ಪಶ್ಚಿಮ ಬಂಗಾಳದ ಕದನ ಕಣ: ಸಿಎಂ ಮಮತಾ ಬ್ಯಾನರ್ಜಿ ಬತ್ತಳಿಕೆಯಲ್ಲಿರೋ ಅಸ್ತ್ರ ಯಾವುದು?

Published : Mar 16, 2026, 10:43 AM IST
CM Mamata Banerjee

ಸಾರಾಂಶ

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈ ಲೇಖನವು ಟಿಎಂಸಿ, ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳ ಶಕ್ತಿ, ದೌರ್ಬಲ್ಯ, ಅವಕಾಶಗಳು ಮತ್ತು ಸವಾಲುಗಳನ್ನು ಆಳವಾಗಿ ವಿಶ್ಲೇಷಿಸುತ್ತದೆ.

ಟಿಎಂಸಿ, ಬಿಜೆಪಿ ನೇರ ಸಮರ

ಟಿಎಂಸಿ

ಶಕ್ತಿ: ಸಿಎಂ ಮಮತಾ ಜನಪ್ರಿಯತೆ. ತಳಮಟ್ಟದವರೆಗೆ ಪಕ್ಷದ ಸಂಘಟನೆ ಬಲಿಷ್ಠ. ಅತಿದೊಡ್ಡ ಕಾರ್ಯಕರ್ತರ ಪಡೆಯನ್ನು ಪಕ್ಷ ಹೊಂದಿದೆ. ಪಂಚಾಯತಿ, ನಗರಸಭೆಯಂಥ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಅಧಿಕಾರ. ಸರ್ಕಾರದ ಜನಪರ ಕಾರ್ಯಕ್ರಮ. ಎಸ್‌ಐಆರ್‌ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಯಶಸ್ವಿ.

ದೌರ್ಬಲ್ಯ: ಅಧಿಕಾರ ವಿರೋಧಿ ಅಲೆ ಇದೆ. ಭ್ರಷ್ಟಾಚಾರದ ಆರೋಪ, ಸ್ಥಳೀಯ ನಾಯಕರ ವಿರುದ್ಧ ಜನಾಕ್ರೋಶವಿದೆ. ರಾಜ್ಯದ ಜನರ ನೈಜ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲವಾದ ಆರೋಪ. ಪಕ್ಷದೊಳಗಿನ ಬಣ ಜಗಳ. ಎಸ್‌ಐಆರ್‌ ವೇಳೆ ಪಕ್ಷದ ಮತಬುಟ್ಟಿ ಕಳಚಿದ ಆತಂಕ

ಅವಕಾಶ: ಎಸ್‌ಐಆರ್‌ ವಿವಾದದ ಲಾಭ. ಕಲ್ಯಾಣ ಕಾರ್ಯಕ್ರಮಗಳಿಂದ ಅನುಕೂಲ ಪಡೆದ ದುರ್ಬಲ ವರ್ಗದವರು ಮಮತಾ ಆಡಳಿತ ಬೆಂಬಲಿಸಬಹುದು.

ಬಿಜೆಪಿ

ಶಕ್ತಿ: ಟಿಎಂಸಿಯ ಪ್ರಬಲ ಪ್ರತಿಸ್ಪರ್ಧಿ. ಪ್ರಧಾನಿ ಮೋದಿ ಜನಪ್ರಿಯತೆ. ರಾಜ್ಯದಲ್ಲಿ ಹಿಂದುತ್ವದ ಅಲೆ ಸೃಷ್ಟಿಸುವಲ್ಲಿ ಯಶಸ್ವಿ. ಸರ್ಕಾರದ ಭ್ರಷ್ಟಾಚಾರ ಕಾನೂನು ಸುವ್ಯವಸ್ಥೆ ವೈಫಲ್ಯ ವಿರುದ್ಧ ಧ್ವನಿ ಎತ್ತುವ ಮೂಲಕ ಗಟ್ಟಿ ಅಭಿಯಾನ. ಎಡಪಂಥೀಯ, ಕಾಂಗ್ರೆಸ್‌ನ ಮತಬುಟ್ಟಿಗೆ ಕೈಹಾಕುವಲ್ಲಿ ಯಶಸ್ವಿ.

ದೌರ್ಬಲ್ಯ: ಪ್ರಚಾರಕ್ಕಾಗಿ ಹೊರಗಿನವರನ್ನೇ ನೆಚ್ಚಿಕೊಂಡಿದೆ. ಮೋದಿ ಸೇರಿ ಕೇಂದ್ರದ ನಾಯಕರೇ ಬಿಜೆಪಿ ಪಾಲಿಗೆ ಸ್ಟಾರ್‌ ಪ್ರಚಾರಕರು. ಎಸ್‌ಐಆರ್‌ ಗೊಂದಲ ಬಿಜೆಪಿಗೆ ನಷ್ಟ ಮಾಡಬಹುದು. ಆಂತರಿಕ ಕಚ್ಚಾಟ. ತಳಮಟ್ಟದಲ್ಲಿ ಸಂಘಟನೆ ಗಟ್ಟಿ ಇಲ್ಲ. ಮಮತಾ ವರ್ಚಸ್ಸಿಗೆ ಸರಿಸಮಾನಾದ ನಾಯಕನ ಕೊರತೆ.

ಅವಕಾಶ: ಆಡಳಿತ ವಿರೋಧಿ ಅಲೆ. ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಸಮಸ್ಯೆ, ಅಭಿವೃದ್ಧಿಯ ಕೊರತೆ. ಸಾಮೂಹಿಕ ನಾಯಕತ್ವದೊಂದಿಗೆ ಕಣಕ್ಕಿಳಿದು ಮಮತಾ ಬ್ಯಾನರ್ಜಿ ಅವರ ವರ್ಚಸ್ಸನ್ನು ಸಮರ್ಥವಾಗಿ ಎದುರಿಸಬಹುದು.

ಕಾಂಗ್ರೆಸ್‌

ಶಕ್ತಿ: 2021ರಲ್ಲಿ ಶೂನ್ಯ ಸುತ್ತಿದರೂ ಮಾಲ್ಡಾ, ಮುರ್ಷಿದಾಬಾದ್‌, ನಡಿಯಾ ಮತ್ತಿತರ ಉತ್ತರ ಮತ್ತು ಮಧ್ಯ ಬಂಗಾಳದಲ್ಲಿ ಕಾಂಗ್ರೆಸ್‌ನ ಪ್ರಭಾವ ಇನ್ನೂ ಇದೆ.

ದೌರ್ಬಲ್ಯ: ಪಕ್ಷವಿರೋಧಿ ಚಟುವಟಿಕೆ, ಭಿನ್ನಮತ ಹಾಗೂ ಸಂಘಟನಾ ಕೊರತೆಯ ಕಾರಣ ಹಲವು ಜಿಲ್ಲೆಗಳಲ್ಲಿ ಪಕ್ಷ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಸಾಲು ಸಾಲು ಸೋಲುಗಳ ಹೊರತಾಗಿಯೂ ಪಕ್ಷ ಇನ್ನೂ ಪಾಠ ಕಲಿತಿಲ್ಲ.

ಅವಕಾಶ: ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಅನುಕೂಲ ಆಗಲಿದೆ. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮೂರನೇ ಪರ್ಯಾಯಶಕ್ತಿಯಾಗಿ ಬಿಂಬಿಸಿಕೊಳ್ಳಲು ಅವಕಾಶ.

ಸಿಪಿಎಂ

ಶಕ್ತಿ: ಟಿಎಂಸಿ ವಿರುದ್ಧದ ಭ್ರಷ್ಟಾಚಾರದ ಆರೋಪ ಮತ್ತು ಧಾರ್ಮಿಕತೆಯ ಆಧಾರದ ಮೇಲಿನ ವಿಭಜನೆಯ ವಿರುದ್ಧ ಜನಾಭಿಪ್ರಾಯ ರೂಪಿಸಿದೆ. ಪಕ್ಷದ ಬಹುತೇಕ ನಾಯಕರು ಸರಳ ಜೀವನ ಶೈಲಿ, ಶುದ್ಧಹಸ್ತರೆಂಬ ಭಾವನೆ ಜನಸಾಮಾನ್ಯರಲ್ಲಿದೆ. ಶಾಲಾ ನೌಕರಿ ಹಗರಣ, ಆರ್‌.ಜಿ.ಕಾರ್‌ ಮೆಡಿಕಲ್‌ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಅತ್ಯಾ*ಚಾರ-ಕೊಲೆ ಪ್ರಕರಣದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ, ಧರಣಿಯಂಥ ಹೋರಾಟ ರೂಪಿಸಿದೆ.

ದೌರ್ಬಲ್ಯ: ಪ್ರತಿಭಟನೆಗಳು, ಧರಣಿಗಳು ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಪ್ರತಿಫಲ ನೀಡಿಲ್ಲ. 2011ರಲ್ಲಿ ಶೇ.39ರಷ್ಟಿದ್ದ ಮತಪ್ರಮಾಣ ಈಗ ಶೇ.4.73ರಷ್ಟಕ್ಕೆ ತಲುಪಿದೆ. ಪಕ್ಷದ ಸಂಘಟನೆ ದುರ್ಬಲ. ಜನಪ್ರಿಯ ನಾಯಕರ ಕೊರತೆ. ಯುವಕರ ಸೆಳೆಯಲು ವಿಫಲ.

ಅವಕಾಶ: 2024ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಶೇ.5.73ರಷ್ಟು ಮತಗಳಿಸಿದೆ. 2021ಕ್ಕೆ ಹೋಲಿಸಿದರೆ ಮತಪ್ರಮಾಣ ಹೆಚ್ಚಳವಾಗಿದೆ. ಇದು ಪಕ್ಷದಲ್ಲಿ ಭರವಸೆ ಮೂಡಿಸಿದೆ.

ಸವಾಲು: ಈ ಬಾರಿ ಕಾಂಗ್ರೆಸ್‌ ಬೆಂಬಲವಿಲ್ಲದೆ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿಗೆ ಅಡಿಗಲ್ಲು ಹಾಕಿ ವಿವಾದ ಸೃಷ್ಟಿಸಿದ್ದ ಟಿಎಂಸಿ ಶಾಸಕ ಹುಮಾಯೂನ್‌ ಕಬೀರ್‌ ಜತೆಗಿನ ಸಖ್ಯ ಉಲ್ಟಾ ಹೊಡೆಯಬಹುದು.

ಇದನ್ನೂ ಓದಿ: ಬಾಗಲಕೋಟೆ ಉಪಕದನ ಹಣಾಹಣಿಗೆ ವೇದಿಕೆ ಸಜ್ಜು: HY ಮೇಟಿ ನಂತರ ಯಾರಿಗೆ ಪಟ್ಟ? ಕ್ಷೇತ್ರದ ಹಿನ್ನೋ

ಬಂಗಾಳ ಚುನಾವಣೆಯ ಪ್ರಮುಖ ಅಂಶಗಳು

- ವಿಶೇಷ ಮತಪಟ್ಟಿ ಪರಿಷ್ಕರಣೆ ಬಗ್ಗೆ ಸರ್ಕಾರ, ವಿಪಕ್ಷ ಜಟಾಪಟಿ

- ಅಕ್ರಮ ವಲಸಿಗರ ನುಸುಳುವಿಕೆಗೆ ಕಡಿವಾಣ ಬೀಳದಿರುವುದು

- ಟಿಎಂಸಿ ಸರ್ಕಾರದ ವಿರುದ್ಧ ವಿಪಕ್ಷಗಳ ಭ್ರಷ್ಟಾಚಾರ ಆರೋಪ

- 25,000ಕ್ಕೂ ಹೆಚ್ಚು ಶಾಲಾ ಶಿಕ್ಷಕರ ನೇಮಕಾತಿ ಹಗರಣ

- ರಾಜ್ಯದಲ್ಲಿನ ಕೋಮು ಸಂಘರ್ಷ, ಧರ್ಮ ರಾಜಕೀಯ ವಿವಾದ

- ರಾಜ್ಯದಲ್ಲಿ ಹೆಚ್ಚುತ್ತಿರುವ ಹಲ್ಲೆ, ಕಿರುಕುಳ, ಕಳ್ಳಸಾಗಣೆ ಘಟನೆ

- ಆರ್‌ಜಿ ಕರ್‌, ಕಾನೂನು ಕಾಲೇಜಿನ ಅತ್ಯಾ*ಚಾರ ಘಟನೆಗಳು

- ವಿಶೇಷ ಮತಪಟ್ಟಿ ಪರಿಷ್ಕರಣೆ ಬಗ್ಗೆ ಸರ್ಕಾರ, ವಿಪಕ್ಷ ಜಟಾಪಟಿ

- ಅಕ್ರಮ ವಲಸಿಗರ ನುಸುಳುವಿಕೆಗೆ ಕಡಿವಾಣ ಬೀಳದಿರುವುದು

- ಟಿಎಂಸಿ ಸರ್ಕಾರದ ವಿರುದ್ಧ ವಿಪಕ್ಷಗಳ ಭ್ರಷ್ಟಾಚಾರ ಆರೋಪ

- 25,000ಕ್ಕೂ ಹೆಚ್ಚು ಶಾಲಾ ಶಿಕ್ಷಕರ ನೇಮಕಾತಿ ಹಗರಣ

- ರಾಜ್ಯದಲ್ಲಿನ ಕೋಮು ಸಂಘರ್ಷ, ಧರ್ಮ ರಾಜಕೀಯ ವಿವಾದ

- ರಾಜ್ಯದಲ್ಲಿ ಹೆಚ್ಚುತ್ತಿರುವ ಹಲ್ಲೆ, ಕಿರುಕುಳ, ಕಳ್ಳಸಾಗಣೆ ಘಟನೆ

- ಆರ್‌ಜಿ ಕರ್‌, ಕಾನೂನು ಕಾಲೇಜಿನ ಅತ್ಯಾ*ಚಾರ ಘಟನೆಗಳು

ಇದನ್ನೂ ಓದಿ: ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ: ಯಾರಿಗೆ ಸಿಗಲಿದೆ ಅಧಿಕಾರದ ಗದ್ದುಗೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ: ಯಾರಿಗೆ ಸಿಗಲಿದೆ ಅಧಿಕಾರದ ಗದ್ದುಗೆ?
ಚುನಾವಣೆ ಘೋಷಣೆಗೂ ಕೆಲ ನಿಮಿಷಕ್ಕೂ ಮುನ್ನ ಮಮತಾ ಬಂಪರ್‌ ಘೋಷಣೆ; ದೀದಿ ಕೊನೇ ಕ್ಷಣದ ಆಟ?