ವಿಮಾನ ಪ್ರಯಾಣಕ್ಕೂ ಮೊದಲು ಇನ್ಸೂರೆನ್ಸ್ ಇದೆಯೇ ಪರಿಶೀಲಿಸಿ

Chethan Kumar   | Kannada Prabha
Published : Jun 24, 2025, 09:57 AM IST
Flight

ಸಾರಾಂಶ

ವಿಮಾನ ಟಿಕೆಟ್ ಬುಕಿಂಗ್ ಮಾಡುವಾಗ ಅಥವಾ ವಿಮಾನ ಪ್ರಯಾಣ ಮಾಡುವಾಗ ಇನ್ಶೂರೆನ್ಸ್ ಇದೆಯಾ ಅನ್ನೋದು ಪರಿಶೀಲಿಸುವುದು ಅತೀ ಅಗತ್ಯ. ಇದರ ಅಗತ್ಯವೇನು? ಈ ವಿಮೆಯಲ್ಲಿ ಏನೆಲ್ಲಾ ಕವರ್ ಆಗಲಿದೆ?

ಸಾಮಾನ್ಯವಾಗಿ ಬಹಳಷ್ಟು ಮಂದಿ ಅಂತಾರಾಷ್ಟ್ರೀಯ ಅಥವಾ ರಾಷ್ಟ್ರೀಯ ಪ್ರಯಾಣ ಸಂದರ್ಭದಲ್ಲಿ ವಿಮೆಯ ಕುರಿತು ಆಲೋಚನೆ ಮಾಡುವುದಿಲ್ಲ. ಆದರೆ ಇತ್ತೀಚಿನ ಕೆಲವು ದುರ್ಘಟನೆಗಳು ವಿಮೆಯ ಮಹತ್ವ ಎಷ್ಟು ಎಂಬುದನ್ನು ಸಾರಿವೆ. ಈ ವಿಮಾ ಪಾಲಿಸಿಗಳು ವೈದ್ಯಕೀಯ ತುರ್ತುಸ್ಥಿತಿಗಳು, ದುರ್ಘಟನೆಗಳು, ಪ್ರಯಾಣದ ತೊಂದರೆಗಳು ಮತ್ತು ಪ್ರಮುಖ ದಾಖಲೆ ಅಥವಾ ವಸ್ತುಗಳು ಕಳೆದುಹೋದ ಸಂದರ್ಭದಲ್ಲಿ ಅಗತ್ಯ ರಕ್ಷಣೆಯನ್ನು ಒದಗಿಸುತ್ತವೆ. ಈ ಕುರಿತು ವಿಸ್ತ್ರತವಾಗಿ ನೋಡೋಣ.

ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಕಾಂಪ್ರಹೆನ್ಸಿವ್ ಇನ್ಸೂರೆನ್ಸ್

ಅಂತಾರಾಷ್ಟ್ರೀಯ ಪ್ರಯಾಣ ಹೊರಡುವ ಸಂದರ್ಭದಲ್ಲಿ ಕಾಂಪ್ರಹೆನ್ಸಿವ್ ಇನ್ಸೂರೆನ್ಸ್ ಅವಶ್ಯವಾಗಿದೆ. ಈ ವಿಮೆಯು ಆಸ್ಪತ್ರೆಗೆ ದಾಖಲಾಗುವುದು, ಶಸ್ತ್ರಚಿಕಿತ್ಸೆ ಮತ್ತು ಹೊರರೋಗಿಗಳ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ವೆಚ್ಚಗಳನ್ನು ಭರಿಸುತ್ತದೆ. ದುರ್ಘಟನೆ ನಡೆದಾಗ ಮರಣ ಸಂಭವಿಸಿದಲ್ಲಿ ನಾಮಿನಿಗೆ ಅಥವಾ ವಿಮಾದಾರರಿಗೆ ಒಂದು ನಿಗದಿತ ಮೊತ್ತವನ್ನು ಪಾವತಿಸುತ್ತದೆ. ಫೈಟ್ ರದ್ದತಿ ಅಥವಾ ವಿಳಂಬದಂಥಾ ತೊಂದರೆ ಉಂಟಾದ ಸಂದರ್ಭದಲ್ಲಿ ಮರುಪಾವತಿಯಾಗದ ವೆಚ್ಚಗಳನ್ನು ಭರಿಸುತ್ತದೆ. ಪಾಸ್‌ಪೋರ್ಟ್, ವಸ್ತುಗಳು ಅಥವಾ ವೈಯುಕ್ತಿಕ ದಾಖಲೆಗಳು ಕಳೆದುಹೋದ ಸಂದರ್ಭದಲ್ಲಿ ಪರಿಹಾರ ನೀಡುತ್ತದೆ. ವಿಮಾನ ದುರಂತ ನಡೆದಾಗ ಇನ್ನಿತರ ಹಲವು ಪ್ರಯೋಜನ ಒದಗಿಸುತ್ತದೆ. ಪರ್ಸನಲ್ ಆಕ್ಸಿಡೆಂಟ್ ಇನ್ಸೂರೆನ್ಸ್ ಜೊತೆಗೆ ಕ್ರಿಟಿಕಲ್ ಇಲ್‌ನೆಸ್ ಇನ್ಸೂರೆನ್ ಕೂಡ ಸೇರಿಸಿಕೊಂಡರೆ ಪ್ರಯಾಣದ ಸಮಯದಲ್ಲಿ ಇನ್ನಷ್ಟು ಭದ್ರತೆ ಸಿಗುತ್ತದೆ.

ಆ್ಯಡ್ ಆನ್‌ ಕವರ್‌ಗಳು

ಮೂಲ ವಿಮೆಯ ಆನ್ ಕವರ್‌ಗಳನ್ನೂ ಜೊತೆಗೆ ಕೆಲವು ಆ್ಯಡ್ ಪರಿಗಣಿಸಬಹುದು. ಸ್ಟೀಯಿಂಗ್, ಡೈವಿಂಗ್‌ನಂಥಾ ಚಟುವಟಿಕೆಗಳ ಸಂದರ್ಭ ಅಡ್ಡೆಂಚರ್ ಸ್ಪೋರ್ಟ್ಸ್ ಕವರ್ ಇದ್ದರೆ ಒಳಿತು. ವೀಸಾ ತಿರಸ್ಕೃತಗೊಂಡರೆ ಪ್ರೈಟ್, ಹೋಟೆಲ್‌ಗಳಂಥಾ ಮರುಪಾವತಿಯಾಗದ ಬುಕಿಂಗ್‌ಳಿಂದ ಆಗುವ ಆರ್ಥಿಕ ನಷ್ಟ ತಡೆದುಕೊಳ್ಳಲು ಇವು ನೆರವಾಗುತ್ತವೆ.

ವಿಮಾ ಮೊತ್ತ

ಅವರವರ ಅಗತ್ಯಗಳಿಗೆ ತಕ್ಕಂತೆ ವಿಮಾ ಮೊತ್ತವನ್ನು ಆರಿಸಿಕೊಳ್ಳಬೇಕು. ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ರೀತಿಯ ವೆಚ್ಚಗಳಿರುತ್ತವೆ. ಪೆಂಜೆನ್ ದೇಶಗಳಿಗೆ ವೀಸಾ ಪಡೆಯಲು ಪ್ರಯಾಣ ವಿಮೆ ಕಡ್ಡಾಯವಾಗಿರುತ್ತದೆ. ಅಲ್ಲಿ ಎಷ್ಟು ದಿನ ಇರುತ್ತೀರೋ ಅಷ್ಟು ಅವಧಿಗೆ ವಿಮೆ ಮಾನ್ಯವಾಗಿರಬೇಕು. ಉಳಿದಂತೆ ಯುಎಸ್ಎ ಮತ್ತು ಕೆನಡಾದಲ್ಲಿ ವೈದ್ಯಕೀಯ ವೆಚ್ಚಗಳು ಹೆಚ್ಚಿರುವುದರಿಂದ ಅದಕ್ಕೆ ತಕ್ಕಂತೆ ವಿಮಾ ಮೊತ್ತ ಆಯ್ಕೆ ಮಾಡಬೇಕು. ಯುಕೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ವಿಮೆ ಕಡ್ಡಾಯವಲ್ಲದಿದ್ದರೂ ವೈದ್ಯಕೀಯ ವೆಚ್ಚಗಳು ಗಣನೀಯವಾಗಿರುತ್ತವೆ. ಅದನ್ನು ಗಮನದಲ್ಲಿರಿಸಿಕೊಳ್ಳಬೇಕು.

ದೇಶೀಯ ಪ್ರಯಾಣ ವಿಮೆ

ಸಾಮಾನ್ಯವಾಗಿ ದೇಶೀಯ ಪ್ರಯಾಣದ ಅವಧಿ ಮತ್ತು ವ್ಯಾಪ್ತಿಯ ಆಧಾರದ ಮೇಲೆ ಈ ವಿಮೆಯ ವೆಚ್ಚ 50 ರಿಂದ 150 ರೂಪಾಯಿಗಳ ನಡುವೆ ಇರುತ್ತದೆ. ಭಾರತದಾದ್ಯಂತ ಬಹು ದಿನಗಳ ಪ್ರಯಾಣ ಹೊರಟಿದ್ದರೆ ಕಾಂಪ್ರಹೆನ್ಸಿವ್ ಇನ್ಸೂರೆನ್ಸ್ ತೆಗೆದುಕೊಳ್ಳಬಹುದು, ಈ ವಿಮೆಯ ವೆಚ್ಚ 300 ರಿಂದ 800 ರೂಪಾಯಿಗಳ ನಡುವೆ ಇರಬಹುದಾಗಿದೆ. ರೈಲು ಪ್ರಯಾಣಕ್ಕೆ ಐಆರ್‌ಸಿಟಿಸಿ ಸಂಸ್ಥೆಯೇ ವಿಮೆಯನ್ನು ಒದಗಿಸುತ್ತದೆ, ಇದರ ಪ್ರೀಮಿಯಂ ಕೇವಲ 0.49 ರೂಪಾಯಿಯಿಂದ ಆರಂಭವಾಗುತ್ತದೆ ಮತ್ತು 10 ಲಕ್ಷ ರೂಪಾಯಿಗಳವರೆಗಿನ ಅಪಘಾತದ ವಿಮೆ ಇರುತ್ತದೆ. ಪರಿಣಿತರ ಸಹಾಯದಿಂದ ಈ ನಿಟ್ಟಿನಲ್ಲಿ ಮುಂದುವರಿಯಬಹುದು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ