ಅಲೋಪಥಿ ವಿರುದ್ಧ ಟೀಕೆ ಮಾಡಿದ ಬಾಬಾ ರಾಮ್‌ದೇವ್ ವಿರುದ್ಧ ಸುಪ್ರೀಂಕೋರ್ಟ್ ಟೀಕೆ ಮಾಡಿದೆ. ಅಲ್ಲದೆ, ಈ ವಿಚಾರಣೆ ಬಗ್ಗೆ ಕೇಂದ್ರ ಸರ್ಕಾರಕ್ಕೂ ನೋಟಿಸ್ ನೀಡಿದೆ.
ಯೋಗ ಗುರು ಬಾಬಾ ರಾಮ್‌ದೇವ್ ಅವರು ಅಲೋಪಥಿಯಂತಹ ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕೆ ಮಂಗಳವಾರ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅವರು ಆಯುರ್ವೇದವನ್ನು ಜನಪ್ರಿಯಗೊಳಿಸಲು ಅಭಿಯಾನಗಳನ್ನು ನಡೆಸಬಹುದು, ಆದರೆ ಇತರ ವ್ಯವಸ್ಥೆಗಳನ್ನು ಟೀಕಿಸಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಹೇಳಿದೆ.
"ಬಾಬಾ ರಾಮ್‌ದೇವ್ ಅಲೋಪಥಿ ವೈದ್ಯರ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ..? ಅವರು ಯೋಗವನ್ನು ಜನಪ್ರಿಯಗೊಳಿಸಿದರು. ಒಳ್ಳೆಯದು. ಆದರೆ ಅವರು ಇತರ ವ್ಯವಸ್ಥೆಗಳನ್ನು ಟೀಕಿಸಬಾರದು. ಅವರು ಅನುಸರಿಸುವ ಯೋಗ ಎಲ್ಲವನ್ನೂ ಗುಣಪಡಿಸುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ..?" ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಪ್ರಶ್ನಿಸಿದ್ದಾರೆ. ಅಲೋಪಥಿ ಔಷಧಿ, ಅವರ ವೈದ್ಯರು ಮತ್ತು ಕೋವಿಡ್ -19 ಲಸಿಕೆ ವಿರುದ್ಧ ನಡೆಯುತ್ತಿರುವ ಅಭಿಯಾನಗಳನ್ನು ಆರೋಪಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅವಲೋಕನಗಳನ್ನು ಮಾಡಿದೆ. ಇನ್ನು, ಐಎಂಎ ಮನವಿಗೆ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಪೀಠವು ಕೇಂದ್ರ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿದೆ.
ಕ್ಷಮೆ ಯಾಚಿಸಿದ್ದ 24 ಗಂಟೆಯೊಳಗೇ ಮತ್ತೆ 25 ಪ್ರಶ್ನೆ ಎಸೆದ ಬಾಬಾ ರಾಮ್‌ದೇವ್!
ಕಳೆದ ವರ್ಷ, ಕೋವಿಡ್‌ನ 2ನೇ ಅಲೆಯ ವೇಳೆ ದೇಶಾದ್ಯಂತ ಸಾವಿರಾರು ಜನರು ಬಲಿಯಾದಾಗ, ರಾಮ್‌ದೇವ್ ಅವರು ‘’ಲಕ್ಷಗಟ್ಟಲೆ ಜನರು ಅಲೋಪಥಿ ಔಷಧಿಗಳಿಂದ ಮೃತಪಟ್ಟಿದ್ದಾರೆ, ಅವರು ಚಿಕಿತ್ಸೆ ಅಥವಾ ಆಮ್ಲಜನಕವನ್ನು ಪಡೆಯದೆ ಸತ್ತವರಿಗಿಂತ ಹೆಚ್ಚು’’ ಎಂದು ವಿಡಿಯೋವೊಂದರಲ್ಲಿ ಹೇಳಿದ್ದರು. ಅಲ್ಲದೆ, ಯೋಗ ಗುರುಗಳು ಅಲೋಪಥಿಯನ್ನು "ಮೂರ್ಖ ಮತ್ತು ದಿವಾಳಿ" ವಿಜ್ಞಾನ ಎಂದೂ ಕರೆದಿದ್ದರು. ಹಾಗೂ, ಕೊರೊನಾ ವೈರಸ್ ಲಸಿಕೆಯ ಎರಡೂ ಡೋಸ್ ಪಡೆದ ನಂತರವೂ ಭಾರತದಲ್ಲಿ ಹಲವಾರು ವೈದ್ಯರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದರು.
ಈ ಹಿಂದೆ ಮಾಧ್ಯಮ ಹೇಳಿಕೆಯನ್ನು ನೀಡಿದ್ದ ಐಎಂಎ, ರಾಮ್‌ದೇವ್ ಅವರು ತಿಳುವಳಿಕೆ ಇಲ್ಲದೆ ಹೇಳಿಕೆಗಳನ್ನು ನೀಡುವ ಮೂಲಕ ಮತ್ತು ವೈಜ್ಞಾನಿಕ ಔಷಧವನ್ನು ಮಾನನಷ್ಟಗೊಳಿಸಿರುವ ಮೂಲಕ ಜನರನ್ನು ದಾರಿತಪ್ಪಿಸಿದ್ದರಿಂದ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಂಡಿತ್ತು. ಹಾಗೆ,
ಸಾಂಕ್ರಾಮಿಕ ಸಮಯದಲ್ಲಿ ಜೀವಗಳನ್ನು ಉಳಿಸಲು ಶ್ರಮಿಸುತ್ತಿರುವಾಗ ರಾಮದೇವ್ ಅಲೋಪಥಿ ಮತ್ತು ಆಧುನಿಕ ಔಷಧದ ಅಭ್ಯಾಸ ಮಾಡುವವರ ಖ್ಯಾತಿಯನ್ನು ಹಾಳುಮಾಡಿದ್ದಾರೆ ಎಂದು ಭಾರತೀಯ ವೈದ್ಯರ ಉನ್ನತ ಸಂಘ ಹೇಳಿತ್ತು.
ಈ ಮಧ್ಯೆ, ಕಳೆದ ವಾರ, ಬಾಬಾ ರಾಮ್‌ದೇವ್‌ಗೆ ಆಯುರ್ವೇದದ ಬಗ್ಗೆ ತಪ್ಪುದಾರಿಗೆಳೆಯುವ ಕಾಮೆಂಟ್‌ಗಳನ್ನು ಮಾಡದಂತೆ ದೆಹಲಿ ಹೈಕೋರ್ಟ್ ಕೇಳಿಕೊಂಡಿತ್ತು. ಕೋವಿಡ್ -19 ವಿರುದ್ಧ ಪತಂಜಲಿಯ ಕರೋನಿಲ್ ಅನ್ನು ಬಳಸುವ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಬಾಬಾ ರಾಮ್‌ದೇವ್ ವಿರುದ್ಧ ವೈದ್ಯರ ವಿವಿಧ ಗುಂಪುಗಳು ಸಲ್ಲಿಸಿದ ಅರ್ಜಿಯನ್ನು ಪೀಠವು ವಿಚಾರಣೆ ನಡೆಸುತ್ತಿದೆ. ಹಾಗೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಲಸಿಕೆ ಹಾಕಿಸಿಕೊಂಡಿದ್ದರೂ ಕೋವಿಡ್ ಪಾಸಿಟಿವ್ ಎಂದು ಪರೀಕ್ಷೆಗೆ ಒಳಪಡಿಸಲಾಗಿದೆ ಎಂಬ ಯೋಗ ಗುರು ಹೇಳಿಕೆ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು.
40 ರೂ. ಪೆಟ್ರೋಲ್ ಬಗ್ಗೆ ಕೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಮ್‌ದೇವ್ ಗರಂ
ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭನ್ ಅವರು ಅಂತಹ ಹೇಳಿಕೆಗಳಲ್ಲಿ ಹೆಸರಿಸಲ್ಪಟ್ಟ ಜನರ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು ಮತ್ತು "ಇಂತಹ ಹೇಳಿಕೆಗಳು ಆಯುರ್ವೇದವನ್ನು ಕೆಟ್ಟ ಖ್ಯಾತಿಗೆ ತರುವುದರ ಜೊತೆಗೆ ಇತರ ರಾಷ್ಟ್ರಗಳೊಂದಿಗೆ ದೇಶದ ಸಂಬಂಧದ ಮೇಲೆ ಪರಿಣಾಮ ಬೀರಬಹುದು" ಎಂದು ಅಭಿಪ್ರಾಯ ಪಟ್ಟಿದ್ದರು.