
ನವದೆಹಲಿ: ಕೇಂದ್ರ ಸಾರಿಗೆ ಸಚಿವರಾಗಿರುವ ನಿತಿನ್ ಗಡ್ಕರಿ (Nitin Gadkari, Minister of Road Transport and Highways of India) ಅವರು ಎಥೆನಾಲ್ ಬಳಕೆ (Use Of ethanol) ಸಂಬಂಧ ಹೊಸ ಕನಸೊಂದನ್ನು ತೆರೆದಿಟ್ಟಿದ್ದಾರೆ. ಅಕ್ಟೋಬರ್ ವೇಳೆಗೆ ಹಲವು ಕಂಪನಿಗಳು ಶೇ.100ರಷ್ಟು ಎಥೆನಾಲ್‌ನಿಂದ ಚಲಿಸಬಲ್ಲ ಕಾರ್‌ಗಳನ್ನು ಲಾಂಚ್ ಮಾಡುವ ಸಾಧ್ಯತೆಗಳಿವೆ. ಈ ಕಾರುಗಳು ಎಥೆನಾಲ್ ಇಂಜಿನ್ ಹೊಂದಿರಲಿವೆ. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಸುಗಮ ಸಾರಿಗೆ ಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಿತಿನ್ ಗಡ್ಕರಿ ಈ ಮಾತುಗಳನ್ನಾಡಿದರು.
ಈ ವೇಳೆ ಶೇ.100ರಷ್ಟು ಎಥೆನಾಲ್ ಬಳಕೆಯಾದ್ರೆ, ಪ್ರತಿ ಲೀಟರ್ ಪೆಟ್ರೋಲ್ ಕೇವಲ 25 ರೂಪಾಯಿ ಆಗುತ್ತದೆ ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು. ದೇಶದಲ್ಲಿ 4 ಕೋಟಿ ಕಾರ್ ಮತ್ತು 20 ಕೋಟಿಯಷ್ಟು ದ್ವಿಚಕ್ರ ವಾಹನಗಳಿವೆ. ಸದ್ಯ ನನ್ನ ಬಳಿ ಟೊಯೊಟೋದ ಇನ್ನೋವಾ ಕಾರ್ ಇದ್ದು, ಇದರಲ್ಲಿ ಶೇ.100ರಷ್ಟು ಎಥೆನಾಲ್ ಬಳಕೆಯಾಗುತ್ತದೆ. ಪೆಟ್ರೋಲ್ ಜೊತೆ ಹೋಲಿಕೆ ಮಾಡಿದ್ರೆ ಇದರ ಬೆಲೆ ಕೇವಲ 25 ರೂಪಾಯಿ ಆಗುತ್ತದೆ ಎಂದು ಸಚಿವರು ಹೇಳಿದರು.
ಎಲೆಕ್ಟ್ರಿಕ್ ಕಾರ್, ಎಲೆಕ್ಟ್ರಿಕ್ ಟೂ ವ್ಹೀಲರ್, ಎಲೆಕ್ಟ್ರಿಕ್ ಬಸ್ (Electric Vehicles) ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೊಂದಿವೆ. ನಾನು ಎಲೆಕ್ಟ್ರಿಕ್ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದಾಗ ಪತ್ರಕರ್ತರು, ರಸ್ತೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಕೆಟ್ಟರೆ ತಳ್ಳಲು ನೀವು ಬರ್ತೀರಾ ಎಂದು ಪ್ರಶ್ನಿಸಿದ್ದರು. ಆದ್ರೆ ಇಂದು ಯಾವ ವಾಹನವೂ ಬಂದ್ ಆಗಿಲ್ಲ. ಈಗ ಮಾರುಕಟ್ಟೆಗೆ ಎಲೆಕ್ಟ್ರಿಕ್ ಟ್ರ್ಯಾಕ್ಟರ್‌ಗಳು ಸಹ ಬಂದಿವೆ ಎಂದರು.
ಮುಂದುವರಿದು ಮಾತನಾಡಿದ ಸಚಿವ ನಿತಿನ್ ಗಡ್ಕರಿ, ನನ್ನ ಬಳಿಯಲ್ಲಿ 5 ಎಲೆಕ್ಟ್ರಿಕ್ ಟ್ರಾಕ್ಟರ್‌ಗಳಿದ್ದು, ಎರಡೂವರೆ ಗಂಟೆ ಚಾರ್ಜ್ ಮಾಡಿದ್ರೆ ಸುಮಾರು 8 ಗಂಟೆ ಕೆಲಸ ಮಾಡುತ್ತವೆ. ಇದರಿಂದಾಗಿ ನನಗೆ ಹೆಚ್ಚು ಉಳಿತಾಯವಾಗುತ್ತಿದೆ ಎಂದು ತಮ್ಮ ಅನುಭವ ಹಂಚಿಕೊಂಡರು. ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಜೊತೆ ತಮ್ಮ ಬಳಿಯಲ್ಲಿ ಹೈಡ್ರೋಜನ್ ಕಾರ್ ಇದೆ ಎಂಬ ವಿಷಯವನ್ನು ಹಂಚಿಕೊಂಡರು. ನಾವು ಶೀಘ್ರದಲ್ಲಿಯೇ ಹೈಡ್ರೋಜನ್ ಬಸ್ ಮತ್ತು ಟ್ರಕ್‌ಗಳನ್ನು ತೆಗೆದುಕೊಂಡು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಾಟಾ, ಸುಜುಕಿ, ಟೊಯೊಟಾ, ಮಹಿಂದ್ರಾ ಸೇರಿದಂತೆ ಎಲ್ಲಾ ಕಂಪನಿಗಳು ಮುಂದಿನ ತಿಂಗಳೊಳಗಾಗಿಯೇ ಶೇ.100ರಷ್ಟು ಎಥೆನಾಲ್ ಇಂಜಿನ್ ಹೊಂದಿರುವ ವಾಹನಗಳನ್ನು ಬಿಡುಗಡೆ ಮಾಡಲಿವೆ. ಇದರಿಂದಾಗಿ ₹22 ಲಕ್ಷ ಕೋಟಿ ಮೌಲ್ಯದ ಇಂಧನ ಉಳಿತಾಯ ಮಾಡುತ್ತದೆ. ಹಳ್ಳಿಗಳಲ್ಲಿರುವ ಬಡವರು ಮತ್ತು ಕಾರ್ಮಿಕರನ್ನು ಸಬಲೀಕರಣಗೊಳಿಸುತ್ತದೆ. ಎಥೆನಾಲ್ ಬಳಕೆಯು ರೈತರು ಮತ್ತು ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಸಚಿವರು ತಿಳಿಸಿದರು.
ಕಾರ್ನ್ ಎಥೆನಾಲ್ ಖರೀದಿಸಲು ಆರಂಭಿಸಿದಾಗ ಪ್ರತಿ ಕ್ವಿಂಟಲ್ ಬೆಲೆ 1200 ರೂಪಾಯಿ ಆಗಿತ್ತು. ಈಗ ಇದರ ಬೆಲೆ 3600 ರೂಪಾಯಿಗಳಷ್ಟಾಗಿದೆ. ಫ್ಲೆಕ್ಸ್ ಇಂಜಿನ್ ಅಂದ್ರೆ ವಾಹನಗಳು ಶೇ.100ರಷ್ಟು ಎಥೆನಾಲ್‌ನಿಂದಲೇ ಚಲಿಸಲಿವೆ. ನಾವು 20% ಎಥೆನಾಲ್ ಅನ್ನು ಜಾರಿಗೆ ತಂದಿದ್ದೇವೆ. ಇದು ಅಮೆರಿಕ ಮತ್ತು ಜರ್ಮನಿ ಸೇರಿದಂತೆ 19 ದೇಶಗಳಲ್ಲಿದೆ ಎಂದರು.
ಇದನ್ನೂ ಓದಿ: ಒಂದು BMW i7 ಕಾರಿಗೆ ಸುರಿಯುವ ಹಣದಲ್ಲಿ ಎಷ್ಟು ಕಾರುಗಳನ್ನ ಖರೀದಿ ಮಾಡಬಹುದು? ಇಲ್ಲಿದೆ ನೋಡಿ ಅಚ್ಚರಿಯ ಲೆಕ್ಕಾಚಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ