ಮದುವೆ ದಿನ ವರ ನಾಪತ್ತೆ: ಹಸೆಮಣೆಯಲ್ಲೇ 2 ದಿನ ಕಾದು ಕುಳಿತ ವಧು!

By Sathish Kumar KH  |  First Published Oct 9, 2024, 8:43 PM IST

ರಾಜಸ್ಥಾನದ ಅನೂಪ್‌ಗಢದಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭದಲ್ಲಿ ವರ ತಾಳಿ ಕಟ್ಟುವ ವೇಳೆಗೆ ಬರದೇ ನಾಪತ್ತೆಯಾಗಿದ್ದಾನೆ. ಈತನಿಗಾಗಿ ವಧು ಎರಡು ದಿನ ಕಾದು ಕುಳಿತು ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.


ಜೈಪುರ (ಅ.09): ರಾಜಸ್ಥಾನದ ಗಡಿ ಜಿಲ್ಲೆಯಾದ ಅನೂಪ್‌ಗಢದಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 6 ರಂದು ವಧುವೊಬ್ಬಳ ಮದುವೆ ನಡೆಯಬೇಕಿತ್ತು. ಅವರು ತಮ್ಮ ವರನಿಗಾಗಿ ಕಾತರದಿಂದ ಕಾಯುತ್ತಿದ್ದರು. ಸಂಬಂಧಿಕರು ಸಹ ವರನ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮುಹೂರ್ತ ಮೀರಿದ್ದರೂ ವರ ಬರಲಿಲ್ಲ, ಫೋನ್ ಸಹ ಎತ್ತಲಿಲ್ಲ. ಎರಡು ದಿನ ಅದೇ ಹಸೆಮಣೆಯಲ್ಲಿ ಕಾದು ಕುಳಿತ ವಧು ಕೊನೆಗೆ ವರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಮದುವೆ ಡ್ರೆಸ್ ಧರಿಸಿದೇ ಎರಡು ದಿನ ಕಾದು ಕುಳಿತ ವಧು: ಶ್ರೀಗಂಗಾನಗರ ಜಿಲ್ಲೆಯ 25 ವರ್ಷದ ಯುವತಿ ಈ ಘಟನೆಗೆ ಸಾಕ್ಷಿಯಾದ ವಧು ಆಗಿದ್ದಾಳೆ. ತಮ್ಮ ಸಂಬಂಧಿಕರೇ ಹುಡುಗನನ ಜೊತೆಗೆ ಯುವತಿಯ ಮದುವೆಯನ್ನು ನಿಶ್ಚಯ ಮಾಡಿದ್ದರು. ವರ ಅನೂಪ್‌ಗಢ ಜಿಲ್ಲೆಯ ಪರತೋಡ ಗ್ರಾಮದವನಾಗಿದ್ದಾನೆ. ಮದುವೆಗೆ ಮೊದಲು ಕಾರ್ಡ್‌ಗಳನ್ನು ಹಂಚಲಾಗಿತ್ತು ಮತ್ತು ಅಕ್ಟೋಬರ್ 6 ರಂದು ಮದುವೆ ನಿಶ್ಚಯಿಸಲಾಗಿತ್ತು. ವಧು ಸಂಪೂರ್ಣವಾಗಿ ಸಿದ್ಧಳಾಗಿ ತನ್ನ ವರನಿಗಾಗಿ ಕಾಯುತ್ತಿದ್ದಳು. ಆದರೆ ತಾಳಿ ಕಟ್ಟುವ ವೇಳೆ ಇಡೀ ಮದುವೆ ಮಂಟದ ರೂಪವೇ ಬದಲಾಗಿ ಹೋಗಿದೆ.

Tap to resize

Latest Videos

undefined

ಇದನ್ನೂ ಓದಿ: ಬೆಂಗಳೂರು ಲವ್ ಜಿಹಾದ್: ಗರ್ಭಿಣಿ ಮಾಡಿದ್ದೀಯ ಮದುವೆಯಾಗು ಅಂದ್ರೆ ಮತಾಂತರ ಆಗು ಎಂದ ಬಿಲಾಲ್!

ಮದುವೆಗೆ ಮೊದಲು ಗರ್ಭಿಣಿ: ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಗ್ರಾಮದ ಜಾತ್ರೆಯೊಂದರಲ್ಲಿ ಯುವಕ ಮತ್ತು ಯುವತಿ ಭೇಟಿಯಾಗಿದ್ದರು. ನಂತರ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಭೇಟಿಯಾಗಲು ಪ್ರಾರಂಭಿಸಿದರು. ಈ ಸಮಯದಲ್ಲಿ ಅವರ ನಡುವೆ ದೈಹಿಕ ಸಂಬಂಧ ಸಹ ಬೆಳೆಯಿತು. ಯುವಕ ಯುವತಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು. ಈ ಮಧ್ಯೆ ಯುವತಿ ಗರ್ಭಿಣಿಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಯುವಕ ಆಕೆಯ ಗರ್ಭಪಾತವನ್ನು ಸಹ ಮಾಡಿಸಿದ್ದನು. ಈಗ ಮನೆಯವರೆಲ್ಲರ ಒಪ್ಪಿಗೆ ಮೇರೆಗೆ ಅಕ್ಟೋಬರ್‌ನಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಆದರೆ, ಇದೀಗ ತಾಳಿ ಕಟ್ಟಬೇಕು ಎನ್ನುವಾಗ ವರ ನಾಪತ್ತೆಯಾಗಿದ್ದಾನೆ. ಯುವತಿಯ ತಂದೆ ಮತ್ತು ಸಹೋದರ ಮೃತಪಟ್ಟಿದ್ದು, ಆಕೆ ತಮ್ಮ ಹಾಗೂ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಮದುವೆ ಸಂದರ್ಭದಲ್ಲಿ ವರ ಕೈಕೊಟ್ಟಿರುವುದಕ್ಕೆ ತೀವ್ರ ಚಿಂತಾಕ್ರಾಂತಳಾಗಿದ್ದಾಳೆ.

ಇದನ್ನೂ ಓದಿ: ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ನೋಡಲು ರಜೆ ಘೋಷಣೆ ಮಾಡಿದ ಖಾಸಗಿ ಕಂಪನಿ

ಪೊಲೀಸರ ಮುಂದಿನ ನಡೆ ಏನು?
ಈ ಘಟನೆಯ ಬಗ್ಗೆ ಪೊಲೀಸರು ಹೇಳುವುದೇನೆಂದರೆ, ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಈಗ ಯುವಕ ಯುವತಿಗೆ ಮೋಸ ಮಾಡಿ ತಾಳಿ ಕಟ್ಟುವ ವೇಳೆಗೆ ಕೈಕೊಟ್ಟು ಪರಾರಿ ಆಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಯುವತಿ ಗರ್ಭಪಾತವನ್ನು ಎಲ್ಲಿ ಮಾಡಿಸಿದ್ದಾಳೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅದರ ದಾಖಲೆಗಳನ್ನು ಸಹ ಪಡೆಯಲಾಗುತ್ತಿದೆ. ಆರೋಪಿಯಲ್ಲದೆ ಆತನ ಸ್ನೇಹಿತನ ವಿರುದ್ಧವೂ ದೂರು ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

click me!