ಪಪುವಾ ನ್ಯೂಗಿನಿಯಾದಲ್ಲಿ ಜ್ವಾಲಾಮುಖಿ ಸ್ಫೋಟ: 8 ಕೋಟಿಗೂ ಅಧಿಕ ನೆರವು ಘೋಷಿಸಿದ ಭಾರತ

By BK AshwinFirst Published Dec 7, 2023, 12:47 PM IST
Highlights

ಪಪುವಾ ನ್ಯೂಗಿನಿಯಾದಲ್ಲಿ ಉಲಾವುನ್ ಪರ್ವತದಲ್ಲಿ ಪ್ರಮುಖ ಜ್ವಾಲಾಮುಖಿ ಸ್ಫೋಟ ಉಂಟಾಗಿದೆ. ಈ ಹಿನ್ನೆಲೆ 26,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸುವ ಅಗತ್ಯವಿದೆ ಮತ್ತು ಆ ಪ್ರದೇಶದಲ್ಲಿ ತುರ್ತು ಮಾನವೀಯ ಅಗತ್ಯಗಳನ್ನು ಸೃಷ್ಟಿಸಿದೆ.

ದೆಹಲಿ (ಡಿಸೆಂಬರ್ 7, 2023): ಭಾರತವು ಬುಧವಾರ ಪಪುವಾ ನ್ಯೂಗಿನಿಯಾಕ್ಕೆ 1 ಮಿಲಿಯನ್ ಅಮೆರಿಕ ಡಾಲರ್‌ ಅಂದರೆ 8 ಕೋಟಿಗೂ ಹೆಚ್ಚು ತಕ್ಷಣದ ಪರಿಹಾರ ಸಹಾಯವನ್ನು ಘೋಷಿಸಿದೆ. ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಹಾನಿ ಮತ್ತು ವಿನಾಶ ನಿಭಾಯಿಸಲು ದ್ವೀಪ ರಾಷ್ಟ್ರಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರ ಈ ನೆರವು ಘೋಷಿಸಿದೆ. 

ಪಪುವಾ ನ್ಯೂಗಿನಿಯಾದಲ್ಲಿ ಉಲಾವುನ್ ಪರ್ವತದಲ್ಲಿ ಪ್ರಮುಖ ಜ್ವಾಲಾಮುಖಿ ಸ್ಫೋಟ ಉಂಟಾಗಿದೆ. ಈ ಹಿನ್ನೆಲೆ 26,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸುವ ಅಗತ್ಯವಿದೆ ಮತ್ತು ಆ ಪ್ರದೇಶದಲ್ಲಿ ತುರ್ತು ಮಾನವೀಯ ಅಗತ್ಯಗಳನ್ನು ಸೃಷ್ಟಿಸಿದೆ. ವಿಪತ್ತಿನಿಂದ ಉಂಟಾದ ಹಾನಿ ಮತ್ತು ವಿನಾಶಕ್ಕಾಗಿ ಪಪುವಾ ನ್ಯೂಗಿನಿಯಾದ ಸರ್ಕಾರಕ್ಕೆ ಮತ್ತು ಜನರಿಗೆ ಭಾರತವು ಸಹಾನುಭೂತಿ ವ್ಯಕ್ತಪಡಿಸಿದೆ ಎಂದೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿದೆ.

Latest Videos

ಇದನ್ನು ಓದಿ: ನೆಹರು 2 ತಪ್ಪಿಂದಾಗಿ ಪಿಒಕೆ ದೇಶದ ಕೈತಪ್ಪಿತು: ಅಮಿತ್‌ ಶಾ; ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮದೇ ಎಂದ ಗೃಹ ಸಚಿವ

ಫೋರಮ್ ಫಾರ್ ಇಂಡಿಯಾ-ಪೆಸಿಫಿಕ್ ದ್ವೀಪಗಳ ಸಹಕಾರ (ಎಫ್‌ಐಪಿಐಸಿ) ಅಡಿಯಲ್ಲಿ ನಿಕಟ ಸ್ನೇಹಿತ ಮತ್ತು ಅಭಿವೃದ್ಧಿ ಪಾಲುದಾರರಾಗಿ ಹಾಗೂ ಪಪುವಾ ನ್ಯೂಗಿನಿಯಾದ ಸ್ನೇಹಪರ ಜನರೊಂದಿಗೆ ಒಗ್ಗಟ್ಟಿನ ಸೂಚಕವಾಗಿ, ಭಾರತ ಸರ್ಕಾರವು ಪಪುವಾ ನ್ಯೂಗಿನಿಯಾದಲ್ಲಿ ಪುನರ್ನಿರ್ಮಾಣ ಪ್ರಯತ್ನಗಳಿಗೆ, ಪರಿಹಾರ, ಪುನರ್ವಸತಿ ಮತ್ತು ಬೆಂಬಲಕ್ಕಾಗಿ ತಕ್ಷಣದ ಪರಿಹಾರ ಸಹಾಯವನ್ನು ವಿಸ್ತರಿಸುತ್ತದೆ ಎಂದೂ ವಿದೇಶಾಂಗ ಸಚಿವಾಲಯ ಹೇಳಿದೆ.

ಸಹಾಯದ ಅಡಿಯಲ್ಲಿ ಘೋಷಿಸಲಾದ ಮೊತ್ತವು USD 1 ಮಿಲಿಯನ್ ಅಂದರೆ 8 ಕೊಟಿ ರೂ. ಗೂ ಹೆಚ್ಚಾಗಿದೆ. 2018 ರಲ್ಲಿ ಭೂಕಂಪ ಮತ್ತು 2019 ರಲ್ಲಿ ಜ್ವಾಲಾಮುಖಿ ಸ್ಫೋಟದ ಹಿನ್ನೆಲೆಯಲ್ಲಿ, ನೈಸರ್ಗಿಕ ವಿಕೋಪಗಳಿಂದ ಉಂಟಾದ ಬಿಕ್ಕಟ್ಟು ಮತ್ತು ವಿನಾಶದ ಸಮಯದಲ್ಲಿ ಭಾರತವು ಪಪುವಾ ನ್ಯೂಗಿನಿಯಾದ ಪರವಾಗಿ ದೃಢವಾಗಿ ನಿಂತಿತ್ತೂ ಎಂದೂ MEA ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಭಾರತಕ್ಕೆ ಹರಡಿದ ಚೀನಾದ ನ್ಯೂಮೋನಿಯಾ ಸೋಂಕು, ದೆಹಲಿ ಏಮ್ಸ್‌ನಲ್ಲಿ 7 ಪ್ರಕರಣ ಪತ್ತೆ!

ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣೆಯು ನವೆಂಬರ್ 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಭಾರತದ ಇಂಡೋ - ಪೆಸಿಫಿಕ್ ಸಾಗರಗಳ ಉಪಕ್ರಮದ (ಐಪಿಒಐ) ಪ್ರಮುಖ ಆಧಾರಸ್ತಂಭವಾಗಿದೆ ಎಂದೂ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. 
 

click me!