ಕೇದಾರನಾಥದಲ್ಲಿ ಅಲಂಕರಿಸಲಿದೆ 60 ಕ್ವಿಂಟಾಲ್‌ ತೂಕದ ಕಂಚಿನ 'ಓಂ' ಆಕೃತಿ!

By Santosh NaikFirst Published May 22, 2023, 8:05 PM IST
Highlights

ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ 60 ಕ್ವಿಂಟಾಲ್‌ ತೂಕದ ಕಂಚಿನ ಓಂ ಆಕೃತಿಯನ್ನು ನಿಲ್ಲಿಸಲಾಗುತ್ತದೆ. ಗುಜರಾತ್‌ನ ಕಲಾವಿದರನ್ನು ಇದನ್ನು ನಿರ್ಮಾಣ ಮಾಡಿದ್ದು, ಇದರ ಬೆಸುಗೆಯನ್ನು ತಾಮ್ರದಿಂದ ಹಾಕಲಾಗುತ್ತದೆ.
 

ನವದೆಹಲಿ (ಮೇ.22):  ಉತ್ತರಾಖಂಡದ ಬಾಬಾ ಕೇದಾರನಾಥ ಧಾಮದ ವೈಭವವನ್ನು ಇನ್ನಷ್ಟು ಹೆಚ್ಚಿಸುವ ಭಾಗವಾಗಿ,  ಧಾಮದ ಗೋಲ್ ಪ್ಲಾಜಾದಲ್ಲಿ 'ಓಂ' ಆಕಾರವನ್ನು ಸ್ಥಾಪನೆ ಮಾಡಲಾಗುತ್ತದೆ. ಕಂಚಿನಿಂದ ಮಾಡಲಾದ ಈ ಆಕೃತಿಯ ತೂಕ 60 ಕ್ವಿಂಟಾಲ್. ಧಾಮ್‌ನಲ್ಲಿ ಈ ಆಕೃತಿಯನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರಯೋಗವನ್ನು ಯಶಸ್ವಿಯಾಗಿ ಕೈಗೊಂಡಿದೆ. ಅಧಿಕಾರಿಗಳ ಪ್ರಕಾರ, ಅಗತ್ಯ ಕೆಲಸ ಮುಗಿದ ತಕ್ಷಣ ಈ ಓಂ ಅನ್ನು ಶಾಶ್ವತವಾಗಿ ಇಲ್ಲಿ ಸ್ಥಾಪನೆ ಮಾಡಲಾಗುತ್ತದೆ.  ಕೇದಾರನಾಥ ಧಾಮದಲ್ಲಿ ಸ್ಥಾಪಿಸಲಾದ ಈ 60 ಕ್ವಿಂಟಾಲ್ ಓಂ ಆಕೃತಿಯನ್ನು ಗುಜರಾತ್‌ನ ಕಲಾವಿದರು ಕಂಚಿನಿಂದ ತಯಾರಿಸಿದ್ದಾರೆ. ಇದನ್ನು ಈ ಧಾಮದಲ್ಲಿ ಶಾಶ್ವತವಾಗಿ ಸ್ಥಾಪಿಸಲು ತಾಮ್ರದಿಂದ ಬೆಸುಗೆ ಹಾಕಲಾಗುತ್ತದೆ. ಇದರಿಂದ ಧಾಮ್‌ನಲ್ಲಿ ಯಾವುದೇ ಅನಾಹುತಗಳಾದರೂ ಇದರ ಮೇಲೆ ಪರಿಣಾಮ ಬೀರೋದಿಲ್ಲ. ಮೊದಲ ಹಂತದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಪಿಡಬ್ಲ್ಯುಡಿ ಹೈಡ್ರಾ ಯಂತ್ರದ ಸಹಾಯದಿಂದ ಗೋಲ್ ಪ್ಲಾಜಾದಲ್ಲಿ ಓಂ ಆಕೃತಿಯನ್ನು ಅಳವಡಿಸುವ ಪ್ರಯೋಗ ನಡೆಸಿದ್ದು, ಸಂಪೂರ್ಣ ಯಶಸ್ವಿಯಾಗಿದೆ.

ಮುಂದಿನ ವಾರ ಆಕೃತಿ ಜೋಡಣೆ: ಸುದ್ದಿ ಸಂಸ್ಥೆ ಎಎನ್‌ಐ ಸಹ ಓಂನ ಆಕೃತಿಯನ್ನು ಸ್ಥಾಪಿಸುವ ವೀಡಿಯೊವನ್ನು ಹಂಚಿಕೊಂಡಿದೆ, ಇದರಲ್ಲಿ ಹಗ್ಗಗಳು ಮತ್ತು ಜೆಸಿಬಿ ಸಹಾಯದಿಂದ ಓಂ ಅನ್ನು ಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ. ಈ ಕೆಲಸದಲ್ಲಿ ಸಾಕಷ್ಟು ಮಂದಿ ಕೂಡ ತೊಡಗಿಸಿಕೊಂಡಿದ್ದಾರೆ. ಓಂ ಅಳವಡಿಕೆಯ ನಂತರ ದೀಪಾಲಂಕಾರವೂ ನಡೆಯಲಿದ್ದು, ರಾತ್ರಿ ವೇಳೆಯಲ್ಲಿ ಇನ್ನಷ್ಟು ಅದ್ಧೂರಿಯಾಗಿ ಕಾಣುತ್ತದೆ ಎಂದು ಹೇಳಲಾಗುತ್ತಿದೆ.

ಕೇದಾರನಾಥ ದೇವಾಲಯದ ಶಿಖರಕ್ಕೆ ಮೆರುಗು ತರಲಿದೆ ಚಿನ್ನದ ಕಳಸ!

ಈ ಬಗ್ಗೆ ಮಾಹಿತಿ ನೀಡಿದ ಇಇ ವಿನಯ್ ಜಿಕ್ವಾನ್, ಓಂನ ಆಕಾರವನ್ನು ಸಂಪೂರ್ಣವಾಗಿ ಭದ್ರಪಡಿಸಲು ನಾಲ್ಕು ಕಡೆಯಿಂದ ತಾಮ್ರದಿಂದ ವೆಲ್ಡಿಂಗ್ ಮಾಡಲಾಗುತ್ತದೆ. ಇದರೊಂದಿಗೆ ಮಧ್ಯ ಭಾಗ ಹಾಗೂ ಅಂಚುಗಳನ್ನು ಭದ್ರಪಡಿಸಿ, ಹಿಮಪಾತ ಅಥವಾ ಯಾವುದೇ ಅನಾಹುತದ ಸಮಯದಲ್ಲಿ ಹಾನಿಯಾಗದಂತೆ, ಒಂದು ವಾರದಲ್ಲಿ ಓಂನ ಆಕಾರವನ್ನು ಸಂಪೂರ್ಣವಾಗಿ ಅಳವಡಿಸಲಾಗುವುದು ಎಂದು ಹೇಳಿದರು. ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರ್ ದೀಕ್ಷಿತ್ ಅವರು, "ಓಂ ಅಕೃತಿ ಅಳವಡಿಕೆಯಿಂದ ಕೇದಾರನಾಥ ಗೋಲ್ ಪ್ಲಾಜಾದ ಹಿರಿಮೆ ಇನ್ನಷ್ಟು ಹೆಚ್ಚಲಿದೆ. ಓಂ ಆಕೃತಿಯನ್ನು ಅಳವಡಿಸಲು ಡಿಡಿಎಂಎ ಅಗತ್ಯ ಕ್ರಮವನ್ನು ಪೂರ್ಣಗೊಳಿಸುತ್ತಿದೆ" ಎಂದು ಹೇಳಿದರು.

Latest Videos

ಕೇದಾರನಾಥಕ್ಕೆ IRCTCಯಿಂದ ಹೆಲಿಕಾಪ್ಟರ್ ಸೌಲಭ್ಯ, ಟಿಕೆಟ್ ಬುಕ್ ಮಾಡುವುದು ಹೇಗೆ?

 

click me!