ಭಾರತದ ಸಾಲ ಮೋದಿ ಸರ್ಕಾರದ ಅವಧಿಯಲ್ಲಿ 50% ಏರಿಕೆ!

Published : Jan 20, 2019, 09:01 AM IST
ಭಾರತದ ಸಾಲ ಮೋದಿ ಸರ್ಕಾರದ ಅವಧಿಯಲ್ಲಿ 50% ಏರಿಕೆ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಒಟ್ಟಾರೆ ಕೇಂದ್ರ ಸರ್ಕಾರಿ ಸಾಲದ ಪ್ರಮಾಣ ಶೇ.49ರಷ್ಟುಜಿಗಿತ ಕಂಡು, 82 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ ಎಂದು ಸ್ವತಃ ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಮಾಹಿತಿ ನೀಡಿವೆ.

ನವದೆಹಲಿ: ನಾಲ್ಕೂವರೆ ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಒಟ್ಟಾರೆ ಕೇಂದ್ರ ಸರ್ಕಾರಿ ಸಾಲದ ಪ್ರಮಾಣ ಶೇ.49ರಷ್ಟುಜಿಗಿತ ಕಂಡು, 82 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ ಎಂದು ಸ್ವತಃ ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಮಾಹಿತಿ ನೀಡಿವೆ.

2014ರ ಜೂನ್‌ನಲ್ಲಿ ಕೇಂದ್ರ ಸರ್ಕಾರದ ಮೇಲೆ ಒಟ್ಟಾರೆ 54,90,763 ಕೋಟಿ ರು.ನಷ್ಟುಸಾಲವಿತ್ತು. ಆದರೆ ಅದು 2018ರ ಸೆಪ್ಟೆಂಬರ್‌ನಲ್ಲಿ 82,03,253 ಕೋಟಿ ರು.ಗೆ ಏರಿಕೆ ಕಂಡಿದೆ ಎಂದು ಸರ್ಕಾರದ ಸಾಲಕ್ಕೆ ಸಂಬಂಧಿಸಿದ ಹಣಕಾಸು ಸಚಿವಾಲಯದ 8ನೇ ಆವೃತ್ತಿಯ ಸ್ಥಿತಿಗತಿ ವರದಿ ತಿಳಿಸಿದೆ.

ಸಾರ್ವಜನಿಕ ಸಾಲದ ಪ್ರಮಾಣ ಶೇ.51.7ರಷ್ಟುಹೆಚ್ಚಳಗೊಂಡು, 48 ಲಕ್ಷ ಕೋಟಿ ರು.ನಿಂದ 73 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಸರ್ಕಾರದ ಒಟ್ಟಾರೆ ಸಾಲ ಏರಿಕೆಯಾಗಲು ಇದು ಪ್ರಮುಖ ಕಾರಣವಾಗಿದೆ.

ಸರ್ಕಾರ ಹೊಂದಿರುವ ಒಟ್ಟಾರೆ ಸಾಲದ ವಿಸ್ತೃತ ವಿಶ್ಲೇಷಣೆಯನ್ನು ಒಳಗೊಂಡ ಸ್ಥಿತಿಗತಿ ವರದಿಯನ್ನು ಹಣಕಾಸು ಸಚಿವಾಲಯ ಹೊರತರುತ್ತದೆ. 2010-11ನೇ ಸಾಲಿನಿಂದ ಪ್ರತಿ ವರ್ಷ ಇದನ್ನು ಬಿಡುಗಡೆ ಮಾಡಲಾಗುತ್ತಿದೆ.

PREV
click me!

Recommended Stories

ಸಂತ ಕಬೀರ ನಗರದಲ್ಲಿ ಯೋಗಿ ಭರ್ಜರಿ ಘೋಷಣೆ
ಗಢ ಗಢ ನಡುಗಿದ ಅನುಭವ; ನೋಡಿದ್ರೆ ಕುಸಿದ ಬಾವಿ, ವಿಡಿಯೋ ವೈರಲ್