್ಗುಬಡಿದು ಪಾಯಿಂಟ್ ಪಟ್ಟಿ ರಾಜನಾದ ಡೆಲ್ಲಿ

ಸಾರಾಂಶ

ರಾಯಲ್ಸ್ ವಿರುದ್ಧ ಗೆದ್ದು ಬೀಗಿದ ಡೆಲ್ಲಿ/ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ/ ಪ್ಲೇ ಆಫ್ ಹಂತಕ್ಕೆ ಬಹಳ ಹತ್ತಿರ/ ಶ್ರೇಯಸ್ ಅಯ್ಯರ್ ಚಮತ್ಕಾರಿ ನಾಯಕತ್ವ

ಅಬುದಾಬಿ(ಅ. 14)  ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಹಂತಕ್ಕೆ ಹತ್ತಿರ  ಹೋಗಿ ನಿಂತಿದೆ.  ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ರೋಚಕ 13  ರನ್ ಜಯ ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ  161  ರನ್ ಕಲೆಹಾಕಿತ್ತು.  ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ ಅರ್ಧ ಶತಕದ ಕೊಡುಗೆ ನೀಡಿದ್ದರು. ಇದಕ್ಕೆ ಉತ್ತರವಾಗಿ ಚೇಸಿಂಗ್ ಇಳಿದ ರಾಜಸ್ಥಾನ ಆರಂಭ ಉತ್ತಮವಾಗಿಯೇ ಇತ್ತು. ಬಟ್ಲರ್ ಮತ್ತು ಸ್ಟೋಕ್ಸ್ ಒಳ್ಳೆಯ ಆರಂಭವನ್ನೇ ನೀಡಿದ್ದರು. 

ಕಟ್ಟಿದ ಮನೆಗೆ ಧೋನಿಯ ಹೆಸರಿಟ್ಟ ಅಭಿಮಾನಿ

ಆದರೆ ಹದಿನೈದು ಓವರ್ ನಂತರ ಪಂದ್ಯದ ಗತಿ ಬದಲಾಯಿತು. ಅತ್ಯುತ್ತಮ ಬೌಲಿಂಗ್ ಸಂಘಟನೆ ಮಾಡಿದ ಡೆಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ರಬಾಡಾ, ನೊರ್ಟಜೆ,  ತುಷಾರ್ ದೇಶಪಾಂಡೆ ಎಸೆದ ಕೊನೆ ಓವರ್‌ ಗಳನ್ನು ರಾಜಸ್ಥಾನ ಎದುರಿಸಲು ವಿಫಲವಾಗಿ ತಲೆಬಾಗಿತು. ರಾಜಸ್ಥಾನದ ನಾಐಕ ಸ್ಟೀವನ್ ಸ್ಮಿತ್  ಕೇವಲ ಒಂದು ರನ್ ಗೆ ವಿಕೆಟ್ ಒಪ್ಪಿಸಿದ್ದು ದೊಡ್ಡ ಹೊಡೆತ ನೀಡಿತು.  ಪದಾರ್ಪಣೆ ಪಂದ್ಯದಲ್ಲಿಯೇ ತುಷಾರ್ ದೇಶಪಾಂಡೆ ಡೆಲ್ಲಿ ಪರ ಮಿಂಚಿದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI