ಬಿಹಾರ ಚುನಾವಣೆ: ಎಲ್ಲ ಸಮೀಕ್ಷೆಗಳೂ ಸುಳ್ಳಾದವು!

By Kannadaprabha NewsFirst Published Nov 11, 2020, 7:42 AM IST
Highlights

: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಎನ್‌ಡಿಎ| ಎಲ್ಲ ಸಮೀಕ್ಷೆಗಳೂ ಸುಳ್ಳಾದವು| ಗಠಬಂಧನಕ್ಕೆ ಭರ್ಜರಿ ಜಯ ಎಂದಿದ್ದ ಎಕ್ಸಿಟ್‌ ಪೋಲ್ಸ್‌

ನವದೆಹಲಿ(ನ.11): ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆಸಲಾಗಿದ್ದ ಬಹುತೇಕ ಚುನಾವಣಾಪೂರ್ವ ಸಮೀಕ್ಷೆಗಳು ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಬಹುತೇಕ ಸುಳ್ಳಾಗಿವೆ.

ಬಹುತೇಕ ಚುನಾವಣಾಪೂರ್ವ ಸಮೀಕ್ಷೆಗಳು ಬಿಜೆಪಿ-ಜೆಡಿಯು ‘ಎನ್‌ಡಿಎ ಮೈತ್ರಿಕೂಟ’ ಸುಲಭದ ಗೆಲುವು ಸಾಧಿಸಲಿದೆ. ಆರ್‌ಜೆಡಿ-ಕಾಂಗ್ರೆಸ್‌ ‘ಮಹಾಗಠಬಂಧನ’ 100ಕ್ಕಿಂತ ಕಡಿಮೆ ಸ್ಥಾನ ಗಳಿಸಲಿದೆ ಎಂದು ಅಂದಾಜು ಮಾಡಿದ್ದವು.

ಚುನಾವಣೆ ಮುಗಿದ ರಾತ್ರಿ ಪ್ರಸಾರಗೊಂಡಿದ್ದ ಚುನಾವಣೋತ್ತರ ಸಮೀಕ್ಷೆಗಳು ಇದಕ್ಕೆ ತದ್ವಿರುದ್ಧ ಫಲಿತಾಂಶ ಪ್ರಸಾರ ಮಾಡಿದ್ದವು. ಆರ್‌ಜೆಡಿ-ಕಾಂಗ್ರೆಸ್‌ ಕೂಟ ಭರ್ಜರಿಯಾಗಿ ಗೆಲುವು ಸಾಧಿಸಲಿದೆ. ಎನ್‌ಡಿಎ ಮಣ್ಣುಮುಕ್ಕಲಿದೆ ಎಂದಿದ್ದವು. ‘ಟುಡೇಸ್‌ ಚಾಣಕ್ಯ’ ಸಮೀಕ್ಷೆಯು, ಎನ್‌ಡಿಎಗೆ ಕೇವಲ 55 ಹಾಗೂ ಆರ್‌ಜೆಡಿ ಕೂಟಕ್ಕೆ 180 ಸ್ಥಾನ ಬರಲಿದೆ ಎಂದು ಭವಿಷ್ಯ ನುಡಿದಿತ್ತು.

ಆದರೆ ಈಗ ಫಲಿತಾಂಶ ಗಮನಿಸಿದಾಗ ಇದೆಲ್ಲ ಸುಳ್ಳಾಗಿದೆ. ಕೂದಲೆಳೆ ಅಂತರದಲ್ಲಿ ಉಭಯ ರಂಗಗಳ ನಡುವೆ ಸಮರ ನಡೆದಿದ್ದು, ಎನ್‌ಡಿಎ ಕೂಟ ಕೂದಲೆಳೆಯಲ್ಲಿ ಗೆದ್ದಿರುವುದು ಸ್ಪಷ್ಟವಾಗಿದೆ.

ಎಕ್ಸಿಟ್‌ ಪೋಲ್‌ನ ಪೋಲ್‌ ಆಫ್‌ ಪೋಲ್ಸ್‌

ಎನ್‌ಡಿಎ 103

ಗಠಬಂಧನ 127

ಎಲ್‌ಜೆಪಿ+ಇತರರು 13

click me!