
ಅಹಮದಾಬಾದ್: ಗಜರಾತಿನ ಸೂರತ್‌ನಲ್ಲಿ 13 ವರ್ಷದ ವಿದ್ಯಾರ್ಥಿಯ ಅಪಹರಣಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಶಿಕ್ಷಕಿಯನ್ನು ಬಂಧಿಸಲಾಗಿದೆ. ಬಂಧನಕ್ಕೊಳಗಾದ ಶಿಕ್ಷಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆಕೆ ಐದು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಅಪಹರಣಕ್ಕೊಳಗಾದ ಬಾಲಕನಿಂದಲೇ ಶಿಕ್ಷಕಿ ಗರ್ಭಿಣಿಯಾಗಿದ್ದಾಳೆಂದು ವರದಿಯಾಗಿದೆ. ಈ ಸಂಬಂಧ ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 13 ವರ್ಷದ ಬಾಲಕನ ತಂದೆ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಏನಿದು ಪ್ರಕರಣ?
ಸೂರತ್ ನಗರದ ಪುಣೆ ಪೊಲೀಸ್ ಠಾಣೆಯಲ್ಲಿ 13 ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿದೆ ಎಂದು ದೂರು ದಾಖಲಿಸಲಾಗಿತ್ತು. ಬಾಲಕನ ತಂದೆಯೇ ಈ ದೂರನ್ನು ದಾಖಲಿಸಿದ್ದರು. ಈ ದೂರಿನಲ್ಲಿ ಶಾಲೆ ಮತ್ತು ಟ್ಯೂಷನ್ ಶಿಕ್ಷಕಿ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ದೂರಿನ ಅನ್ವಯ ಪೊಲೀಸರು ನಗರದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆಯಲ್ಲಿ ತೊಡಗಿದ್ದರು. ಏಪ್ರಿಲ್ 30ರಂದು ಜೈಪುರದಿಂದ ಹಿಂದಿರುಗುತ್ತಿದ್ದಾಗ ಶಮ್ಲಾಜಿ ಗಡಿ ಬಳಿಯಲ್ಲಿ ಶಿಕ್ಷಕಿ ಮತ್ತು ಅಪ್ರಾಪ್ತ ಬಾಲಕನನ್ನು ಬಂಧಿಸಲಾಯ್ತು. ಇಬ್ಬರು ಬಸ್‌ನಲ್ಲಿದ್ದಾಗಲೇ ಅರೆಸ್ಟ್ ಮಾಡಲಾಗಿದೆ.
ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
ಬಂಧನದ ಬಳಿಕ ಶಿಕ್ಷಕಿಯನ್ನು ವಿಚಾರಣೆಗೊಳಿಪಡಿಸಿದಾಗ, ಬಾಲಕನೊಂದಿಗೆ ದೈಹಿಕ ಸಂಬಂಧ ಬೆಳೆಸಿರೋದಾಗಿ ಹೇಳಿಕೊಂಡಿದ್ದಾಳೆ. ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪುಣೆ ಪೊಲೀಸ್ ಇನ್ಸ್‌ಪೆಕ್ಟರ್ ವಿ ಎಂ ದೇಸಾಯಿ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆಸಲಾಗಿತ್ತು. ನ್ಯಾಯಾಲಯ ಶಿಕ್ಷಕಿಯನ್ನು ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಲಾಯ್ತು.
5 ತಿಂಗಳು ಗರ್ಭಿಣಿ
ಶಿಕ್ಷಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆಕೆ ಗರ್ಭವತಿ (20 ವಾರ, 4 ದಿನದ ಗರ್ಭಿಣಿ) ಎಂದು ದೃಢವಾಗಿದ ಎಂದು ಸೂರತ್ ನಗರದ ಡಿಸಿಪಿ ಜೋನ್-1 ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಬಾಲಕನಿಂದಲೇ ಆಕೆ ಗರ್ಭಿಣಿಯಾಗಿದ್ದಾಳೆಂದು ದೃಢೀಕರಣಕ್ಕಾಗಿ ಡಿಎನ್ಎ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. 13 ವರ್ಷದ ಬಾಲಕನಿಂದಲೇ ತಾನು ಗರ್ಭಿಣಿಯಾಗಿರೋದು ಎಂದು ಶಿಕ್ಷಕಿ ಹೇಳಿಕೆ ನೀಡಿದ್ದಾಳೆ. 13 ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಇದೀಗ ರೋಚಕ ತಿರುವು ಸಿಕ್ಕಿದೆ.
ಇದನ್ನೂ ಓದಿ: ಒಂಟಿ ಮನೆ ಗುರುತಿಸಿ ಕಳ್ಳತನ, ಡಿಜೆ ಹಳ್ಳಿ ಲೇಡಿ ಗ್ಯಾಂಗ್ ಅರೆಸ್ಟ್, ₹14 ಲಕ್ಷ ಮೌಲ್ಯದ ಚಿನ್ನ ಜಪ್ತಿ
ಮಹಿಳೆಯಿಂದ ಚಿನ್ನದ ಸರ ಅಪಹರಣ
ಮಹಿಳೆಯೊಬ್ಬರಿಗೆ ಡ್ರಾಪ್ ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬ ಆಕೆಯ ಕತ್ತಿನಲ್ಲಲಿದ್ದ ಚಿನ್ನದ ಸರವನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ನಗರ ಕಿರಗಂದೂರು ರಸ್ತೆಯ ನಿವಾಸಿ ಎಂ.ಲಕ್ಷ್ಮೀ ಚಿನ್ನದ ಸರ ಕಳೆದುಕೊಂಡ ಮಹಿಳೆ. ಈಕೆ ಟಿ.ಎಂ.ಹೊಸೂರು ಗೇಟ್ ಬಳಿ ನಿಂತಿದ್ದ ಸಮಯದಲ್ಲಿ ಶ್ರೀರಂಗಪಟ್ಟಣ ಕಡೆಯಿಂದ ಬಂದ ಅಪರಿಚಿತ ವ್ಯಕ್ತಿ ಮಾತನಾಡಿಸಿದ್ದಾನೆ. ಟಿ.ಎಂ.ಹೊಸೂರು ಮಾರ್ಗವಾಗಿ ನಾನು ಹೋಗುತ್ತಿದ್ದು, ಅಲ್ಲಿಗೆ ನಿಮ್ಮನ್ನು ಡ್ರಾಪ್ ಮಾಡಿ ಹೋಗುವುದಾಗಿ ಬೈಕ್ ಹತ್ತಿಸಿಕೊಂಡಿದ್ದಾನೆ.
43 ಗ್ರಾಂ ತೂಕದ 3 ಲಕ್ಷ ರು. ಮೌಲ್ಯದ ಚಿನ್ನದ ಸರ
ಅಲ್ಲಿಂದ ಒಂದು ಕಿ.ಮೀ. ದೂರ ಹೋದ ಬಳಿಕ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ್ದಾನೆ. ಬೈಕ್ ಕೆಟ್ಟಿದೆ ಎಂದು ಸುಳ್ಳು ಹೇಳಿ ಮಹಿಳೆಯಿಂದ ಯಾರಿಗೋ ಫೋನ್ ಮಾಡುವ ನೆಪದಲ್ಲಿ ಫೋನ್ ಪಡೆದುಕೊಂಡು ನಂತರ ವಾಪಸ್ ನೀಡಿದ್ದಾನೆ. ಬಳಿಕ ಆಕೆಯ ಕತ್ತಿನಲ್ಲಿದ್ದ 43 ಗ್ರಾಂ ತೂಕದ 3 ಲಕ್ಷ ರು. ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಗೌಡಹಳ್ಳಿ ರಸ್ತೆ ಮಾರ್ಗವಾಗಿ ಪರಾರಿಯಾಗಿದ್ದಾನೆ. ಆ ಸಮಯದಲ್ಲಿ ಮಹಿಳೆ ರಕ್ಷಣೆಗೆ ಕೂಗಿಕೊಂಡರೂ ಸುತ್ತಮುತ್ತ ಯಾರೂ ಇಲ್ಲದ ಕಾರಣ ಪ್ರಯೋಜನವಾಗಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪಲ್ಯ–ಸಾಂಬಾರ್ ಚೆನ್ನಾಗಿಲ್ಲವೆಂದು ಪತ್ನಿಯ ಹತ್ಯೆ: ಪ್ರೀತಿಯ ಮದುವೆಯಾದ ಹೆಂಡತಿ ದುರಂತ ಅಂತ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ