ತಿರುಪತಿಯಲ್ಲಿ ಹೊಸ ನಿಯಮ: ಇನ್ಮುಂದೆ ದರ್ಶನ, ಸೇವೆ, ಟಿಕೆಟ್ ಬುಕ್ಕಿಂಗ್‌ಗೆ ಈ ದೃಢೀಕರಣ ಕಡ್ಡಾಯ!

Published : Mar 10, 2025, 05:07 AM ISTUpdated : Mar 10, 2025, 07:29 AM IST
ತಿರುಪತಿಯಲ್ಲಿ ಹೊಸ ನಿಯಮ: ಇನ್ಮುಂದೆ ದರ್ಶನ, ಸೇವೆ, ಟಿಕೆಟ್ ಬುಕ್ಕಿಂಗ್‌ಗೆ ಈ ದೃಢೀಕರಣ ಕಡ್ಡಾಯ!

ಸಾರಾಂಶ

ತಿರುಪತಿ ದೇವಸ್ಥಾನದಲ್ಲಿ ದರ್ಶನ, ಸೇವೆ, ಟಿಕೆಟ್‌ ಬುಕ್ಕಿಂಗ್‌ಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ. ಅಕ್ರಮ ಟಿಕೆಟ್ ಬುಕ್ಕಿಂಗ್ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.

ತಿರುಪತಿ (ಮಾ.10): ತಿರುಮಲ ತಿರುಪತಿ ದೇವಸ್ಥಾನಗಳಲ್ಲಿ ಇನ್ನುಮುಂದೆ ಭಕ್ತರಿಗೆ ದರ್ಶನ, ಸೇವೆ, ಟಿಕೆಟ್‌ ಬುಕ್ಕಿಂಗ್‌ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಆಧಾರ್‌ ಧೃಡೀಕರಣ ಹಾಗೂ ಇ-ಕೆವೈಸಿಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ದತ್ತಿ ಇಲಾಖೆ ಶನಿವಾರ ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದು, ಈ ಮೂಲಕ ಅಕ್ರಮವಾಗಿ ಟಿಕೆಟ್‌ ಗಿಟ್ಟಿಸಲು ಅನ್ಯರ ಗುರುತನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಿದೆ.

ಆಧಾರ್‌ ಧೃಡೀಕರಣ ಅಳವಡಿಕೆಗೆ ಅನುಮತಿ ಕೋರಿ ಕಳೆದ ವರ್ಷ ಜುಲೈನಲ್ಲಿ ಟಿಟಿಡಿ ದತ್ತಿ ಇಲಾಖೆಗೆ ಪತ್ರ ಬರೆದಿತ್ತು. ಇದಕ್ಕೆ ಕೇಂದ್ರ ಸರ್ಕಾರ ಆಗಸ್ಟ್‌ನಲ್ಲಿ ಒಪ್ಪಿಗೆ ಸೂಚಿಸಿತ್ತು. ಇದೀಗ ಈ ವ್ಯವಸ್ಥೆ ಜಾರಿಗೆ ಬಂದಿದೆ.

ತಿರುಮಲ ದೇಗುಲದಲ್ಲಿ ಚಿನ್ನದ ಪೆಂಡೆಂಟ್‌ ಪಡೆಯಲು ಎಟಿಎಂ

ಆಂಧ್ರಪ್ರದೇಶದ ತಿರುಮಲ ದೇವಸ್ಥಾನದಲ್ಲಿ ತಿಮ್ಮಪ್ಪನ ಚಿನ್ನ ಹಾಗೂ ಬೆಳ್ಳಿ ಪೆಂಡೆಂಟ್‌ ಅನ್ನು (ಪದಕ) ಪಡೆಯಲು ಎಟಿಎಂ ಸ್ಥಾಪನೆಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಸಿದ್ಧತೆ ನಡೆಸಿದೆ. ಇದು ಸಾಕಾರಗೊಂಡರೆ ದೇಶದಲ್ಲೇ ಇಂಥ ಮೊದಲ ಪ್ರಯತ್ನವಾಗಲಿದೆ.ಯುಎಇಯಲ್ಲಿ ಎಐ ಚಾಲಿತ ಚಿನ್ನದ ಎಟಿಎಂ ಇರುವಂತೆ, ನದಗು ಪಾವತಿಸಿದರೆ ಅಥವಾ ಕಾರ್ವು ಸ್ವೈಪ್‌ ಮಾಡಿದರೆ ವೆಂಕಟೇಶ್ವರ ಹಾಗೂ ಲಕ್ಷ್ಮೀ ದೇವಿಯ ಚಿತ್ರವಿರುವ 2, 5, 10 ಗ್ರಾಂಗಳ ಪೆಂಡೆಂಟ್‌ ಬರುತ್ತದೆ. ಇದಕ್ಕೆ ಅಗತ್ಯ ತಂತ್ರಜ್ಞಾನ ಸಿದ್ಧಪಡಿಸಲು ಸಾಫ್ಟ್‌ವೇರ್‌ ಕಂಪನಿಗಳು ಹಾಗೂ ಎಐ ಸ್ಟಾರ್ಟ್‌ಅಪ್‌ಗಳನ್ನು ಟಿಟಿಡಿ ಕೋರಿದೆ

ಇದನ್ನೂ ಓದಿ: ತಿರುಪತಿ ದರ್ಶನ ಇನ್ನಷ್ಟು ಸುಲಭ, ವಾಟ್ಸಾಪ್‌ನಲ್ಲೇ ಟಿಕೆಟ್ ಬುಕಿಂಗ್! ನಂಬರ್ ಇಲ್ಲಿದೆ, ಈಗಲೇ ಸೇವ್ ಮಾಡ್ಕೊಳ್ಳಿ!

ಇಂಥ ಎಟಿಎಂಗಳನ್ನು ತಿರುಮಲ ದೇವಸ್ಥಾನ, ತಿರುಪತಿಯ ಗೋವಿಂದರಾಜ ದೇವಸ್ಥಾನ, ತಿರುಚನೂರಿನ ಪದ್ಮಾವತಿ ಅಮ್ಮಾವರಿ ದೇವಸ್ಥಾನಗಳಲ್ಲಿ ಅಳವಡಿಡಲು ಯೋಚಿಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ