ಕಾಂಗ್ರೆಸ್‌ನಲ್ಲಿ ಮತ್ತೆ ಗಾಂಧೀಗಿರಿ?, ಸದ್ದಿಲ್ಲದೆ ರಾಹುಲ್ ಕೈ ಬಲಪಡಿಸಿದ ಸೋನಿಯಾ!

Published : Sep 13, 2020, 02:59 PM IST
ಕಾಂಗ್ರೆಸ್‌ನಲ್ಲಿ ಮತ್ತೆ ಗಾಂಧೀಗಿರಿ?, ಸದ್ದಿಲ್ಲದೆ ರಾಹುಲ್ ಕೈ ಬಲಪಡಿಸಿದ ಸೋನಿಯಾ!

ಸಾರಾಂಶ

ಕಾಂಗ್ರೆಸ್‌ನಲ್ಲಿ ಮತ್ತೆ ಗಾಂಧೀಗಿರಿ?| ಪಕ್ಷದಲ್ಲಿ ರಾಹುಲ್‌ ಕೈ ಮತ್ತಷ್ಟುಬಲಪಡಿಸಿದ ಸೋನಿಯಾ| ಪಕ್ಷದ ಪುನಾರಚಿತ ಸಮಿತಿಗಳಲ್ಲಿ ರಾಹುಲ್‌ ಆಪ್ತರೇ ಹೆಚ್ಚು| ಮುಂದಿನ ಅಧ್ಯಕ್ಷ ರಾಹುಲ್‌ ಎಂಬ ಸಂಕೇತ ಇದು: ವಿಶ್ಲೇಷಕರು| 23 ನಾಯಕರ ‘ಬಂಡಾಯ’ಕ್ಕೆ ಬೆಲೆ ಕೊಡದ ಅಧ್ಯಕ್ಷೆ

ನವದೆಹಲಿ(ಸೆ.13): ಕಾಂಗ್ರೆಸ್‌ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ಪಕ್ಷದ ಪರಮೋಚ್ಚ ನೀತಿ ನಿರ್ಣಾಯಕ ಸಮಿತಿಯಾದ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ (ಸಿಡಬ್ಲುಸಿ) ಹಾಗೂ ವಿವಿಧ ಸಮಿತಿಗಳನ್ನು ಪುನಾರಚನೆ ಮಾಡಿರುವ ಹಿಂದೆ ಜಾಣ ತಂತ್ರ ಅಡಗಿದೆ. ಈ ಆಮೂಲಾಗ್ರ ಬದಲಾವಣೆಯು ಅವರ ಪುತ್ರ ರಾಹುಲ್‌ ಗಾಂಧಿ ಅವರ ಕೈ ಬಲಪಡಿಸಿದೆ. ಇನ್ನು 6 ತಿಂಗಳ ಬಳಿಕ ಅವರೇ ಪುನಃ ಅಧ್ಯಕ್ಷ ಪಟ್ಟಕ್ಕೆ ಬಂದು ಕೂರಬಹುದು ಎಂದು ವಿಶ್ಲೇಷಿಸಲಾಗಿದೆ.

ಇದಲ್ಲದೆ, ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಬಯಸಿ ಪತ್ರ ಬರೆದು ವಿವಾದ ಎಬ್ಬಿಸಿದ್ದ 23 ಕಾಂಗ್ರೆಸ್‌ ನಾಯಕರ ಪೈಕಿ ಬಹುತೇಕ ಮಂದಿಯನ್ನು ನಿರ್ಲಕ್ಷಿಸಲಾಗಿದೆ. ಅಲ್ಲದೆ, ಸಿಡಬ್ಲುಸಿಗೆ ಚುನಾವಣೆ ನಡೆಯಬೇಕು ಎಂಬ ಅವರ ಬೇಡಿಕೆಯನ್ನೂ ತಳ್ಳಿಹಾಕಲಾಗಿದೆ. ಈ ಮೂಲಕ ಒತ್ತಡ ತಂತ್ರಕ್ಕೆ ತಾವು ಮಣಿಯಲ್ಲ ಎಂಬ ಸಂದೇಶವನ್ನು ಸೋನಿಯಾ ನೀಡಿದ್ದಾರೆ.

ಸೋನಿಯಾ ಅವರಿಗೆ ಸಲಹೆ ನೀಡಲು ತಾತ್ಕಾಲಿಕ ವಿಶೇಷ ಸಮಿತಿ ರಚಿಸಲಾಗಿದ್ದು, ಅದರಲ್ಲಿ ಪತ್ರ ಬರೆದ 23 ಮಂದಿಯಲ್ಲಿ ಸ್ಥಾನ ಪಡೆದಿರುವುದು ಮುಕುಲ್‌ ವಾಸ್ನಿಕ್‌ ಮಾತ್ರ. ಪತ್ರಕ್ಕೆ ಸಹಿ ಹಾಕಿದ್ದ ಗುಲಾಂ ನಬಿ ಆಜಾದ್‌, ಆನಂದ ಶರ್ಮಾ, ಕಪಿಲ್‌ ಸಿಬಲ್‌, ಶಶಿ ತರೂರ್‌, ಮನೀಶ್‌ ತಿವಾರಿ ಅವರನ್ನು ನಿರ್ಲಕ್ಷಿಸಲಾಗಿದೆ.

ಇನ್ನು ಸಿಡಬ್ಲುಸಿಯ 26 ಕಾಯಂ ಆಹ್ವಾನಿತರಲ್ಲಿ ರಾಹುಲ್‌ ಗಾಂಧಿ ಬೆಂಬಲಿಗ 11 ಮಂದಿ ಇದ್ದಾರೆ. ಸಿಡಬ್ಲುಸಿ ಸದಸ್ಯರಲ್ಲಿ ರಾಹುಲ್‌ ಬಲಗೈನಂತಿರುವ 22 ಮುಖಂಡರಿದ್ದಾರೆ. ಸಿಡಬ್ಲುಸಿ ವಿಶೇಷ ಆಹ್ವಾನಿತರಲ್ಲಿ ‘ಯುವರಾಜ’ನ 7 ಬೆಂಬಲಿಗರು ಉಂಟು.

17 ರಾಜ್ಯಗಳ ಕಾಂಗ್ರೆಸ್‌ ಉಸ್ತುವಾರಿಗಳು ನೇಮಕವಾಗಿದ್ದು ಅವರಲ್ಲಿ 13 ಮಂದಿ ರಾಹುಲ್‌ ಆಪ್ತರು. 9 ಪ್ರಧಾನ ಕಾರ್ಯದರ್ಶಿಗಳಲ್ಲಿ ಅವರ ಬೆಂಬಲಿಗರು 4 ಮಂದಿ.

‘ಸೋನಿಯಾ ಅವರು ಯುವ ಹಾಗೂ ಹಿರಿಯರ ಸಮತೋಲಿತ ತಂಡ ರಚಿಸಿದ್ದಾರೆ. ವಿಶೇಷ ಸಲಹಾ ಸಮಿತಿಗೆ ಕಾಲಮಿತಿ ಹೇರಿರುವ ಕಾರಣ, ಶೀಘ್ರದಲ್ಲೇ ಅಧ್ಯಕ್ಷಗಿರಿಗೆ ಚುನಾವಣೆ ನಡೆಯಲಿದೆ ಎಂಬ ಸಂದೇಶವನ್ನು ಸೋನಿಯಾ ನೀಡಿದ್ದಾರೆ’ ಎಂದು ಪಕ್ಷದ ಹಿರಿಯ ಮುಖಂಡ ಅಶ್ವನಿ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?