ಮೋದಿ ಚೌಕೀದಾರ್‌ಗೆ ಮಮತಾ ಪೆಹ್ರೇದಾರ್ ಸವಾಲು| ಚೌಕೀದಾರ್ ಎಂದು ಹೇಳಿ ಎರಡನೇ ಬಾರಿ ಗದ್ದುಗೆಗೆ ಏರಿದ್ದ ಮೋದಿ ಕಾರ್ಯತಂತ್ರವನ್ನೇ ಮೂರನೇ ಬಾರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಲು ಮಮತಾ ಬ್ಯಾನರ್ಜಿ ಬಳಕೆ
ಪಥರ್‌ಪ್ರತಿಮಾ[ಜ.08]: ಲೋಕಸಭಾ ಚುನಾವಣೆ ವೇಳೆ ನಾನು ದೇಶ ಕಾಯುವ ಚೌಕೀದಾರ್ ಎಂದು ಹೇಳಿ ಎರಡನೇ ಬಾರಿ ಗದ್ದುಗೆಗೆ ಏರಿದ್ದ ಮೋದಿ ಕಾರ್ಯತಂತ್ರವನ್ನೇ ಮೂರನೇ ಬಾರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಲು ಮಮತಾ ಬ್ಯಾನರ್ಜಿ ಬಳಸಿದ್ದಾರೆ. ಚೌಕೀದಾರ್ ಘೋಷಣೆಗೆ ವಿರುದ್ದವಾಗಿ ಪೆಹ್ರೇದಾರ್ (ಕಾವಲುಗಾರ್ತಿ) ಘೋಷಣೆಯನ್ನು ಮೊಳಗಿಸಿದ್ದಾರೆ.
ಇಲ್ಲಿ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರೋಧಿ ರಾರಯಲಿಯಲ್ಲಿ ಮಾತನಾಡಿದ ಅವರು, ನಾನು ನಿಮ್ಮ ಪೆಹ್ರೇದಾರ್, ನಾನು ಇರುವ ವರೆಗೆ ಯಾರೂ ಹೆದರಬೇಕಿಲ್ಲ ಎಂದು ಜನರಿಗೆ ಅಭಯ ನೀಡಿದ್ದಾರೆ. ಅಲ್ಲದೇ ಎನ್‌ಆರ್‌ಸಿ, ಎನ್‌ಆರ್‌ಪಿ ಜಾರಿ ಮಾಡುವುದಿದ್ದರೆ ನನ್ನ ಶವದ ಮೇಲೆ ಎಂದು ಪುರರುಚ್ಛರಿಸಿದ್ದಾರೆ.
ನೀವು ಪಾಕಿಸ್ತಾನದ ಪ್ರಧಾನಿ ಏನ್ರೀ?: ಮೋದಿಗೆ ದೀದಿ ಪ್ರಶ್ನೆ!
ಇಲ್ಲಿ ನಡೆದ ರಾರಯಲಿಯಲ್ಲಿ ಮಾತನಾಡಿದ ಅವರು, ನಾವು ಯಾರ ಔದಾರ್ಯದಲ್ಲಿಯೂ ಬದುಕುತ್ತಿಲ್ಲ. ಯಾರ ಹಕ್ಕನ್ನೂ ಕಿತ್ತುಕೊಳ್ಳಲು ನಾನು ಬಿಡುವುದಿಲ್ಲ. ನಾನು ಜೀವಂತವಾಗಿ ಇರುವ ವರೆಗೆ ರಾಜ್ಯದ ಜನರ ಹಿತ ಕಾಪಾಡಲು ಏನೆಲ್ಲಾ ಮಾಡಲು ಸಾಧ್ಯವೋ, ಎಲ್ಲವನ್ನೂ ಮಾಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ನಿಮ್ಮ ಹೆಸರು, ನಿಮ್ಮ ಪೂರ್ವಜರ ಹೆಸರು ಕೇಳಿಕೊಂಡು ಯಾರಾದರೂ ಹೊರಗಿನವರು ಬಂದರೆ ಯಾವ ಮಾಹಿತಿಯೂ ಕೊಡಬೇಡಿ ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವಕ್ಕೆ ಪ.ಬಂಗಾಳ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ: ಸಿಎಎ ವಿರೋಧಿ ನಿಲುವು ಕಾರಣವೇ?