
ಮುಂಬೈ (ಮೇ.10) ವಿಪಕ್ಷಗಳ ಪ್ರಮುಖ ನಾಯಕಿ, ಎನ್‌ಸಿಪಿಯ ಸಂಸದೆ ಸುಪ್ರಿಯಾ ಸುಳೆ ಕಾರು ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಕ್ಕೀಡಾಗಿದೆ. ಬಾರಾಮತಿ ಕ್ಷೇತ್ರದ ಸಂಸದೆ ಪುಣೆಯಿಂದ ಮುಂಬೈನತ್ತ ತಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇದೇ ವೇಳೆ ಎಕ್ಸ್‌ಪ್ರೆಸ್‌ವೇನಲ್ಲಿ ಅಜಾಗರೂಕತೆ ಹಾಗೂ ಅಡ್ಡಾದಿಡ್ಡಿಯಾಗಿ ಅತೀ ವೇಗದಲ್ಲಿ ಬಂದ ವಾಹನವೊಂದು ಸುಪ್ರಿಯಾ ಸುಳೆ ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಸಂಸದೆ ಸುಪ್ರಿಯಾ ಸುಳೆ ಹಾಗೂ ಕೆಲ ಆಪ್ತರು ಪ್ರಯಾಣಿಸುತ್ತಿದ್ದರು. ಅದೃಷ್ಠವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಸಂಸದೆ ಸುಪ್ರಿಯಾ ಸುಳೆ ಕೆಲದ ನಿಮಿತ್ತ ಪುಣೆಗೆ ಆಗಮಿಸಿದ್ದರು. ಬಳಿಕ ಕಾರ್ಯಕ್ರಮ ಮುಗಿಸಿ ಮರಳಿ ಮುಂಬೈಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಪುಣೆ ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಸುಪ್ರಿಯಾ ಸುಳೆ ಹಾಗೂ ಆಪ್ತರಿದ್ದ ಕಾರು ತೆರಳುತ್ತಿತ್ತು. ಇದೇ ವೇಳೆ ಇದೇ ಹೆದ್ದಾರಿಯಲ್ಲಿ ರ್ಯಾಶ್ ಡ್ರೈವಿಂಗ್ ಮಾಡುತ್ತಾ ಸಾಗಿದ ಕಾರು ಸುಪ್ರಿಯಾ ಸುಳೆ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸುಪ್ರಿಯಾ ಸುಳೆ ಸೇರಿದಂತೆ ಎಲ್ಲರು ಸುರಕ್ಷಿತವಾಗಿದ್ದಾರೆ.
ಹೆದ್ದಾರಿಯಲ್ಲಿ ನಡೆದ ಅಪಘಾತ ಕುರಿತು ಸಂಸದೆ ಸುಪ್ರಿಯಾ ಸುಳೆ ಮಾಹಿತಿ ನೀಡಿದ್ದಾರೆ. ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಮ್ಮ ಕಾರಿಗೆ ಡಿಕ್ಕಿಯಾದ ವಾಹನದ ನಂಬರ್ ಸೇರಿದಂತೆ ಪ್ರಮುಖ ಮಾಹಿತಿಯನ್ನು ನೀಡಿದ್ದಾರೆ. ಇಂದು ಪುಣೆಯಿಂದ ಮುಂಬೈಗೆ ತೆರಳುತ್ತಿದ್ದ ವೇಳೆ ಆತಂತಕಾರಿ ಘಟನೆ ನಡೆದಿದೆ. GJ13CF5257 ನಂಬರ್ ಹೊಂದಿರುವ ಕಾರೊಂದು ಅಡ್ಡಾದಿಡ್ಡಿಯಾಗಿ ಹಾಗೂ ಅತೀ ವೇಗವಾಗಿ ಬಂದು ನಾವು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಅದೃಷ್ಠವಶಾತ್ ಎಲ್ಲರು ಸುರಕ್ಷಿತವಾಗಿದ್ದಾರೆ. ಈ ಘಟನೆ ಅತೀ ವೇಗದ ಹಾಗೂ ಅಜಾಗರೂಕತೆಯ ಚಾಲನೆಗೆ ಹಿಡಿದ ಕನ್ನಡಿಯಾಗಿದೆ. ಇದು ಗಂಭೀರ ವಿಚಾರವಾಗಿದೆ. ಈ ರೀತಿಯ ಚಾಲನೆಯಿಂದ ಹಲವು ಜೀವಗಳು ಹೆದ್ದಾರಿಯಲ್ಲಿ ಬಲಿಯಾಗುತ್ತಿದೆ. ಇದೇ ವೇಳೆ ಎಲ್ಲರು ಸೀಟ್ ಬೆಲ್ಟ್ ಧರಿಸಿ, ಇದೇ ವೇಳೆ ಎಲ್ಲರೂ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ, ಇದರಿಂದ ನಮ್ಮ ಹೆದ್ದಾರಿಗಳು ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತವಾಗಲಿದೆ ಎಂದು ಸುಳೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಮುಂಬೈನ ವಿಪರೀತ ಟ್ರಾಫಿಕ್ ಕುರಿತು ಫೇಸ್‌ಬುಕ್ ಲೈವ್ ಮೂಲಕ ಸುಪ್ರಿಯಾ ಸುಳೆ ಗಮನಸೆಳೆದಿದ್ದರು. ಮುಂಬೈ ಪುಣೆ ಮಿಸ್ಸಿಂಗ್ ಲಿಂಕ್ ಸೆಕ್ಷನ್ ಬಳಿ ಉದ್ಭವಿಸಿದ ಟ್ರಾಫಿಕ್ ಕುರಿತು ಸುಪ್ರಿಯಾ ಸುಳೆ ಲೈವ್ ಮೂಲಕ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಿದ್ದರು. ಬರೋಬ್ಬರಿ ಎರಡು ಗಂಟೆಗಳ ಕಾರು ಈ ಟ್ರಾಫಿಕ್‌ನಲ್ಲು ಸುಪ್ರಿಯಾ ಸುಳೆ ಸಿಲುಕಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ