ವರ್ಷಾಂತ್ಯ ಮತ್ತು ಸರಣಿ ರಜೆ ಹಿನ್ನೆಲೆ ಇಲ್ಲಿಯ ಪವಿತ್ರ ವೆಂಕಟೇಶ್ವರನ ದೇವಸ್ಥಾನ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸರ್ವದರ್ಶನಕ್ಕೆ (ಟಿಕೆಟ್ ಇಲ್ಲದೇ ದರ್ಶನ) 20 ತಾಸು ಕಾಯುವಂತಾಗಿದೆ.
ತಿರುಮಲ (ಆಂಧ್ರ ಪ್ರದೇಶ) (ಡಿ.30): ವರ್ಷಾಂತ್ಯ ಮತ್ತು ಸರಣಿ ರಜೆ ಹಿನ್ನೆಲೆ ಇಲ್ಲಿಯ ಪವಿತ್ರ ವೆಂಕಟೇಶ್ವರನ ದೇವಸ್ಥಾನ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸರ್ವದರ್ಶನಕ್ಕೆ (ಟಿಕೆಟ್ ಇಲ್ಲದೇ ದರ್ಶನ) 20 ತಾಸು ಕಾಯುವಂತಾಗಿದೆ. ಭಕ್ತರ ಈ ಸುದೀರ್ಘ ಸಾಲನ್ನು ತಪ್ಪಿಸಲು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ (ಟಿಟಿಡಿ) ಅಧಿಕಾರಿಗಳು ವಿಶೇಷ ದರ್ಶನ ಟಿಕೆಟ್ ನೀಡುತ್ತಿದ್ದರೂ, ವಿಶೇಷ ದರ್ಶನಕ್ಕೆ 5 ತಾಸು ಕಾಯಬೇಕಿದೆ.
ಶನಿವಾರ ಮಧ್ಯರಾತ್ರಿ ವರೆಗೆ ದೇಗುಲಕ್ಕೆ ಈ ಹಬ್ಬದ ಋತುವಿನಲ್ಲಿ 78,414 ಮಂದಿ ಭೇಟಿ ನೀಡಿದ್ದಾರೆ. ಇದು ಸಾಮಾನ್ಯ ದಿನಕ್ಕಿಂತ 10-15 ಸಾವಿರ ಅಧಿಕ. ಅದರಲ್ಲಿ 26,100 ಮಂದಿ ದೇವರಿಗೆ ಮುಡಿ ಅರ್ಪಿಸಿದ್ದಾರೆ. ಈ ಅವಧಿಯಲ್ಲಿ 3.45 ಕೋಟಿ ರು. ಕಾಣಿಕೆ ಸಂಗ್ರಹವಾಗಿದೆ. ಭಾರಿ ಸಂಖ್ಯೆಯ ಭಕ್ತರ ಆಗಮನದಿಂದ ದೇಗುಲದ ಆವರಣದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿದೆ.
ವಿಐಪಿ ಟಿಕೆಟ್ 40 ಸಾವಿರಕ್ಕೆ ಮಾರಿದ ವ್ಯಕ್ತಿ ಬಂಧನ: ತಿರುಮಲ ವೆಂಕಟೇಶ್ವರ ದೇವಸ್ಥಾನದ ವಿಐಪಿ ದರ್ಶನ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟಿಂಗ್ ಮಾಡಿದ್ದಕ್ಕಾಗಿ ಎನ್‌ಸಿಸಿ ಕ್ಯಾಂಟೀನ್ ಉದ್ಯೋಗಿ, ಆತನ ಇಬ್ಬರು ಸಹಚರರು ಸೇರಿದಂತೆ 3 ಮಂದಿಯನ್ನು ಬಂಧಿಸಲಾಗಿದೆ ಎನ್‌ಸಿಸಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಪ್ರಮುಖ ಆರೋಪಿ ಬ್ರಹ್ಮಯ್ಯ ಅವರನ್ನು ತಮಿಳುನಾಡಿನ ನಿವೃತ್ತ ಸೇನಾ ಯೋಧರೊಬ್ಬರು ನಾಲ್ಕು ವಿಐಪಿ ಬ್ರೇಕ್ ದರ್ಶನ ಟಿಕೆಟ್ ವ್ಯವಸ್ಥೆ ಮಾಡಲು ಸಂಪರ್ಕಿಸಿದ್ದರು. ಪ್ರತಿ ಟಿಕೆಟ್‌ಗೆ 500 ರು. ಇದ್ದರೆ, ಬ್ರಹ್ಮಯ್ಯ ನಾಲ್ಕು ಟಿಕೆಟ್‌ಗಳಿಗೆ ಅವರಿಂದ 40,000 ರು. ಕೇಳಿದ್ದ.
ವಿವಾಹವಾದ ನಂತರ ಖ್ಯಾತ ನಿರ್ದೇಶಕನ ಮಗಳ ಮದುವೆಗೆ ಹಾಜರಿಯಾದ ನಾಗ ಚೈತನ್ಯ-ಶೋಭಿತಾ!
ಹಾಗೂ ನಿವೃತ್ತ ಸೈನಿಕ ಎಂಬುದನ್ನು ಐಡಿ-ಕಾರ್ಡ್‌ನಿಂದ ಅಳಿಸಿ ‘ಸೇವಾನಿರತ ಬ್ರಿಗೇಡಿಯರ್’ ಎಂದು ಬದಲಿಸಿದ್ದ. ಎಲ್ಲವೂ ಸುರಳೀತವಾಗಿ ನಡೆದು ಟಿಕೆಟ್ ಕೂಡ ನೀಡಲಾಗಿತ್ತು. ಆದರೆ ವಿಜಿಲೆನ್ಸ್ ಅಧಿಕಾರಿಗಳು ಟಿಕೆಟ್ ತಪಾಸಿಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ವಿಜಿಲೆನ್ಸ್‌ನವರು ಯೋಧನಿಗೆ, ‘ಟಿಕೆಟ್‌ಗೆ ಎಷ್ಟು ಹಣ ನೀಡಿದಿರಿ?’ ಎಂದಾಗ 40 ಸಾವಿರ ರು. ಎಂದಿದ್ದಾರೆ ಹಾಗೂ ಬ್ರಹ್ಮಯ್ಯನಿಂದ ಪಡೆದ ವಿಷಯ ತಿಳಿಸಿದ್ದಾರೆ. ಇದರ ಆಧಾರದ ಮೇರೆಗೆ ಬ್ರಹ್ಮಯ್ಯನನ್ನು ಬಂಧಿಸಲಾಗಿದೆ.