ಇದು ಟ್ರೇಲರ್‌, ಮುಂದಿದೆ ದೊಡ್ಡಾಟ!

Published : Mar 01, 2019, 08:11 AM IST
ಇದು ಟ್ರೇಲರ್‌, ಮುಂದಿದೆ ದೊಡ್ಡಾಟ!

ಸಾರಾಂಶ

ಇದು ಟ್ರೇಲರ್‌, ಮುಂದಿದೆ ದೊಡ್ಡಾಟ!| ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಪರೋಕ್ಷ ಎಚ್ಚರಿಕೆ| ಈಗ ಆಗಿದ್ದು ಪ್ರಾಯೋಗಿಕ ಯೋಜನೆಯಷ್ಟೇ

ನವದೆಹಲಿ[ಮಾ.01]: ಪಾಕಿಸ್ತಾನದ ಮೇಲೆ ನಡೆಸಿದ ವಾಯು ದಾಳಿ ಪ್ರಾಯೋಗಿಕ ಯೋಜನೆ ಅಷ್ಟೇ. ನಿಜವಾದ ಆಟ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ದೆಹಲಿಯಲ್ಲಿ ವಿಜ್ಞಾನಿಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮೋದಿ, ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ವಾಯುಪಡೆ ನಡೆಸಿದ ದಾಳಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. ‘ನೀವು ಪ್ರಯೋಗಾಲಯಗಳಲ್ಲಿ ನಿಮ್ಮ ಜೀವನವನ್ನು ಕಳೆದಿದ್ದೀರಿ. ನೀವು ಹೇಗೆ ಪ್ರಾಯೋಗಿಕ ಯೋಜನೆ ಸಿದ್ಧಪಡಿಸುತ್ತೀರೋ ಅದೇ ರೀತಿ ಇತ್ತೀಚೆಗೆ ಇಂಥದ್ದೊಂದು ಪ್ರಾಯೋಗಿಕ ಯೋಜನೆಯೊಂದು ಜರುಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪಾಕ್‌ ಮೇಲೆ ಇನ್ನಷ್ಟುದಾಳಿಯ ಸುಳಿವು ನೀಡಿದರು.

ತಮ್ಮ ಮಾತನ್ನು ಮುಂದುವರಿಸಿ, ಈ ಮುಂಚೆ ಆಗಿದ್ದು, ಪ್ರಾಯೋಗಿಕವಷ್ಟೇ. ಇಂದಿನ ಪ್ರಶಸ್ತಿ ವಿಜೇತರಿಗೆ ಸಮರ್ಪಿಸಲು ನಿಜವಾದ ಯೋಜನೆ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!