ಆರಂಭಿಕ ಟ್ರೆಂಡ್‌ನ ಮೀರಿಸಿ ಬಂಗಾಳದಲ್ಲಿ ಶತಕದ ಗಡಿ ಮುಟ್ಟಿದ ಬಿಜೆಪಿ, ಬೆನ್ನ ಹಿಂದೆಯೇ ಬಂದ ಟಿಎಂಸಿ

Published : May 04, 2026, 09:08 AM IST
west bengal falta repoll 2026 eci order evm tampering bjp tmc clash election violence

ಸಾರಾಂಶ

ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್‌ಗಳಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ ಶತಕದ ಗಡಿ ದಾಟಿ ಮುನ್ನಡೆ ಸಾಧಿಸಿದ್ದರೆ, ಟಿಎಂಸಿ ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದು, ಫಲಿತಾಂಶದ ಚಿತ್ರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ.

ಕೋಲ್ಕತ್ತಾ (ಮೇ 4): ಪಶ್ಚಿಮ ಬಂಗಾಳದ ಗದ್ದುಗೆಗಾಗಿ ನಡೆಯುತ್ತಿರುವ ಹೋರಾಟ ಈಗ ರೋಚಕ ಹಂತಕ್ಕೆ ತಲುಪಿದೆ. ಆರಂಭಿಕ ಟ್ರೆಂಡ್‌ಗಳಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಫಲಿತಾಂಶದ ಚಿತ್ರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಮುನ್ನಡೆಯ ಲೆಕ್ಕಾಚಾರದಲ್ಲಿ ಆರಂಭಿಕ ಟ್ರೆಂಡ್‌ಅನ್ನು ಮೀರಿಸಿ ಬಂಗಾಳದಲ್ಲಿ ಬಿಜೆಪಿ ಶತಕದ ಗಡಿ ಮುಟ್ಟಿದೆ.

ಪ್ರಸ್ತುತ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಬಿಜೆಪಿಯು ಟಿಎಂಸಿಗಿಂತ ಸಣ್ಣ ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 116 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದೆ, ಟಿಎಂಸಿ 109 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್‌ 2 ಹಾಗೂ ಇತರೇ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸುಲ ಬಹುಮತದ ಮ್ಯಾಜಿಕ್‌ ನಂಬರ್‌ 148 ಆಗಿದೆ.

ನೋವಾಪಾರಾದಲ್ಲಿ ಬಿಜೆಪಿ ಭರ್ಜರಿ ಎಂಟ್ರಿ!

ಉತ್ತರ 24 ಪರಗಣ ಜಿಲ್ಲೆಯ ಅತ್ಯಂತ ಕುತೂಹಲಕಾರಿ ಕ್ಷೇತ್ರವಾದ ನೋವಾಪಾರಾದಲ್ಲಿ ಬಿಜೆಪಿಯ ಪ್ರಭಾವಿ ನಾಯಕ ಅರ್ಜುನ್ ಸಿಂಗ್ ಆರಂಭಿಕ ಹಂತದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಕ್ಷೇತ್ರವು ನಿನ್ನೆ 'ವಿವಿಪ್ಯಾಟ್' (VVPAT) ಚೀಟಿಗಳು ರಸ್ತೆಯಲ್ಲಿ ಪತ್ತೆಯಾದ ವಿವಾದದಿಂದಾಗಿ ಸುದ್ದಿಯಲ್ಲಿತ್ತು. ಚುನಾವಣಾ ಆಯೋಗವು ಅವು 'ಮಾಕ್ ಪೋಲ್' ಚೀಟಿಗಳೆಂದು ಸ್ಪಷ್ಟನೆ ನೀಡಿದ್ದರೂ, ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ.

ಬಂಗಾಳದಾದ್ಯಂತ ಮತ ಎಣಿಕೆ ಕೇಂದ್ರಗಳಿಂದ ಬರುತ್ತಿರುವ ಮಾಹಿತಿ ಪ್ರಕಾರ, ಇದು ಇಂಚಿಂಚು ಹೋರಾಟದಂತೆ ಭಾಸವಾಗುತ್ತಿದೆ. ಅಂದರೆ ಒಮ್ಮೆ ಬಿಜೆಪಿ ಮುಂದಿದ್ದರೆ, ಮತ್ತೊಮ್ಮೆ ಟಿಎಂಸಿ ಮೇಲುಗೈ ಸಾಧಿಸುತ್ತಿದೆ. ಈ ಹಗ್ಗಜಗ್ಗಾಟವು ಮಧ್ಯಾಹ್ನದ ವೇಳೆಗೆ ಒಂದು ಸ್ಪಷ್ಟ ರೂಪ ಪಡೆಯುವ ಸಾಧ್ಯತೆಯಿದೆ.

ಬಗ್ನಾನ್, ಅಮ್ಟಾದಲ್ಲಿ ಟಿಎಂಸಿ ಮುನ್ನಡೆ; ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ

ಬಗ್ನಾನ್ ಮತ್ತು ಅಮ್ಟಾದಲ್ಲಿ, ಆರಂಭಿಕ ಟ್ರೆಂಡ್‌ ಅನುಸಾರ ತೃಣಮೂಲ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಬೋಲ್ಪುರ್, ಚಂಚಲ್, ಸುಜಾಪುರ್ ಮತ್ತು ರತುವಾ ಕ್ಷೇತ್ರಗಳಲ್ಲಿಯೂ ಟಿಎಂಸಿ ಮುಂದಿದೆ. ಏತನ್ಮಧ್ಯೆ, ಮಾಲತಿಪುರ ಮತ್ತು ಮೋತಬರಿಯಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‌Thalapathy Vijay ಭವಿಷ್ಯ ನಿರ್ಧಾರವಾಗೋ ದಿನವೇ ತಿರುಪತಿ ಮೊರೆ ಹೋದ ನಟಿ ತ್ರಿಶಾ; ಈಗಲೇ ಇಷ್ಟು ಬೆಂಬಲವೇ?
ಮಗಳಿಗೆ ಮೊಬೈಲ್ ಗೀಳು ಬಿಡಿಸಲು ಬೌನ್ಸರ್‌ ನೇಮಕ; ಮಾಸಿಕ ₹65000 ವೇತನ ಫಿಕ್ಸ್‌!