
ಚಂಡೀಗಢ(ಅ.07): ‘ನಾನು ಸಿಖ್ಖರ ಋುಣದಲ್ಲಿರುವೆ. ಏಕೆಂದರೆ 1977ರಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿ ಅವರಿಗೆ ರಕ್ಷಣೆ ನೀಡಿದ್ದೇ ಸಿಖ್ಖರು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ರೈತ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಕೈಗೊಂಡಿರುವ ‘ಖೇತಿ ಬಚಾವೋ ಯಾತ್ರೆ’ಯ ಕೊನೆಯ ದಿನ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪಂಜಾಬಿಗಳು ನನ್ನ ಕೆಲಸ ನೋಡಬೇಕು. ಮಾತುಗಳನ್ನಲ್ಲ. ನಾನು ಸಿಖ್ಖರಿಂದ ಸಾಕಷ್ಟುಕಲಿತಿದ್ದೇನೆ. 1977ರಲ್ಲಿ ನನ್ನ ಅಜ್ಜಿ (ಮಾಜಿ ಪ್ರಧಾನಿ ಇಂದಿರಾ ಗಾಂಧಿ) ಚುನಾವಣೆಯಲ್ಲಿ ಸೋತಿದ್ದರು. ಆದರೆ ಆಗ ಯಾರೂ ಕೂಡ ನಮ್ಮ ಮನೆಯಲ್ಲಿ ಇರಲಿಲ್ಲ. ಕೇವಲ ಸಿಖ್ಖರು ರಕ್ಷಣೆ ನೀಡಿದರು. ಹೀಗಾಗಿ ನಾನು ಪಂಜಾಬಿ ಜನರ ಋುಣದಲ್ಲಿದ್ದೇನೆ’ ಎಂದರು. ಆದರೆ 84ರಲ್ಲಿ ಇಂದಿರಾ ಗಾಂಧಿ ಅವರು ಸಿಖ್ ಅಂಗರಕ್ಷಕರಿಂದಲೇ ಹತರಾದರು ಎಂಬುದು ಇಲ್ಲಿ ಗಮನಾರ್ಹ.
ತಾಯಿ ಆರೋಗ್ಯ ನೋಡಿಕೊಳ್ಳಬೇಕಿತ್ತು:
ಇದೇ ವೇಳೆ, ಮಹತ್ವದ ಕೃಷಿ ಕಾಯ್ದೆಗಳು ಸಂಸತ್ತಿನಲ್ಲಿ ಚರ್ಚೆಗೆ ಬಂದ ಸಂದರ್ಭದಲ್ಲಿ ತಾವು ವಿದೇಶಕ್ಕೆ ತೆರಳಿದ್ದ ಬಗ್ಗೆ ಸ್ಪಷ್ಟನೆ ನೀಡಿದ ರಾಹುಲ್, ‘ನನ್ನ ತಾಯಿ (ಸೋನಿಯಾ ಗಾಂಧಿ) ವೈದ್ಯಕೀಯ ತಪಾಸಣೆಗೆ ಹೋಗಿದ್ದರಿಂದ ನಾನೂ ಅವರ ಜತೆ ವಿದೇಶಕ್ಕೆ ತೆರಳಬೇಕಾಯಿತು. ನಾನು ಅವರ ಮಗ. ಅವರನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ’ ಎಂದ ರಾಹುಲ್, ‘ಸೋನಿಯಾ ಜತೆ ಪ್ರಿಯಾಂಕಾ ತೆರಳಬಹುದಿತ್ತು. ಆದರೆ ಅವರ ಮನೆಯ ಕೆಲವು ಸಿಬ್ಬಂದಿಗೆ ಕೊರೋನಾ ಬಂದ ಕಾರಣ ತಾಯಿ ಜತೆ ತೆರಳಲಿಲ್ಲ’ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ