
ಮುಜಾಫರ್‌ನಗರ (ಏ.28): ಉತ್ತರ ಪ್ರದೇಶ ರಾಜ್ಯದಲ್ಲಿ ಮೇ 4 ಹಾಗೂ 11 ರಂದು ಎರಡು ಹಂತದಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಥುರಾ, ಫಿರೋಜಾಬಾದ್ ಹಾಗೂ ಆಗ್ರಾದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಮಥುರಾ ನಗರದಲ್ಲಿ ಮದ್ಯ ಹಾಗೂ ಮಾಂಸ ಮಾರಾಟವನ್ನು ನಿಷೇಧ ಮಾಡಿದ್ದರ ಹಿಂದಿನ ಕಾರಣವನ್ನೂ ತಿಳಿಸಿದರು. 2017ಕ್ಕೂ ಮುನ್ನ ಮಥುರಾದಲ್ಲಿ ಮದ್ಯ ಹಾಗೂ ಮಾಂಸಗಳನ್ನು ಬೇಕಾಬಿಟ್ಟಿಯಾಗಿ ಮಾರಾಟ ಮಾಡುತ್ತಿದ್ದರು. ಆದರೆ. ಬಿಜೆಪಿ ಅಧಿಕಾರಕ್ಕೆ ಏರಿದ ಬಳಿಕ ಮಥುರಾದಂಥ ಪೌರಾಣಿಕ ನಗರದಲ್ಲಿ ಮದ್ಯ ಹಾಗೂ ಮಾಂಸ ಮಾರಾಟವನ್ನು ನಿಷೇಧ ಮಾಡುವ ನಿರ್ಧಾರ ಮಾಡಿದೆವು. ಯಾಕೆಂದರೆ, ಈ ನಗರ ಹಿಂದೆ ಹಾಲಿನ ನದಿ ಎಂದು ಗುರುತಿಸಿಕೊಂಡಿತ್ತು ಎಂದು ಸಾವರ್ಜಜನಿಕ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ. ಬಿಜೆಪಿ ಯಾರಿಗೂ ತಾರತಮ್ಯ ಮಾಡೋದಿಲ್ಲ, ಹಾಗೆ ಅರಾಜಕತೆಗೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಹೇಳಿದರು. "ಮದ್ಯ ಮತ್ತು ಮಾಂಸ ಮಾರಾಟ ಮಾಡುವ ಜನರಿಗೆ ಮಿಲ್ಕ್‌ಶೇಕ್‌ಗಳು, ತರಕಾರಿಗಳನ್ನು ಮಾರಾಟ ಮಾಡುವಂತೆ ಹೇಳಿದ್ದೇವೆ ಮತ್ತು ಪವಿತ್ರ ನಗರದ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಹಿನ್ನಡೆಯಾಗಬಾರದು' ಎಂದು ಅವರು ಹೇಳಿದರು.
ಮೊದಲು ಉತ್ತರ ಪ್ರದೇಶದಲ್ಲಿ ಜನರು ಗನ್‌ಗಳನ್ನು ಹಿಡಿದುಕೊಂಡು ಜನರ ಸುಲಿಗೆ ಮಾಡುತ್ತಿದ್ದರು. ಆದರ, ಇಂದು ಟ್ಯಾಬ್ಲೆಟ್‌ಗಳನ್ನು ಹಿಡಿದು ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ 2 ಕೋಟಿಗೂ ಅಧಿಕ ಟ್ಯಾಬ್ಲೆಟ್‌ಗಳನ್ನು ನೀಡಿದ್ದೇವೆ ಎಂದು ಹೇಳಿದ ಯೋಗಿ, "ಇಂದು, ಅಭಿವೃದ್ಧಿಯನ್ನು ದೊಡ್ಡ ಪ್ರಮಾಣದಲ್ಲಿ ಯೋಜಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗುತ್ತಿದೆ. ಈಗ, ಚೌರಾಸಿ ಕೋಸಿ ಪರಿಕ್ರಮವು ಕೇವಲ ಅಯೋಧ್ಯಾ ಧಾಮದಲ್ಲಿ ನಡೆಯುವುದಿಲ್ಲ ಆದರೆ ಬ್ರಜಧಾಮದಲ್ಲೂ ನಡೆಯುತ್ತದೆ" ಎಂದು ಯೋಗಿ ಹೇಳಿದರು. 2017 ರಲ್ಲಿ ಮಥುರಾ-ವೃಂದಾವನ ಮುನ್ಸಿಪಲ್ ಕಾರ್ಪೊರೇಶನ್ ರಚನೆ ಮತ್ತು ನಂತರ ಬ್ರಜ್ ತೀರ್ಥ ವಿಕಾಸ ಪರಿಷತ್ ಸರ್ವಾಂಗೀಣ ಅಭಿವೃದ್ಧಿಯ ಕ್ರಿಯಾ ಯೋಜನೆಯನ್ನು ಮುಂದಕ್ಕೆ ತೆಗೆದುಕೊಂಡಿದೆ ಎಂದು ಅವರು ಹೇಳಿದರು.
ಪ್ರಗತಿಗಾಗಿ ಟ್ರಿಪಲ್ ಇಂಜಿನ್ ಸರ್ಕಾರ ರಚಿಸಲು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು. ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ರ ಸಂದರ್ಭದಲ್ಲಿ ಯುಪಿ 35 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾಪಗಳನ್ನು ಸ್ವೀಕರಿಸಿದೆ ಎಂದು ಸೂಚಿಸಿದ ಅವರು, ಇದು ಬ್ರಜ್ ಪ್ರದೇಶದಲ್ಲಿ 50,000 ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.
ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯ ಹಸ್ತಮೈಥುನ, ಕಿಡಿಕಿಡಿಯಾದ ಮಹಿಳಾ ಆಯೋಗ!
ಆಗ್ರಾದಲ್ಲಿ ಮಾತನಾಡಿದ ಅವರು, ಯುಪಿಯಲ್ಲಿನ ನಗರಗಳು ಸ್ಮಾರ್ಟ್ ಸಿಟಿಗಳಾಗಿ ರೂಪಾಂತರಗೊಳ್ಳುತ್ತಿವೆ ಮತ್ತು ಕಸದ ತೊಟ್ಟಿಗಳು ಎಂಬ ಹಿಂದಿನ ಕುಖ್ಯಾತಿಯನ್ನು ಹೊಡೆದುಹಾಕಿದೆ ಎಂದರು. "ಈಗ ಆಗ್ರಾದ ಚಿತ್ರಣವೇ ಬದಲಾಗಿದೆ. ಆರು ವರ್ಷಗಳ ಹಿಂದೆ ಎಲ್ಲೆಂದರಲ್ಲಿ ಕಸದ ರಾಶಿ ಇದ್ದವು. ಈಗ ಹಾಗಿಲ್ಲ. ಶೀಘ್ರದಲ್ಲೇ ಆಗ್ರಾಕ್ಕೂ ಮೆಟ್ರೋ ಉಡುಗೊರೆ ಸಿಗಲಿದೆ ಎಂದರು ಹೇಳಿದರು. "ಭಾರತ ಇಂದು ಬದಲಾಗಿದೆ ಮತ್ತು ನಾವು ಈ ಬದಲಾವಣೆಯ ಪ್ರಕ್ರಿಯೆಗೆ ಸೇರಬೇಕು. ಇಂದು, ಪ್ರಮುಖ ಮೂಲಸೌಕರ್ಯ ಮತ್ತು ವಿಮಾನ ನಿಲ್ದಾಣಗಳು, ಐಐಟಿಗಳು ಮತ್ತು ಏಮ್ಸ್‌ನಂತಹ ನಿರ್ಮಾಣ ಯೋಜನೆಗಳು ನಿಗದಿತ ಅವಧಿಯೊಳಗೆ ಪೂರ್ಣಗೊಂಡಿವೆ.
ಇದೇನ್ ಕಾಲ ಬಂತಪ್ಪಾ... ಸೌತೇಕಾಯಿ ಸಾಲದಲ್ಲಿ ಕಿವಿ ಕಳೆದುಕೊಂಡ ಗ್ರಾಹಕ!
ಕಾಶಿ, ಅಯೋಧ್ಯೆ, ಕೇದಾರನಾಥ ಮತ್ತು ಮಹಾಕಾಲ್ ಮುಂತಾದ ಸ್ಥಳಗಳು ಪರಂಪರೆಯ ಗೌರವದಿಂದಾಗಿ ಪುನಶ್ಚೇತನಗೊಂಡಿವೆ. ಇದು ಹೊಸ ಭಾರತ' ಎಂದು ಹೇಳಿದರು. ಬರ್ಸಾನಾ, ಗೋಕುಲ ಮತ್ತು ಗೋವರ್ಧನ ವೈಭವವನ್ನು ಮರಳಿ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ