ಪ್ರತಿವರ್ಷ ಪ್ರಧಾನಿ ಮೋದಿಗೆ ರಾಖಿ ಕಟ್ಟುವ ಪಾಕ್‌ ಮೂಲದ ತಂಗಿ!; ಯಾರೀಕೆ ಕಮರ್‌ ಮೊಹ್ಶಿನ್‌ ಶೇಖ್‌!

By Santosh NaikFirst Published Aug 19, 2024, 7:50 AM IST
Highlights

Raksha Bandhan 2024 ನಾನು ರಾಖಿಯನ್ನು ಮಾರ್ಕೆಟ್‌ನಿಂದ ಖರೀದಿ ಮಾಡೋದಿಲ್ಲ. ರಕ್ಷಾಬಂಧನಕ್ಕೂ ಮುನ್ನ ನಾನೇ ಹಲವಾರು ರಾಖಿಗಳನ್ನು ತಯಾರಿಸುತ್ತೇನೆ. ಇದನ್ನು ತಮ್ಮ ಕೈಗಳಲ್ಲಿ ಧರಿಸಲು ಇಷ್ಟಪಡುವವರನ್ನು ಇದಕ್ಕೆ ಆಯ್ಕೆ ಮಾಡುತ್ತೇನೆ ಎಂದು ಕಮರ್‌ ಶೇಖ್‌ ಹೇಳುತ್ತಾರೆ.

ನವದೆಹಲಿ (ಆ.19): ಇಂದು ದೇಶದಾದ್ಯಂತ ರಕ್ಷಾಬಂಧನದ ಸಂಭ್ರಮ. ಈ ಸಮಯದಲ್ಲಿ ಪ್ರತಿವರ್ಷ ಪ್ರಧಾನಿ ಮೋದಿಗೆ ರಾಖಿ ಕಟ್ಟುವ ವಿಶೇಷ ವ್ಯಕ್ತಿಯ ಬಗ್ಗೆ ತಿಳಿಸಲೇಬೇಕಾದ ಸಮಯ ಬಂದಿದೆ. ಇವರು ಭಾರತದ ಮೂಲದವರಲ್ಲ. ಪಾಕಿಸ್ತಾನ ಮೂಲದ ಮಹಿಳೆ ಪ್ರತಿವರ್ಷವೂ ಪ್ರಧಾನಿ ಮೋದಿಗೆ ತಪ್ಪದೆ ರಾಖಿ ಕಟ್ಟುತ್ತಾರೆ. ವರದಿಗಳ ಪ್ರಕಾರ, ಪಾಕಿಸ್ತಾನ ಮೂಲಕ ಕಮರ್‌ ಮೊಹ್ಶಿನ್‌ ಶೇಖ್‌ ಮೂರು ದಶಕಗಳಿಂದ ಈ ಆಚರಣೆಯನ್ನು ಆಚರಿಸಿದ್ದಾರೆ. ಈ ವರ್ಷವೂ ಕೂಡ ನವದೆಹಲಿಗೆ ಭೇಟಿ ನೀಡಿ ಪ್ರಧಾನಿಗೆ ರಾಖಿ ಕಟ್ಟಲಿದ್ದಾರೆ ಎಂದು ವರದಿಯಾಗಿದೆ. ನರೇಂದ್ರ ಮೋದಿಗಾಗಿ ಸ್ವತಃ ಕಮರ್‌ ಶೇಖ್‌ ಅವರೇ ರಾಖಿ ತಯಾರು ಮಾಡಿ ಕಟ್ಟುವುದು ವಿಶೇಷ. ಕೋವಿಡ್‌-19 ಸಂದರ್ಭದಲ್ಲಿ ಮಾತ್ರವೇ ಈಕೆಗೆ ಪ್ರಧಾನಿ ಮೋದಿ ಭೇಟಿ ಮಾಡಿ ರಾಖಿ ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ, ಪೋಸ್ಟ್‌ ಮೂಲಕ ಮೋದಿ ಅವರಿಗೆ ರಾಖಿಯನ್ನು ಕಳಿಸಿಕೊಟ್ಟಿದ್ದರು. ನಾನು ರಾಖಿಯನ್ನು ಮಾರ್ಕೆಟ್‌ನಿಂದ ಖರೀದಿ ಮಾಡೋದಿಲ್ಲ. ರಕ್ಷಾಬಂಧನಕ್ಕೂ ಮುನ್ನ ನಾನೇ ಹಲವಾರು ರಾಖಿಗಳನ್ನು ತಯಾರಿಸುತ್ತೇನೆ. ಇದನ್ನು ತಮ್ಮ ಕೈಗಳಲ್ಲಿ ಧರಿಸಲು ಇಷ್ಟಪಡುವವರನ್ನು ಇದಕ್ಕೆ ಆಯ್ಕೆ ಮಾಡುತ್ತೇನೆ ಎಂದು ಕಮರ್‌ ಶೇಖ್‌ ಹೇಳುತ್ತಾರೆ.

ಯಾರಿವರು ಕಮರ್‌ ಮೊಹ್ಶಿನ್‌ ಶೇಖ್‌: ಕರಾಚಿಯ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಕಮರ್‌, 1981 ರಲ್ಲಿ ಮೊಹ್ಸಿನ್ ಶೇಖ್ ಅವರನ್ನು ವಿವಾಹವಾದ ಬಳಿಕ ಅಹಮದಾಬಾದ್‌ಗೆ ಶಿಫ್ಟ್‌ ಆಗಿದ್ದರು. ಪ್ರಧಾನಿ ಮೋದಿ ಆರೆಸ್ಸೆಸ್‌ನ ಕಾರ್ಯಕರ್ತರಾಗಿದ್ದಾಗ ಅವರು ಮೊದಲ ಬಾರಿಗೆ ಮೋದಿ ಅವರನ್ನು ಭೇಟಿಯಾಗಿದ್ದರು. "ನಾನು ಪ್ರಧಾನಿ ಮೋದಿಯನ್ನು ಮೊದಲ ಬಾರಿಗೆ ಭೇಟಿಯಾದಾಗ, ಅವರು ಕೇವಲ ಆರ್‌ಎಸ್‌ಎಸ್‌ನ ಕಾರ್ಯಕರ್ತರಾಗಿದ್ದರು" ಎಂದು ಕಮರ್‌ ಹೇಳಿದ್ದಾರೆ. 

Latest Videos

1990 ರಲ್ಲಿ ಅಂದಿನ ಗುಜರಾತ್ ರಾಜ್ಯಪಾಲರಾಗಿದ್ದ ಡಾ. ಸ್ವರೂಪ್ ಸಿಂಗ್ ಅವರೊಂದಿಗೆ ಮೊದಲ ಬಾರಿಗೆ ಪ್ರಧಾನಿ ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದನ್ನು ಶೇಖ್ ನೆನಪಿಸಿಕೊಂಡಿದ್ದಾರೆ. ಅಂದು ಮಾತನಾಡುವ ವೇಳೆ, ಈಕೆ ನನ್ನ ಮಗಳಿದ್ದಂತೆ ಎಂದು ಸ್ವರೂಪ್‌ ಸಿಂಗ್‌ ಮೋದಿ ಅವರಿಗೆ ಕಮರ್‌ ಶೇಖ್‌ರನ್ನು ಪರಿಚಯಿಸಿದ್ದಾರೆ. ಹಾಗಿದ್ದರೆ, ಇವರು ನನಗೆ ಸಹೋದರಿಯಾಗಬೇಕು ಎಂದು ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದರು. ಅಂದಿನಿಂದ ರಕ್ಷಾ ಬಂಧನದ ಹಬ್ಬದಲ್ಲಿ ಅವರಿಗೆ ರಾಖಿ ಕಟ್ಟುತ್ತಿದ್ದೇನೆ ಎಂದು ಶೇಖ್ ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗಲೂ ನಾನು ಪ್ರತಿವರ್ಷ ಅವರಿಗೆ ರಾಖಿ ಕಟ್ಟಿದ್ದೇನೆ. ''ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ಪ್ರತಿದಿನ ಪ್ರಾರ್ಥಿಸುತ್ತೇನೆ. ನನ್ನ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಾನು ನಂಬುತ್ತೇನೆ. ಈ ಹಿಂದೆ ನಾನು ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಬೇಕೆಂದು ಪ್ರಾರ್ಥಿಸಿದಾಗ ಅವರು ಆ ಸ್ಥಾನಕ್ಕೆ ಏರಿದ್ದರು ”ಎಂದು ಅವರು ಹೇಳಿದರು.

ರಕ್ಷಾಬಂಧನ ಬಂತಲ್ವಾ.. ತಂಗಿಗೆ ಗಿಫ್ಟ್‌ ಕೊಡೋಕೆ ಇಲ್ಲಿವೆ ನೋಡಿ 7 ಸಾವಿರ ರೂಪಾಯಿ ಒಳಗಿನ ಮೊಬೈಲ್ಸ್‌!

ಅವರು ಪ್ರಧಾನಿ ಮಂತ್ರಿ ಕೂಡ ಆಗಬೇಕು ಎಂದು ನನ್ನ ಆಸೆಯಾಗಿತ್ತು. ಇದನ್ನು ಅವರ ಬಳಿ ಹೇಳಿದಾಗ, ಅವರ ಪ್ರತಿಕ್ರಿಯೆ ಕೂಡ ಸಕಾರಾತ್ಮಕವಾಗಿತ್ತು. ನಿಮ್ಮ ಎಲ್ಲಾ ಆಸೆಗಳನ್ನು ದೇವರು ಪೂರೈಸುತ್ತಾರೆ ಎಂದು ಹೇಳಿದ್ದರು. ದೇಶಕ್ಕಾಗಿ ಅವರು ಶ್ಲಾಘನೀಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. 2024ರ ಲೋಕಸಭೆ ಚುನಾವಣೆಗೆ ಮುನ್ನ ಶೇಖ್ ಅವರು ಪ್ರಧಾನಿ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದರು. "ಅವರು ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಇದಕ್ಕೆ ಅರ್ಹರು ಏಕೆಂದರೆ ಅವರು ಆ ಸಾಮರ್ಥ್ಯಗಳನ್ನು ಹೊಂದಿದ್ದಾರೆ ಮತ್ತು ಪ್ರತಿ ಬಾರಿಯೂ ಅವರು ಭಾರತದ ಪ್ರಧಾನಿಯಾಗಬೇಕೆಂದು ನಾನು ಬಯಸುತ್ತೇನೆ" ಎಂದು ತಿಳಿಸಿದ್ದರು.

ರಕ್ಷಾ ಬಂಧನದ ಮೊದಲು ಈ ರಾಶಿಯವರು ಜಾಗರೂಕರಾಗಿರಬೇಕು, ಆರ್ಥಿಕ ನಷ್ಟ ಅಪಾಯ

click me!