
ನವದೆಹಲಿ: ಬಿಹಾರ ಚುನಾವಣೆ ಪ್ರಕಟವಾಗುವ ಮುನ್ನವೇ ಮಿತ್ರಪಕ್ಷಗಳು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸುತ್ತಿವೆ. ಕ್ಷೇತ್ರ ಹಂಚಿಕೆ ಮೊದಲೇ ಸಿಎಂ ನಿತೀಶ್ ಕುಮಾರ್ ಕ್ಷೇತ್ರವೊಂದರ ಜೆಡಿಯು ಅಭ್ಯರ್ಥಿಯನ್ನು ಘೋಷಿಸಿದ್ದರು. ಇದೀಗ ಕೇಂದ್ರ ಸಚಿವರಾಗಿರುವ ಚಿರಾಗ್ ಪಾಸ್ವನ್, ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಂತೆ ಕಾಣಿಸುತ್ತಿದೆ. ಚಿರಾಗ್ ಪಾಸ್ವಾನ್ ಅವರ ಲೋಕ್ ಜನಶಕ್ತಿ ಪಕ್ಷ ಬಿಹಾರದಲ್ಲಿ ತನ್ನದೇ ಆದ ಸಾಂಪ್ರದಾಯಿಕ ಮತಗಳನ್ನು ಹೊಂದಿದೆ. ಚುನಾವಣೆಯಲ್ಲಿ ಲೋಕ್ ಜನಶಕ್ತಿ ಪಕ್ಷದ ಮತಗಳು ನಿರ್ಣಾಯಕ ಸ್ಥಾನದಲ್ಲಿವೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಲೋಕ್ ಜನಶಕ್ತಿ ಪಕ್ಷ ಬೆಂಬಲ ಸೂಚಿಸಿತ್ತು. ಹಾಗಾಗಿ ಚಿರಾಗ್ ಪಾಸ್ವಾನ್ ಕೇಂದ್ರ ಸಚಿವರಾಗಿದ್ದಾರೆ.
ನಮ್ಮ ಸಮರ್ಥಕರು ನಾನು ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ದೊಡ್ಡ ಕನಸುಗಳನ್ನು ಹೊಂದಿದ್ದಾರೆ. ಈ ರೀತಿ ಕನಸು ಕಾಣುವದರಲ್ಲಿ ತಪ್ಪೇನಿದೆ ಎಂದ ಚಿರಾಗ್ ಪಾಸ್ವಾನ್, ತಾವು ಬಿಹಾರ ಸರ್ಕಾರದ ಭಾಗವಾಗಿಲ್ಲ ಎಂದು ಹೇಳುವ ಮೂಲಕ ಸಿಎಂ ನಿತೀಶ್ ಕುಮಾರ್‌ಗೆ ಬಿಗ್ ಶಾಕ್ ನೀಡಿದ್ದಾರೆ. ನಾವು ಕೇವಲ ಕೇಂದ್ರದಲ್ಲಿ ಎನ್‌ಡಿಗೆ ಒಕ್ಕೂಟಕ್ಕೆ ಬೆಂಬಲ ನೀಡಿದ್ದೇವೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಇತ್ತೀಚೆಗೆ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಚಿರಾಗ್ ಪಾಸ್ವಾನ್, ಬಿಹಾರ ವಿಧಾನಸಭಾ ಚುನಾವಣೆ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಾನು ಅಡುಗೆಯಲ್ಲಿನ ಉಪ್ಪು ಇದ್ದಂತೆ. ಬಿಹಾರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಲೋಕ್ ಜನಶಕ್ತಿ ಪಕ್ಷ 20 ರಿಂದ 25 ಸಾವಿರ ಮತಗಳನ್ನು ಹೊಂದಿದೆ. ಹಾಗಾಗಿ ನಮ್ಮ ಪಕ್ಷವನ್ನು ಯಾವ ಕ್ಷೇತ್ರದಲ್ಲಿಯೂ ನಿರ್ಲಕ್ಷ್ಯ ಮಾಡುವಂತಿಲ್ಲ ಎಂಬ ಸಂದೇಶವನ್ನು ಬಿಜೆಪಿ ಮತ್ತು ಜೆಡಿಯುಗೆ ರವಾನಿಸಿದ್ದರು.
ಇದನ್ನೂ ಓದಿ: ಚುನಾವಣೆಗೂ ಮೊದಲೇ ಮಿತ್ರ ಪಕ್ಷಕ್ಕೆ ಶಾಕ್ ಕೊಟ್ಟ ನಿತೀಶ್ ಕುಮಾರ್; ಮೋದಿಗಿಂತ ಒಂದು ಹೆಜ್ಜೆ ಮುಂದಿಟ್ಟ ಜೆಡಿಯು
ಕರ್ನಾಟಕದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಆದ್ರೆ 80 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್, 37 ಕ್ಷೇತ್ರಗಳಲ್ಲಿ ಗೆಲವು ದಾಖಲಿಸಿದ್ದ ಜೆಡಿಎಸ್ ಜೊತೆ ಸೇರಿಕೊಂಡು ಮೈತ್ರಿ ಸರ್ಕಾರ ರಚನೆ ಮಾಡಿತ್ತು. 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್‌ನ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ಬೆಂಬಲದೊಂದಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು.
ಒಂದು ವೇಳೆ ಬಿಹಾರದಲ್ಲಿ ಅತಂತ್ರ ಫಲಿತಾಂಶ ಬಂದ್ರೆ ಚಿರಾಗ್ ಪಾಸ್ವಾನ್ ಸರ್ಕಾರ ರಚಿಸುವಲ್ಲಿ ಗೇಮ್ ಚೇಂಜರ್ ಆಗಿ ಬದಲಾಗುವ ಸಾಧ್ಯತೆಗಳಿವೆ. ಚಿರಾಗ್ ಪಾಸ್ವಾನ್ ಬಿಹಾರದ ಹೆಚ್‌ಡಿ ಕುಮಾರಸ್ವಾಮಿ ಆಗಬಹುದು ಎಂಬ ವಿಶ್ಲೇಷಣೆಗಳು ಕೇಳಿ ಬಂದಿವೆ. ಬದಲಾದ ರಾಜಕಾರಣದಲ್ಲಿ ಸದ್ಯ ಹೆಚ್‌ಡಿ ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದರೂ ಕೇಂದ್ರ ಸಚಿವರಾಗಿದ್ದಾರೆ. ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ.
ಇದನ್ನೂ ಓದಿ: ನಾನು ಅಡುಗೆಯಲ್ಲಿನ ಉಪ್ಪು; BJP-JDUಗೆ ಬಿಹಾರದಲ್ಲಿ ತಮ್ಮ ಪಕ್ಷದ ತಾಕತ್ತು ನೆನಪಿಸಿದ ಚಿರಾಗ್ ಪಾಸ್ವಾನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ