
ಲಖನೌ (ಸೆ.30) ಮದುವೆಯಾಗಿ 14 ವರ್ಷಗಳು ಉರುಳಿದೆ. ಇಬ್ಬರು ಮಕ್ಕಳಿದ್ದಾರೆ. ಇದೀಗ ಸಂಸಾರದಲ್ಲಿ ತಳಮಳ ಶುರುವಾಗಿದೆ. ಇದರ ನಡುವೆ ನಡೆಗ ಘಟನೆಯೊಂದು ಕೊನೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಸಂಧಾನ ಮಾಡುವ ಪರಿಸ್ಥಿತಿಗೆ ತಲುಪಿದೆ. ಗಂಡ ಎರಡು ಪ್ಲೇಟ್ ಚೋಲೆ ಬಟುರೆ ಆರ್ಡರ್ ಮಾಡಿದ್ದಾನೆ. ಅಷ್ಟರಲ್ಲೇ ಸ್ಥಳಕ್ಕಾಗಮಿಸಿದ ಪತ್ನಿ ಇನ್ನೊಂದು ಪ್ಲೇಟ್ ಯಾರಿಗೆ ಎಂದು ರಂಪಾಟ ಮಾಡಿದ್ದಾಳೆ. ಜಗಳ ತಾರಕ್ಕೇರಿದೆ. ಕೊನೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ.
ಅಜಯ್ ಹಾಗೂ ಕವಿತಾ ದಂಪತಿಯ ರಂಪಾಟ ಇದೀಗ ಭಾರಿ ಸದ್ದು ಮಾಡುತ್ತಿದೆ. ಅಜಯ್ ಪವಿತ್ರ ಗಂಗಾ ನದಿ ತಟದ ಪಟ್ಟಣಕ್ಕೆ ಆಗಮಿಸಿದ್ದಾನೆ. ಗಂಡ ಅಜಯ್‌ಗೆ ಗೊತ್ತಾಗದಂತೆ ಪತ್ನಿ ಕವಿತಾ ಫಾಲೋ ಮಾಡಿದ್ದಾಳೆ. ಗಂಗಾ ನದಿ ತಟದ ಪಟ್ಟಣದಲ್ಲಿ ಅಜಯ್ ಬೀದಿ ಬದಿಯ ಚಾಟ್ಸ್ ವ್ಯಾಪಾರಿ ಬಳಿ ಎರಡು ಪ್ಲೇಟ್ ಚೋಲೆ ಬಟುರೆ ಆರ್ಡರ್ ಮಾಡಿದ್ದಾರೆ. ಬಳಿಕ ತನ್ನ ಆರ್ಡರ್ ಸಿಗಲು ಕಾಯುತ್ತಾ ನಿಂತಿದ್ದಾನೆ. ಇನ್ನೇನು ವ್ಯಾಪಾರಿ ರೆಡಿ ಮಾಡಿದ ಎರಡು ಪ್ಲೇಟ್ ಚೋಲೆ ಬಟುರೆ ಕೈಗೆ ಸಿಗುತ್ತಿದ್ದಂತೆ ಹೆಂಡತಿ ಹಾಗೂ ತನ್ನ ಸಂಬಂಧಿಕರೊಂದಿಗೆ ಆಗಮಿಸಿದ್ದಾಳೆ.
ತೀರ್ಥ ಕ್ಷೇತ್ರಕ್ಕೆ ಒಬ್ಬನೆ ಬಂದರೆ ಎರಡು ಪ್ಲೇಟ್ ಚೋಲೆ ಬಟುರೆ ಯಾಕೆ ಎಂದು ಹೆಂಡತಿ ಪ್ರಶ್ನಿಸಿದ್ದಾಳೆ. ಇದು ಹೊಟೆಲ್‌ನಲ್ಲಿ ತಂಗಿರುವ ಗಂಡನ ಅಕ್ರಮ ಸಂಬಂಧಕ್ಕೆ ಎಂದು ಪತ್ನಿ ಆರೋಪಿಸಿದ್ದಾಳೆ. ಎರಡು ಪ್ಲೇಟ್ ಚೋಲೆ ಬಟುರೆ ಆರ್ಡರ್ ಮಾಡುವ ಅವಶ್ಯಕತೆ ಏನಿತ್ತು ಎಂದು ಪತ್ನಿ ಕಾಲರ್ ಪಟ್ಟಿ ಹಿಡಿದುಕೊಂಡಿದ್ದಾಳೆ. ಮನೆಯಲ್ಲಿ ಪ್ರತಿ ದಿನ ಕಿರಿಕಿರಿ, ಮಾನಸಿಕ ನೆಮ್ಮದಿ ಇಲ್ಲದ ಕಾರಣ ಗಂಗಾ ನದಿ ತಟದ ಕ್ಷೇತ್ರಕ್ಕೆ ಬಂದಿದ್ದೇನೆ. ನಾನು ಯಾರನ್ನು ಕರೆತಂದಿಲ್ಲ, ಹೊಟೆಲ್‌ನಲ್ಲಿ ಯಾರನ್ನು ಇರಿಸಿಲ್ಲ ಎಂದು ಪತ್ನಿ ಆರೋಪವನ್ನು ಅಜಯ್ ನಿರಾಕರಿಸಿದ್ದಾನೆ.
ಸರಿ ಯಾರು ಇಲ್ಲಾ ಎಂದರೆ ಎರಡನೇ ಪ್ಲೇಟ್ ಯಾರಿಗೆ ಎಂದು ಪತ್ನಿ ರಂಪಾಟ ತೀವ್ರಗೊಳಿಸಿದ್ದಾರೆ. ಬೀದಿಯಲ್ಲಿ ರಂಪಾಟ ತೀವ್ರಗೊಂಡಿದೆ. ಪತಿ ಅಜಯ್ ಸ್ಪಷ್ಟನೆ, ಉತ್ತರ ನೀಡಿದರೂ ಪತ್ನಿ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಜಗಳ ಜೋರಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಇಬ್ಬರನ್ನು ಕೂರಿಸಿಕೊಂಡು ಮಾತುಕತೆ ನಡೆಸಿದ್ದಾರೆ. ಪೊಲೀಸರು ಮಾತುಕತೆ ಬಳಿಕ ಇಬ್ಬರು ಮೈಮನಸ್ಸು ಮರೆತು ಜೊತೆಯಾಗಿ ಹೋಗುವುದಾಗಿ ಭರವಸೆ ನೀಡಿ ಸ್ಥಳದಿಂದ ತೆರಳಿದ್ದಾರೆ. ಹೀಗಾಗಿ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ