
ನವದೆಹಲಿ[ಫೆ.25]: ಬಾಲಿವುಡ್ ಹಾಗೂ ದಕ್ಷಿಣ ಭಾರತ ಸಿನಿಮಾ ಕ್ಷೇತ್ರದ ಪ್ರಸಿದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಅಲ್ಲದೇ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಸರಣಿ ಟ್ವಿಟ್ ಮಾಡುತ್ತಿದ್ದಾರೆ. ಹೀಗಿರುವಾಗ ವರ್ಮಾ ಮಾಡಿದ ಟ್ವೀಟ್ ಒಂದು ಭಾರೀ ವೈರಲ್ ಆಗುತ್ತಿದೆ. ಈ ಟ್ವೀಟ್ ನಲ್ಲಿ ಅವರು ಟ್ರಂಪ್ ಪ್ರವಾಸ ಕುರಿತು ಪ್ರಶ್ನೆಯೊಂದನ್ನು ಎಸೆದಿದ್ದಾರೆ.
ಡೊನಾಲ್ಡ್ ಟ್ರಂಪ್ ಪ್ರವಾಸ ಸಂಬಂಧ ಟ್ವೀಟ್ ಮಾಡಿರುವ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ನಾವು ಭಾರತೀಯರು ಡೊನಾಲ್ಡ್ ಟ್ರಂಪ್ ಸ್ವಾಗತಕ್ಕೆ ಕೋಟ್ಯಾನುಗಟ್ಟಲೇ ಹಣ ವ್ಯಯಿಸಿದ್ದಾರೆ. ಹೀಗಿರುವಾಗ ಅಮೆರಿಕಾ ಕೂಡಾ ನರೇಂದ್ರ ಮೋದಿ ಸ್ವಾಗತಕ್ಕೆ ಸಾವಿರ ರೂಪಾಯಿಯಾದರೂ ಖರ್ಚು ಮಾಡುತ್ತಾರಾ? ಇದು ಅಮೆರಿಕಾ ಏನೆಂದು ಹೇಳುತ್ತದೆ, ಭಾರತ ಕುರಿತಾಗಿ ಅಲ್ಲ... ಸುಮ್ಮನೆ ಹೇಳಿದೆಯಷ್ಟೇ' ಎಂದು ಬರೆದಿದ್ದಾರೆ.
ಇದರ ಬೆನ್ನಲ್ಲೇ ವರ್ಮಾ ಗುಜರಾತ್ ನಲ್ಲಿ ನಿರ್ಮಿಸಲಾದ ಗೋಡೆ ಫೋಟೋವನ್ನೂ ಟ್ವೀಟ್ ಮಾಡುತ್ತಾ 'ನೈಜ ಚಿತ್ರಣ, ಟ್ರಂಪ್ ನೋಡಿದಂತೆ' ಎಂದು ಬರೆದಿದ್ದಾರೆ. ಸದ್ಯ ಇವರು ಮಾಡುತ್ತಿರುವ ಟ್ವೀಟ್ಸ್ ಭಾರೀ ವೈರಲ್ ಆಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ