ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮದೇ ಪಕ್ಷದ ನಾಯಕರನ್ನು ತಮಾಷೆ ಮಾಡಿದ್ದಾರೆ. ಮೋದಿ ಸರ್ಕಾರ 4 ಬಾರಿಗೂ ಅಧಿಕಾರಕ್ಕೆ ಬರುವುದು ಅನುಮಾನ ಎಂದು ಹೇಳಿದ ನಿತಿನ್ ಗಡ್ಕರಿ, ನಂತರ ಇದು ತಮಾಷೆ ಎಂದು ತಿಳಿಸಿದ್ದಾರೆ.
ನಾಗ್ಪುರ: ‘ನಮ್ಮ ಸರ್ಕಾರ (ಮೋದಿ ಸರ್ಕಾರ) 4 ಬಾರಿಗೂ ಅಧಿಕಾರಕ್ಕೆ ಬರುವುದು ಖಚಿತವಿಲ್ಲ. ಆದರೂ ರಾಮದಾಸ್ ಅಠಾವಳೆ ಅವರು ಮಂತ್ರಿಯಾಗುವುದು ಖಂಡಿತ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮದೇ ಪಕ್ಷದ ಸಚಿವರನ್ನು ಕುರಿತು ತಮಾಷೆ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮಹಾಯುತಿ ಮೈತ್ರಿ ಸರ್ಕಾರದ ಭಾಗವಾಗಿರುವ ತಮ್ಮ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 10-12 ಸೀಟುಗಳಲ್ಲಿ ಸ್ಪರ್ಧಿಸಲು ಅವಕಾಶ ಕೊಡಬೇಕು ಎಂದು ಅಠಾವಳೆ ಆಗ್ರಹಿಸಿದ ಬೆನ್ನಲ್ಲೇ ಗಡ್ಕರಿ ಹೀಗೆ ಹೇಳಿದ್ದು, ‘ಇದು ಬರಿ ತಮಾಷೆ’ ಎಂದು ಸ್ಪಷ್ಟಪಡಿಸಿದ್ದಾರೆ.
ರಸ್ತೆ ಗುಂಡಿಯಲ್ಲಿ ಹೂತು ಹೋದ ಕೇಂದ್ರ ಸಚಿವ ಸಂಚರಿಸುತ್ತಿದ್ದ ಕಾರು, ದೃಶ್ಯ ಸೆರೆ!
3 ಬಾರಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಅಠಾವಳೆ, ಈ ಮುಂಚೆ ಬಿಜೆಪಿಯೇತರ ಪಕ್ಷಗಳ ಜತೆಗೆ ಕೈಜೋಡಿಸಿ ಅಧಿಕಾರದಲ್ಲಿದ್ದರು. ಮೋದಿ ಅಧಿಕಾರಕ್ಕೆ ಬಂದಾಗ ಎನ್‌ಡಿಎಗೆ ಜಿಗಿದು ಸತತವಾಗಿ 3 ಸಲ ಮಂತ್ರಿಯಾಗಿದ್ದಾರೆ.
ವಿದ್ಯುತ್ ಕಡಿತ ಸಮಸ್ಯೆಯಿಂದ ಪ್ರಯಾಗ್‌ರಾಜ್ ಮಹಾಕುಂಭ ಮುಕ್ತಿ, ಯೋಗಿ ನಿರ್ದೇಶನದಲ್ಲಿ ತಯಾರಿ!