ಭಾರತ ಪಾಕ್‌ ಪಡೆಯನ್ನು ಹಿಮ್ಮೆಟ್ಟಿಸಿದ್ದು ಹೇಗೆ?

By Web DeskFirst Published Mar 1, 2019, 7:40 AM IST
Highlights

ಭಾರತ ಪಾಕ್ ಪಡೆಗಳನ್ನು ಹಿಮ್ಮೆಟ್ಟಿಸಿದ್ದು ನಮ್ಮ ಹೆಮ್ಮೆಯ ಅಭಿನಂದನ್ ಅವರನ್ನು ಮರಳಿ ಭಾರತಕ್ಕೆ ಕಳಿಹಿಸುತ್ತಿದೆ. ಭಾರತ ಪಾಕ್ ಪಡೆಯನ್ನು ಹಿಮ್ಮೆಟ್ಟಿಸಿದ್ದು ಹೇಗೆ ಎನ್ನುವ 6 ಅಂಶಗಳು ಇಲ್ಲಿವೆ. 

ಭಾರತ ಪಾಕ್‌ ಪಡೆಯನ್ನು ಹಿಮ್ಮೆಟ್ಟಿಸಿದ್ದು ಹೇಗೆ?

1. 24 ವಿಮಾನಗಳ ದಾಳಿ

ಬಾಲಾಕೋಟ್‌ ದಾಳಿಗೆ ಪ್ರತೀಕಾರ ಕೈಗೊಳ್ಳಲು ಉದ್ದೇಶಿಸಿದ್ದ ಪಾಕಿಸ್ತಾನ, 8 ಎಫ್‌-16, 4 ಮಿರಾಜ್‌-3, 4 ಚೀನಾ ನಿರ್ಮಿತ ಜೆಎಫ್‌-17 ಥಂಡರ್‌ ಸೇರಿ 24 ಯುದ್ಧವಿಮಾನಗಳನ್ನು ಭಾರತದ ಮೇಲೆ ದಾಳಿಗೆ ನಿಯೋಜಿಸಿತು.

2. ಗಡಿ ದಾಟಲು ಪ್ಲಾನ್‌

ಕೆಲ ಯುದ್ಧವಿಮಾನಗಳು ಪಾಕ್‌ ಆಕ್ರಮಿತ ಕಾಶ್ಮೀರ ಗಡಿ ದಾಟಿ ಭಾರತದ ಮೇಲೆ ದಾಳಿ ನಡೆಸಲು ನಿಯೋಜಿಸಲಾಗಿತ್ತು. ಇನ್ನು ಕೆಲವು ವಿಮಾನಗಳನ್ನು ಭಾರತದ ಪ್ರತಿದಾಳಿ ಎದುರಿಸುವ ಸಲುವಾಗಿ ಯೋಜಿಸಲಾಗಿತ್ತು.

3. ನಮ್ಮ ಮಿಲಿಟರಿ ಗುರಿ

ಮಿಲಿಟರಿಯೇತರ, ಜನರಹಿತ ಪ್ರದೇಶದಲ್ಲಿ ದಾಳಿ ನಡೆಸುವುದು ನಮ್ಮ ಉದ್ದೇಶವಾಗಿತ್ತು ಎಂದು ಪಾಕ್‌ ಹೇಳಿಕೊಂಡಿದ್ದರೂ, ಭಾರತದ ಸೇನಾನೆಲೆ ಮೇಲೆ ದಾಳಿ ನಡೆಸಿದ್ದು ಇದೀಗ ಸಾಕ್ಷಿ ಸಮೇತ ಬಹಿರಂಗವಾಗಿದೆ

4. 8 ವಿಮಾನ ಪ್ರತಿದಾಳಿ

ಗಡಿಯಾಚೆ 10 ಕಿಮೀ ದೂರದಲ್ಲಿದ್ದಾಗಲೇ ಪಾಕ್‌ ವಿಮಾನಗಳನ್ನು ಪತ್ತೆ ಹಚ್ಚಿದ ಭಾರತ, 4 ಸುಖೋಯ್‌, 2 ಮಿರಾಜ್‌, 2 ಮಿಗ್‌ 21 ಬೈಸನ್‌ ಸೇರಿ ಒಟ್ಟು 8 ಸಮರ ವಿಮಾನಗಳನ್ನು ಬಳಸಿ ಭಾರೀ ಪ್ರತಿದಾಳಿ ಸಂಘಟಿಸಿತು.

5. ಪಾಕ್‌ ಬಾಂಬ್‌ ಠುಸ್‌

ಪ್ರತಿದಾಳಿಗೆ ಕಂಗೆಟ್ಟು ವಾಪಸ್‌ ಹೋಗುವಾಗ ಪಾಕ್‌ ವಿಮಾನಗಳು ಲೇಸರ್‌ ಗೈಡೆಡ್‌ ಬಾಂಬ್‌ ಹಾಕಿದ್ದವು. ಆದರೆ, ಅವು ಸೇನಾ ಕಾಂಪೌಂಡ್‌ ಒಳಗೆ ಬಿದ್ದರೂ ಏನೂ ಆಗಲಿಲ್ಲ ಎಂದು ಭಾರತದ ಸೇನಾಧಿಕಾರಿಗಳೇ ಬಹಿರಂಗಪಡಿಸಿದ್ದಾರೆ.

6. ಬೆನ್ನತ್ತಿದ ಅಭಿನಂದನ್‌

ಪಾಕ್‌ ಎಫ್‌-16 ಒಂದನ್ನು ಗಡಿ ರೇಖೆಯನ್ನೂ ದಾಟಿ ಬೆನ್ನತ್ತಿದ ಅಭಿನಂದನ್‌ ‘ಆರ್‌-73’ ಕ್ಷಿಪಣಿ ಪ್ರಯೋಗಿಸಿದರು. ಆಗ ಎಫ್‌-16 ಹಾರಿಸಿದ ‘ಅಮ್ರಾಮ್‌’ ಕ್ಷಿಪಣಿ, ಅಭಿನಂದನ್‌ ಇದ್ದ ‘ಮಿಗ್‌-21’ಕ್ಕೆ ತಗುಲಿ ಅದು ಪತನಗೊಂಡಿತು.

click me!