ಗ್ರ್ಯಾಂಡಪ್ಪಾ ಕಿಚನ್ ಆಧುನಿಕ ನಳ ಮಹಾರಾಜ ನಾರಾಯಣ ರೆಡ್ಡಿ ಇನ್ನಿಲ್ಲ

Published : Nov 01, 2019, 11:46 PM ISTUpdated : Nov 01, 2019, 11:58 PM IST
ಗ್ರ್ಯಾಂಡಪ್ಪಾ ಕಿಚನ್ ಆಧುನಿಕ ನಳ ಮಹಾರಾಜ ನಾರಾಯಣ ರೆಡ್ಡಿ ಇನ್ನಿಲ್ಲ

ಸಾರಾಂಶ

ಆಧುನಿಕ ನಳ ಮಹಾರಾಜ ನಾರಾಯಣ ರೆಡ್ಡಿ ವಿಧಿವಶ/ ಅಡುಗೆ ಕೆಲಸ ಮುಗಿಸಿದ 73 ವರ್ಷದ ಹಿರಿಯಜ್ಜ/ ನಾನ್ ವೆಜ್ ಅಡುಗೆ ತಯಾರಿಕೆಯಲ್ಲಿ ನಿಸ್ಸೀಮ/ ಗ್ರ್ಯಾಂಡ್ ಕಿಚನ್ ಯುಟ್ಯೂಬ್ ಚಾನೆಲ್ ರೆಡ್ಡಿ

ಹೈದರಾಬಾದ್[ನ. 01]  ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ  ನಾರಾಯಣ ರೆಡ್ಡಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.  ಸೌದೆ ಒಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನಾರಾಯಣ ರೆಡ್ಡಿ ಅಡುಗೆ ದೆಶ ವಿದೇಶದಲ್ಲಿಯೂ ಫುಲ್ ಫೆಮಸ್ ಆಗಿತ್ತು. ಮಾಂಸಹಾರದಲ್ಲೆಂತೂ ಇವರದ್ದು ಎತ್ತಿದ ಕೈ.

ನಾರಾಯಣ ರೆಡ್ಡಿ ಅವರು ಮಕ್ಕಳಿಗಾಗಿಯೇ ಸ್ವಾದಿಷ್ಟವಾದ ಅಡುಗೆಯನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲ ತಾನು ತಯಾರಿಸಿದ ರುಚಿ, ರುಚಿ ಅಡುಗೆಯನ್ನು ಅನಾಥಾಶ್ರಮದ ಮಕ್ಕಳಿಗೂ ಹಂಚುತ್ತಿದ್ದರು. 2017ರ ಆಗಸ್ಟ್ ನಲ್ಲಿ ರೆಡ್ಡಿ ಅವರು ತಮ್ಮ ಯುಟ್ಯೂಬ್ ಚಾನೆಲ್ ಹೆಸರಿನಲ್ಲಿ ಆರಂಭಿಸಿದ್ದರು. ಅಕ್ಟೋಬರ್ 27ರಂದು ರೆಡ್ಡಿ ಅವರು ನಿಧನರಾದ ಸುದ್ದಿ ಸಹ ವೈರಲ್ ಆಗಿದ್ದು, ಸಾವಿರಾರು ಮಂದಿ ಸಂತಾಪ ಸೂಚಿಸಿದ್ದಾರೆ.

ಅಡುಗೆ ಮನೆಗೆ ಸಂಬಂಧಿಸಿದ ಈ ತಪ್ಪು ಅಭ್ಯಾಸ ಬಿಟ್ಟುಬಿಡಿ

ಚಿಕನ್ ಬಿರಿಯಾನಿ, ಪಿಜ್ಜಾ, ಬರ್ಗರ್ಸ್ಸ್, ಚಿಕನ್ ಲಾಲಿಪೋಪ್ಸ್, ಬಟಾಟೆ ಚಿಪ್ಸ್ ಸೇರಿದಂತೆ  ಸ್ವಾದಿಷ್ಟ ಅಡುಗೆಯನ್ನು ರೆಡ್ಡಿಯವರು ತಯಾರಿಸುತ್ತಿದ್ದರು. ಹೀಗೆ ಕಿಟ್ ಕ್ಯಾಟ್ ಮಿಶ್ರಣದ ಚಾಕೋಲೇಟ್ ಕೇಕ್, ರೆಡ್ ವೆಲ್ವೆಟ್ ಕೇಕ್ ಅನ್ನು ತಯಾರಿಸುವ ನಾರಾಯಣ ರೆಡ್ಡಿಯವರು ವೀಡಿಯೋಕ್ಕೂ ಲಕ್ಷಾಂತರ ಮೆಚ್ಚುಗೆ ಬಂದಿತ್ತು.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!