ಪೂಜಾ ಉಗ್ರಳಲ್ಲ, ಹಂತಕಿಯೂ ಅಲ್ಲ: ನಿರೀಕ್ಷಣಾ ಜಾಮೀನು ನೀಡುವಂತೆ ಸುಪ್ರೀಂ ಆದೇಶ 

Published : May 22, 2025, 09:30 AM ISTUpdated : May 22, 2025, 09:37 AM IST
ಪೂಜಾ ಉಗ್ರಳಲ್ಲ, ಹಂತಕಿಯೂ ಅಲ್ಲ: ನಿರೀಕ್ಷಣಾ ಜಾಮೀನು ನೀಡುವಂತೆ ಸುಪ್ರೀಂ ಆದೇಶ 

ಸಾರಾಂಶ

ನಕಲಿ ಪ್ರಮಾಣಪತ್ರಗಳ ಆರೋಪದ ಮೇಲೆ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್‌ಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ದೆಹಲಿ ಪೊಲೀಸರ ಆಕ್ಷೇಪಣೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ನವದೆಹಲಿ: ಐಎಎಸ್ ಹುದ್ದೆ ಗಿಟ್ಟಿಸಿಕೊಳ್ಳಲು ನಕಲಿ ಪ್ರಮಾಣ ಪತ್ರಗಳನ್ನು ನೀಡಿದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಮಾಜಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್‌ಗೆ ಸುಪ್ರೀಂ ಕೋರ್ಚ್ ನಿರೀಕ್ಷಣಾ ಜಾಮೀನು ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ। ಬಿ.ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ನೇತೃತ್ವದ ಪೀಠ, 'ಪೂಜಾ ವಿಚಾರಣೆಗೆ ಸಹಕರಿಸುತ್ತಿಲ್ಲ. ಅವರಿಗೆ ಜಾಮೀನು ನೀಡಬಾರದು' ಎಂಬ ದಿಲ್ಲಿ ಪೊಲೀಸರ ವಾದವನ್ನು ತಳ್ಳಿಹಾಕಿತು. 

'ಅವಳು ಮಾಡಿದ ಘೋರ ಅಪರಾಧವೇನು? ಆಕೆ ಮಾದಕ ದ್ರವ್ಯ ಜಾಲದ ನಾಯಕಿ ಅಲ್ಲ. ಆಕೆ ಭಯೋತ್ಪಾದಕಿಯಲ್ಲ, ಕೊಲೆ ಮಾಡಿಲ್ಲ. ಡ್ರಗ್ಸ್ ವ್ಯಸನಿಯೂ ಅಲ್ಲ. ನಿಮಗೆ ಒಂದು ವ್ಯವಸ್ಥೆ ಮತ್ತು ತಂತ್ರಜ್ಞಾನ ಇರಬೇಕು. ನೀವು ತನಿಖೆಯನ್ನು ಪೂರ್ಣಗೊಳಿಸಿ. ಆಕೆ ಎಲ್ಲವನ್ನೂ ಕಳೆದುಕೊಂಡಿದ್ದಾಳೆ. ಎಲ್ಲಿಯೂ ಉದ್ಯೋಗ ಸಿಗುವುದಿಲ್ಲ' ಎಂದು ಪೀಠ ಹೇಳಿತು.

ಇನ್ನು ಪ್ರಕರಣದ ಸತ್ಯ ಮತ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿದಾರರಿಗೆ ಜಾಮೀನು ನೀಡಬೇಕಾಗಿದ್ದ ಸೂಕ್ತ ಪ್ರಕರಣವಿದು ಎಂಬ ದಿಲ್ಲಿ ಹೈಕೋರ್ಚ್ ಅಭಿಪ್ರಾಯ ಸರಿಯಾಗಿದೆ ಎಂದೂ ಪೀಠ ತಿಳಿಸಿತು. 

ಪೂಜಾ ಮೇಲಿನ ಆರೋಪವೇನು?: 
2022ರಲ್ಲಿ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್ಸಿ) ಬರೆಯಲು ಅಂಗವಿಕಲ ಮೀಸಲಾತಿಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪವನ್ನು ಪೂಜಾ ಖೇಡ್ಕರ್‌ಎದುರಿಸುತ್ತಿದ್ದಾರೆ. ಈ ಸಂಬಂಧ ಯುಪಿಎಸ್ಸಿ ಅವರ ನೇಮಕಾತಿ ರದ್ದುಪಡಿಸಿದೆ. ಸಂಸ್ಥೆ ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ನಿರ್ಬಂಧ ವಿಧಿಸಿದೆ. ಅಲ್ಲದೇ ಪೂಜಾ ಮೇಲೆ ಕ್ರಿಮಿ ನಲ್ ಕೇಸಿದೆ.

ಹೈ ಕೋರ್ಟ್ ಹೇಳಿದ್ದೇನು?
ನಾಗರಿಕ ಸೇವೆ ಪರೀಕ್ಷೆಯಲ್ಲಿ ವಂಚನೆ ಮಾಡಿ ವಜಾಗೊಂಡಿದ್ದ ಪ್ರೊಬೆಷ್ನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್‌ ನಿರಾಕರಿಸಿತ್ತು. ಈ ಕುರಿತು ತೀರ್ಪು ನೀಡಿದ ನ್ಯಾ। ಚಂದ್ರಧಾರಿ ಸಿಂಗ್‌, ‘ನಿರೀಕ್ಷಣಾ ಜಾಮೀನನ್ನು ನಿರಾಕರಿಸಲಾಗಿದ್ದು, ಬಂಧನದಿಂದ ಒದಗಿಸಲಾಗಿದ್ದ ಮದ್ಯಂತರ ರಕ್ಷಣೆಯನ್ನು ತೆಗೆದುಹಾಕಲಾಗಿದೆ’ ಎಂದರು. ಇದು ಸಾಂವಿಧಾನಿಕ ಹುದ್ದೆ ಹಾಗೂ ಸಮಾಜಕ್ಕೆ ಮಾಡಿದ ವಂಚನೆ ಎಂದಿರುವ ಅವರು, ಈ ಪ್ರಕರಣದಲ್ಲಿ ಸಾಕಷ್ಟು ಸಾಕ್ಷಿಗಳು ಲಭಿಸಿದ್ದು, ಆಕೆಯ ಸಂಚನ್ನು ಬಹಿರಂಗಪಡಿಸಲು ತನಿಖೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದರು.

1954ರ 12ನೇ ನಿಯಮದಡಿ ವಜಾ
‘ಸೆ.6ರಂದು, ಐಎಎಸ್‌ ನಿಯಮಗಳ ಪ್ರಕಾರ, 1954ರ 12ನೇ ನಿಯಮದಡಿ, 2023ರ ಐಎಎಸ್‌ ಪ್ರೊಬೇಷನರಿ ಹಾಗೀ ಮಹಾರಾಷ್ಟ್ರ ಕೇಡರ್‌ನ ಅಧಿಕಾರಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್‌ ಅವರನ್ನು ಕೇಂದ್ರ ಸರ್ಕಾರ ತಕ್ಷಣವೇ ಜಾರಿಗೆ ಬರುವಂತೆ ಇಲಾಖೆ ವಜಾ ಮಾಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ