ಇವರು ವಿಭಿನ್ನ ಅಮಿತ್‌ ಶಾ: ಕೇಂದ್ರ ಗೃಹ ಸಚಿವರ ಭೇಟಿಯಾದ ಮುಸ್ಲಿಂ ನಾಯಕರ ಮೆಚ್ಚುಗೆ

By Kannadaprabha News  |  First Published Apr 6, 2023, 9:05 AM IST

ದೇಶ ಎದುರಿಸುತ್ತಿರುವ 14 ಸಮಸ್ಯೆಗಳನ್ನು ನಾವು ಕೇಂದ್ರ ಸಚಿವರ ಎದುರು ಇರಿಸಿದೆವು. ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಅಮಿತ್‌ ಶಾ ಸಕಾರಾತ್ಮಕವಾಗಿ ಮಾತನಾಡಿದರು. ರಾಜಕೀಯ ಭಾಷಣಗಳ ಸಮಯದಲ್ಲಿ ಕಾಣಿಸಿಕೊಳ್ಳುವಂತೆ ಇರಲಿಲ್ಲ. ಅವರು ಎಲ್ಲಾ ಕೋರಿಕೆಗಳನ್ನು ಆಲಿಸಿದರು ಎಂದು ಹೇಳಿದರು.


ನವದೆಹಲಿ (ಏಪ್ರಿಲ್ 6, 2023): ರಾಮನವಮಿ ಹಿಂಸಾಚಾರ ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಮುಸ್ಲಿಂ ನಾಯಕರು, ‘ಅಮಿತ್‌ ಶಾ, ರಾಜಕೀಯ ಭಾಷಣಗಳ ಸಮಯದಲ್ಲಿ ಇರುವಂತೆ ಇರಲಿಲ್ಲ. ಅವರು ವಿಭಿನ್ನವಾಗಿಯೇ ಕಾಣಿಸಿಕೊಂಡರು ಎಂದು ಹೊಗಳಿದ್ದಾರೆ.

ಬಿಹಾರ (Bihar), ಪಶ್ಚಿಮ ಬಂಗಾಳದಲ್ಲಿ (West Bengal) ಹಿಂಸಾಚಾರ ನಡೆದ ಬಳಿಕ ಇಂತಹವುಗಳನ್ನು ತಡೆಗಟ್ಟುವಂತೆ ಕೋರಿ ಜಮಿಯತ್‌ ಉಲೇಮಾ - ಇ- ಹಿಂದ್‌ ಮುಸ್ಲಿಂ ಸಂಘಟನೆಯ ನಾಯಕರು (Muslim Organization Leaders)  ಕೇಂದ್ರ ಗೃಹ ಸಚಿವರನ್ನು (Union Home Minister) ಮಂಗಳವಾರ ಭೇಟಿ ಮಾಡಿದ್ದರು. ಈ ಕುರಿತಾಗಿ ಮಾತನಾಡಿದ ನಿಯಾಜ್‌ ಫಾರೂಕಿ, ದೇಶ ಎದುರಿಸುತ್ತಿರುವ 14 ಸಮಸ್ಯೆಗಳನ್ನು ನಾವು ಕೇಂದ್ರ ಸಚಿವರ (Union Minister) ಎದುರು ಇರಿಸಿದೆವು. ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ (Maharashtra) ನಡೆದ ಹಿಂಸಾಚಾರದ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಅಮಿತ್‌ ಶಾ (Amit Shah) ಸಕಾರಾತ್ಮಕವಾಗಿ ಮಾತನಾಡಿದರು. ರಾಜಕೀಯ ಭಾಷಣಗಳ ಸಮಯದಲ್ಲಿ ಕಾಣಿಸಿಕೊಳ್ಳುವಂತೆ ಇರಲಿಲ್ಲ. ಅವರು ಎಲ್ಲಾ ಕೋರಿಕೆಗಳನ್ನು ಆಲಿಸಿದರು ಎಂದು ಹೇಳಿದರು.

Tap to resize

Latest Videos

ಇದನ್ನು ಓದಿ: Washing Powder Nirma: ನಿರ್ಮಾ ಹುಡುಗಿಗೆ ವಿರೂಪಾಕ್ಷಪ್ಪ, ಈಶ್ವರಪ್ಪ ಮುಖ ಅಂಟಿಸಿ ಅಮಿತ್‌ ಶಾಗೆ ಸ್ವಾಗತ!

ರಾಜಸ್ಥಾನದಲ್ಲಿ (Rajasthan) ಗೋರಕ್ಷಣೆ (Cow Protection) ವಿಷಯಕ್ಕೆ ಹತರಾದ ನಾಸಿರ್‌ ಮತ್ತು ಜುನೇದ್‌ ಅವರ ಕುರಿತೂ ಮಾತುಕತೆ ನಡೆಸಲಾಯಿತು. ‘ದೇಶದಲ್ಲಿ ಎಲ್ಲಾ ರೀತಿಯ ಜನರು ಇರುತ್ತಾರೆ. ಎಲ್ಲರನ್ನು ಒಂದೇ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ನಾವು ಯಾವುದೇ ಧಾರ್ಮಿಕ ನಾಯಕರನ್ನು ಟಾರ್ಗೆಟ್‌ ಮಾಡುತ್ತಿಲ್ಲ. ನಮ್ಮ ಗುರಿ ದೇಶದಲ್ಲಿ ಸೌಹಾರ್ದತೆಯನ್ನು ಕಾಪಾಡುವುದು ಎಂದು ಅವರು ಹೇಳಿದರು.

ಮುಸ್ಲಿಮರ ಮೇಲೆ ಹಿಂಸೆ: ಒಐಸಿ; ಇದು ಒಐಸಿಯ ಕೋಮುವಾದಿತನಕ್ಕೆ ಉದಾಹರಣೆ ಎಂದ ಭಾರತ
ದೇಶಾದ್ಯಂತ ರಾಮನವಮಿ (Ram Navami) ಆಚರಣೆ ವೇಳೆ ನಡೆದ ಗಲಭೆ ಹಾಗೂ ಯಾತ್ರೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಆಕ್ಷೇಪಾರ್ಹ ಪ್ರತಿಕ್ರಿಯೆ ನೀಡಿರುವ ಇಸ್ಲಾಮಿಕ್‌ ಸಹಕಾರ ಸಂಘಟನೆ (Organization of Islamic Cooperation) (ಒಐಸಿ) (OIC) ‘ರಾಮನವಮಿ ಮೆರವಣಿಗೆಗಳಲ್ಲಿ ಭಾರತದ ಹಲವಾರು ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳನ್ನು ಎಸಗಲಾಗುತ್ತಿದೆ’ ಎಂದಿದೆ.

ಇದನ್ನೂ ಓದಿ: ಜನ ಮೋದಿ ವರ್ಚಸ್ಸಿಗೆ ವೋಟ್‌ ಹಾಕಿದ್ದಾರೇ ಹೊರತು ಪದವಿ ನೋಡಲ್ಲ: ನಮೋ ಪರ ಬ್ಯಾಟ್‌ ಬೀಸಿದ ಎನ್‌ಸಿಪಿ ನಾಯಕ

ಅಲ್ಲದೆ 2023ರ ಮಾ.31 ರಂದು ಬಿಹಾರದ ಷರೀಫ್‌ನಲ್ಲಿ ಹಿಂದೂ ಉಗ್ರಗಾಮಿಗಳು ಮದರಸಾ ಮತ್ತು ಅದರ ಗ್ರಂಥಗಳನ್ನು ಸುಟ್ಟು ಹಾಕಿದ್ದಾರೆ. ಇಂತಹ ಕೃತ್ಯಗಳ ಪ್ರಚೋದಕರು ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ದೇಶದಲ್ಲಿ ಮುಸ್ಲಿಂ ಸಮುದಾಯದ ಸುರಕ್ಷತೆ, ಭದ್ರತೆ ಹಾಗೂ ಹಕ್ಕು ಮತ್ತು ಘನತೆಯನ್ನು ಕಾಪಾಡಬೇಕೆಂದು ಭಾರತೀಯ ಅಧಿಕಾರಿಗಳಿಗೆ ಒಐಸಿ ಪ್ರಧಾನ ಕಾರ್ಯದರ್ಶಿಗಳು ಕರೆ ನೀಡುತ್ತಾರೆ’ ಎಂದು ಹೇಳಿಕೆ ನೀಡಿದೆ.

ಆದರೆ ಈ ಹೇಳಿಕೆಗೆ ತಿರುಗೇಟು ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಗ್ಚಿ, ‘ಭಾರತದ ಕುರಿತು ಒಐಸಿ ನೀಡಿರುವ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ಒಐಸಿಯ ಕೋಮುವಾದಿ ಮತ್ತು ಭಾರತ ವಿರೋಧಿ ಅಜೆಂಡಾಗೆ ಮತ್ತೊಂದು ಉದಾಹರಣೆಯಾಗಿದೆ. ತನ್ನ ಭಾರತ ವಿರೋಧಿ ನೀತಿಯಿಂದ ಒಐಸಿ ತನ್ನ ಖ್ಯಾತಿಗೆ ತಾನೇ ಧಕ್ಕೆ ಮಾಡಿಕೊಳ್ಳುತ್ತದೆ’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಭ್ರಷ್ಟರು ಸರ್ಕಾರ, ವ್ಯವಸ್ಥೆಯ ಭಾಗವಾಗಿದ್ದರೂ ಯಾರನ್ನೂ ಬಿಡಬೇಡಿ: ಸಿಬಿಐಗೆ ಪ್ರಧಾನಿ ಮೋದಿ ಸಲಹೆ

click me!