ಸಾವಿನ ಕದ ತಟ್ಟಿದ್ದ ಮಹಿಳೆಯನ್ನು ಚಲಿಸುತ್ತಿದ್ದ ರೈಲಿನಿಂದ ಕಾಪಾಡಿದ ರೈಲ್ವೇ ಪೊಲೀಸರು!

Published : Jun 01, 2022, 07:42 PM IST
ಸಾವಿನ ಕದ ತಟ್ಟಿದ್ದ ಮಹಿಳೆಯನ್ನು ಚಲಿಸುತ್ತಿದ್ದ ರೈಲಿನಿಂದ ಕಾಪಾಡಿದ ರೈಲ್ವೇ ಪೊಲೀಸರು!

ಸಾರಾಂಶ

* ಛತ್ತೀಸ್‌ಗಢದ ರಾಯ್ಪುರದಲ್ಲಿ ಶಾಕಿಂಗ್ ಘಟನೆ * ರೈಲ್ವೇ ನಿಲ್ದಾಣದಲ್ಲಿ ನಡೆಯಿತು ದುರಂತ * ಸಾವಿನ ಕದ ತಟ್ಟಿದ್ದ ಮಹಿಳೆಯನ್ನು ಕಾಪಾಡಿದ ರೈಲ್ವೇ ಪೊಲೀಸ್

ರಾಯ್ಪುರ(ಜೂ.01): ಕೊಂಚ ಯಾಮಾರಿದ್ರೂ ಅವಘಡ ಸಂಭವಿಸುತ್ತೆ ಎಂಬ ಮಾತಿದೆ. ಈ ಮಾತುಗಳನ್ನು ಹಲವಾರು ಬಾರಿ ಕೇಳಿದರೂ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ರಸ್ತೆ ದಾಟುವಾಗ, ರೈಲಿನಲ್ಲಿ ಹೋಗುವಾಗ ಈ ಮಾತುಗಳನ್ನು ನಾವು ಗಮನದಲ್ಲಿರಿಸಬೇಕಾಗುತ್ತದೆ. ಇಲ್ಲವೆಂದಾದರೆ ಸಾವನ್ನೇ ಎದುರಿಸಬೇಕಾಗುತ್ತದೆ. ಆದರೆ ಹೀಗೇ ಎಡವಟ್ಟು ಮಾಡಿಕೊಂಡ ಮಹಿಳೆಯೊಬ್ಬಳು ಅದೃಷ್ಟವಶಾತ್, ದೇವರ ಅನುಗ್ರಹದಿಂದ ಸಾವಿನ ಕದತಟ್ಟಿ ಹಿಂತಿರುಗಿದ್ದಾರೆ. ಈ ಘಟನೆ ನಡೆದಿದ್ದು ಛತ್ತೀಸ್‌ಗಢದಲ್ಲಿ ನಡೆದಿದೆ.

ಹೌದು ಛತ್ತೀಸ್‌ಗಢದ ರಾಯ್ಪುರ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇಲ್ಲೊಬ್ಬ ಮಹಿಳೆ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ, ಇದ್ದಕ್ಕಿದ್ದಂತೆ ಮಹಿಳೆಯ ಕಾಲು ಜಾರಿ, ಅಲ್ಲೇ ಸಿಕ್ಕಾಕೊಂಡಿದ್ದಾರೆ. ಒಂದು ರೀತಿಯಲ್ಲಿ ಆಕೆ ಇನ್ನೇಢನು ಸಾಯುತ್ತಿದ್ದಳು, ಆದರೆ ಅಷ್ಟರಲ್ಲೇ ರೈಲ್ವೇ ಪೋಲೀಸ್ ದೇವದೂತನಂತೆ ಬಂದು, ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಮಹಿಳೆಯನ್ನು ಸಾವಿನ ದವಡೆಯಿಂದ ಕಾಪಾಡಿ ಮರಳಿ ಕರೆತಂದಿದ್ದಾರೆ. ಈ ಸಂಪೂರ್ಣ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಸ್ವತಃ ರೈಲ್ವೇ ಸಚಿವಾಲಯವೇ ಬಿಡುಗಡೆ ಮಾಡಿದೆ.

ಘಟನೆಯ ವಿವರ

ಈ ಘಟನೆಯ ವಿಡಿಯೋವನ್ನು ಬಿಡುಗಡೆ ಮಾಡಿರುವ ರೈಲ್ವೇ ಸಚಿವಾಲಯ, ಈ ವಿಷಯ ಛತ್ತೀಸ್‌ಗಢದ ರಾಯ್‌ಪುರ ನಿಲ್ದಾಣದಲ್ಲಿ ನಡೆದಿದ್ದು ಎಂದು ಹೇಳಿದೆ. ಇದರಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲು ಹತ್ತುವಾಗ ಏಕಾಏಕಿ ಕೆಳಗೆ ಬಿದ್ದಿದ್ದಾರೆ. ಆದರೆ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಉದ್ಯೋಗಿಯೊಬ್ಬರು ಕೂಡಲೇ ಮಹಿಳೆಯ ಪ್ರಾಣ ಉಳಿಸಿದ್ದಾರೆ. ರೈಲು ಚಲಿಸಲು ಆರಂಭವಾದ ಬಳಿಕ ಮಹಿಳೆ ರೈಲು ಹತ್ತಲು ಓಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಆಕೆ ಮೆಟ್ಟಿಲ ಮೇಲೆ ಮೇಲೆ ಹೆಜ್ಜೆ ಇಟ್ಟಿದ್ದಳು ಆದರೆ ಇದ್ದಕ್ಕಿದ್ದಂತೆ ಆಕೆ ನಿಯಂತ್ರಣ ಕಳೆದುಕೊಂಡು ಬೀಳಲು ಪ್ರಾರಂಭಿಸುತ್ತಾಳೆ. ರೈಲ್ವೆ ಪೊಲೀಸರು ಮಹಿಳೆಯತ್ತ ವೇಗವಾಗಿ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಆರ್‌ಪಿಎಫ್ ಜವಾನನು ಮಹಿಳೆಯನ್ನು ತ್ವರಿತವಾಗಿ ಹಿಡಿದು ಎಳೆದುಕೊಂಡು ಹೋಗಿದ್ದಾನೆ.

ವಿಡಿಯೋ ಭಾರೀ ವೈರಲ್

ಇಡೀ ಘಟನೆ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಟ್ವೀಟ್ ಮಾಡುವ ಮೂಲಕ ರೈಲ್ವೆ ಸಚಿವಾಲಯ ಈ ಘಟನೆಯ ಬಗ್ಗೆ ತಿಳಿಸಿದೆ. ಅಲ್ಲದೆ ಚಲಿಸುವ ರೈಲು ಹತ್ತಲು ಪ್ರಯತ್ನಿಸಬೇಡಿ ಅದು ಮಾರಣಾಂತಿಕವಾಗಬಹುದು ಎಂದೂ ಎಚ್ಚರಿಸಿದೆ. ರೈಲ್ವೇ ಇಲಾಖೆ ಬಿಡುಗಡೆ ಮಾಡಿರುವ ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು, ಇದುವರೆಗೆ 20,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 400ಕ್ಕೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಇದಲ್ಲದೇ ಸಾಕಷ್ಟು ಮಂದಿ ಪೊಲೀಸರನ್ನು ಶ್ಲಾಘಿಸಿ ಕಮೆಂಟ್ ಮಾಡಿದ್ದಾರೆ. ಆರ್‌ಪಿಎಫ್ ತಂಡಕ್ಕೆ ಅಭಿನಂದನೆಗಳು ಎಂದು ಬಳಕೆದಾರರು ಬರೆದಿದ್ದಾರೆ. ಅಂತಹ ಘಟನೆಯನ್ನು ತಪ್ಪಿಸಲು ಪ್ಲಾಟ್‌ಫಾರಂ ಮಟ್ಟವನ್ನು ಹೆಚ್ಚಿಸಬಹುದು ಎಂದೂ ಸಲಹೆ ನೀಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!