
ಕೊಚ್ಚಿ[ಫೆ.22]: ಐದು ಅಂಗಡಿಗಳಿಗೆ ಯಶಸ್ವಿಯಾಗಿ ಕನ್ನ ಹಾಕಿದ್ದ ಕಳ್ಳನಿಗೆ ಆರನೇ ಕಡೆ ಕಳವು ಮಾಡಲು ಹೋದಾಗ ತಾನು ತಪ್ಪು ಮಾಡುತ್ತಿದ್ದೇನೆ ಎಂಬ ಜ್ಞಾನೋದಯವಾಗಿದೆ.
ಏಕೆಂದರೆ ಆತ ಕಳವು ಮಾಡಲು ಬಂದಿದ್ದ ಮನೆ ಮಾಜಿ ಯೋಧನೊಬ್ಬನ ಮನೆ ಆಗಿತ್ತು. ಹೀಗಾಗಿ ಆತ ಆ ಮನೆಯಲ್ಲಿ ಯಾವ ವಸ್ತುಗಳನ್ನೂ ಕಳವು ಮಾಡದೇ ಒಂದು ಗ್ಲಾಸ್ ಮದ್ಯ ಕುಡಿದು ಮನೆಯಿಂದ ಹೊರಬಂದಿದ್ದಾನೆ. ಅಲ್ಲದೇ ಮನೆಯ ಗೋಡೆಯ ಮೇಲೆ ಕ್ಷಮಾಪಣೆಯನ್ನು ಬರೆದಿದ್ದಾನೆ.
ಶೌಚಾಲಯಕ್ಕೆ ತೆರಳಿದ್ದ ಯುವತಿಯ ವಿಡಿಯೋ ಮಾಡಿದ ಭೂಪ ಅಂದರ್
ಕೇರಳದ ಎರ್ನಾಕುಲಂ ಜಿಲ್ಲೆಯ ತಿರುವನಕುಲಂನಲ್ಲಿರುವ ಮಾಜಿ ಯೋಧ ಇಸಾಕ್ ಮಣಿ ಎನ್ನುವವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ದಾಖಲಾಗಿದೆ. ಮಂಗಳವಾರ ರಾತ್ರಿ ಘಟನೆ ನಡೆದಿತ್ತು. ಮರುದಿನ ಮನೆಯ ಕೆಲಸದಾಕೆ ಬಂದು ನೋಡಿದಾಗ ಬಾಗಿಲು ಮುರಿದಿರುವುದು ಕಂಡು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ