
ಮುಂಬೈ[ಫೆ.13]: ಸಂಗೀತ ಮಾಂತ್ರಿಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರಹಮಾನ್ ಪುತ್ರಿ ಬುರ್ಖಾ ವಿಚಾರವಾಗಿ ಒಂದು ವರ್ಷ ಹಳೆ ಪೋಸ್ಟ್‌ನಿಂದ ಮತ್ತೆ ಸುದ್ದಿಯಾಗಿದ್ದಾಋಎ. ರಹಮಾನ್ ಪುತ್ರಿ ಸಂಬಂಧ ಲೇಖಕಿ ತಸ್ಲಿಮಾ ನಸ್ರೀನ್ ಟ್ವೀಟ್ ಒಂದನ್ನು ಮಾಡುತ್ತಾ ಬುರ್ಖಾ ಧರಿಸಿದ ರಹಮಾನ್ ಮಗಳನ್ನು ಕಂಡರೆ ನನಗೆ ಉಸಿರುಗಟ್ಟಿದಂತಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಇದು ವಿವಾದ ಹುಟ್ಟು ಹಾಕಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏನಿದು ವಿವಾದ?
ಎ. ಆರ್. ರಹಮಾನ್ ಸಂಗೀತ ನಿರ್ದೇಶನ ಮಾಡಿದ್ದ ಸ್ಲಂ ಡಾಗ್ ಮಿಲಿಯನೇರ್ ಸಿನಿಮಾ 10 ವರ್ಷ ಪೂರೈಸಿದ ಪ್ರಯುಕ್ತ ಕಳೆದ ವರ್ಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಹಮಾನ್ ಪುತ್ರಿ ಖತೀಜಾ ಕೂಡಾ ಭಾಗವಹಿಸಿದ್ದರು. ಆದರೆ ಈ ಅದ್ಧೂರಿ ಕಾರ್ಯಕ್ರಮಕ್ಕೆ ಸೀರೆಯುಟ್ಟು ಬಂದಿದ್ದ ರಹಮಾನ್ ಪುತ್ರಿ ಖತೀಜಾ ಮುಖ ಕಾಣದಂತೆ ಹಿಜಾಬ್ ಧರಿಸಿದ್ದರು. ಅಂದು ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ರಹಮಾನ್ ತಮ್ಮ ಪುತ್ರಿಗೆ ಬಲವಂತವಾಗಿ ಹಿಜಬ್ ಧರಿಸುವಂತೆ ಒತ್ತಡ ಹಾಕಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು.
ಆದರೆ ಈ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದ್ದ ರಹಮಾನ್ ಬುರ್ಖಾ ಧರಿಸೋದು ಪುತ್ರಿಯ ಸ್ವಂತ ನಿರ್ಧಾರ ಎಂದಿದ್ದರು. ಲ್ಲದೇ ಖುದ್ದು ಖತೀಜಾ ಈ ಕುರಿತು ಸ್ಪಷ್ಟನೆ ನೀಡುತ್ತಾ, ಹಿಜಬ್ ಧರಿಸಲು ನನಗೆ ಯಾರೂ ಒತ್ತಾಯಿಸಿಲ್ಲ. ನಾನು ಬುದ್ಧಿವಂತೆ. ನನ್ನ ಜೀವನದ ನಿರ್ಧಾರ ತೆಗೆದುಕೊಳ್ಳಲು ನನಗೆ ಗೊತ್ತು. ಒಬ್ಬರ ಬಗ್ಗೆ ತಿಳಿಯದೆ ಇಂತಹ ಕಮೆಂಟ್ ಮಾಡುವುದು ಸರಿಯಲ್ಲ' ಎಂದಿದ್ದರು.
ಸದ್ಯ ಒಂದು ವರ್ಷಚ ಹಳೆಯ ಈ ವಿಚಾರ ಮತ್ತೆ ಸದ್ದು ಮಾಡಿದೆ. ಅಂದಿನ ವಿಚಾರವಾಗಿ ಲೇಖಕಿ ತಸ್ಲಿಮಾ ನಸ್ರೀನ್ ಟ್ವೀಟ್ ಒಂದನ್ನು ಮಾಡುತ್ತಾ 'ನನಗೆ ಎ. ಆರ್. ರಹಮಾನ್‌ರವರ ಮ್ಯಸೂಸಿಕ್ ಎಂದರೆ ಬಹಳ ಇಷ್ಟ. ಆದರೆ ಅವರ ಮಗಳನ್ನು ನೋಡಿದಾಗೆಲ್ಲಾ ನನಗೆ ಉಸಿರುಗಟ್ಟುತ್ತೆ. ಸಂಪ್ರದಾಯಸ್ಥ ಕುಟುಂಬದಲ್ಲಿ ಓರ್ವ ಶಿಕ್ಷಿತ ಮಹಿಳೆಯೂ ಅತ್ಯಂತ ಸುಲಭವಾಗಿ ಬ್ರೇನ್‌ವಾಶ್‌ಗೊಳಗಾಗುತ್ತಾಳೆ ಎಂಬುವುದು ತುಂಬಾ ನೋವಿನ ಸಂಗತಿ' ಎಂದಿದ್ದಾರೆ.
ಲೇಖಕಿಯ ಈ ಟ್ವೀಟ್ ಒಂದು ವರ್ಷ ಹಳೆಯ ಟ್ರೋಲ್‌ಗೆ ಮರು ಜೀವ ನೀಡಿದ್ದು, ಮನುಂದೆ ಈ ವಿಚಾರ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಕಾದು ನೋಡಬೇಕಷ್ಟೇ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ