Breaking: ಜುಲೈ 13-14ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ ವಿರೋಧ ಪಕ್ಷಗಳ ಸಭೆ!

By Santosh NaikFirst Published Jun 29, 2023, 5:38 PM IST
Highlights

ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ ಹಲವು ವಿರೋಧ ಪಕ್ಷಗಳ ನಾಯಕರ ಮುಂದಿನ ಸಭೆ ನಡೆಯಲಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಗುರುವಾರ ಘೋಷಿಸಿದ್ದಾರೆ.
 

ನವದೆಹಲಿ (ಜೂ.29): ಮುಂದಿನ ಪ್ರತಿಪಕ್ಷಗಳ ಸಭೆ ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಗುರುವಾರ ಘೋಷಿಸಿದ್ದಾರೆ. ಪಾಟ್ನಾ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಹೆದರಿದ್ದಾರೆ ಎಂದು ಇದೇ ವೇಳೆ ಹೇಳಿದ್ದಾರೆ.  ಜೂನ್ 23 ರಂದು ಬಿಹಾರದ ರಾಜಧಾನಿಯಲ್ಲಿ 15 ಕ್ಕೂ ಹೆಚ್ಚು ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದ ಸಭೆಯನ್ನು ಪವಾರ್ ಇಲ್ಲಿ ಉಲ್ಲೇಖಿಸಿದ್ದಾರೆ. ಪಾಟ್ನಾ ಸಭೆಯಲ್ಲಿ, ಕಾಂಗ್ರೆಸ್ ಸೇರಿದಂತೆ 17 ಪಕ್ಷಗಳು 2024 ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನಿಂದ ಹೋರಾಡಲು ಮತ್ತು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಲಸ ಮಾಡಲು ನಿರ್ಧಾರ ಮಾಡಿದ್ದವು. ಜಂಟಿ ಕಾರ್ಯತಂತ್ರವನ್ನು ರೂಪಿಸಲು ಅವರು ಎರಡನೇ ಸಭೆಯ ಸ್ಥಳವಾಗಿ ಶಿಮ್ಲಾವನ್ನು ನಿರ್ಧಾರ ಮಾಡಲಾಗಿತ್ತು. ಆದರೆ, ಅವರು ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಿದ್ದಾರೆ. "ಪಾಟ್ನಾ ನಂತರ, ಪ್ರತಿಪಕ್ಷಗಳ ಮುಂದಿನ ಸಭೆ ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ ನಡೆಯಲಿದೆ" ಎಂದು ಪವಾರ್ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯಲಿರುವ ಎರಡನೇ ಸಭೆಯಲ್ಲಿ ಕ್ರಿಯಾ ಯೋಜನೆ ರೂಪಿಸುವ ನಿರೀಕ್ಷೆಯಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾದ ಅವರ ನಿವಾಸದಲ್ಲಿ ಆಯೋಜಿಸಿದ್ದ ಮೊದಲ ಸಭೆಯಲ್ಲಿ ವಿವಿಧ ಪಕ್ಷಗಳ 32 ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು. ಮಾಯಾವತಿ (ಬಿಎಸ್‌ಪಿ), ನವೀನ್ ಪಟ್ನಾಯಕ್ (ಬಿಜೆಡಿ), ಕೆ ಚಂದ್ರಶೇಖರ್ ರಾವ್ (ಬಿಆರ್‌ಎಸ್) ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ) ಅವರಿಗೆ ಆಹ್ವಾನ ನೀಡಲಾಗಿರಲಿಲ್ಲ. ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ "ಪೂರ್ವನಿರ್ಧರಿತ ಕುಟುಂಬ ಕಾರ್ಯಕ್ರಮ"ದಿಂದಾಗಿ ಸಭೆಗೆ ಹಾಜರಾಗಲಿಲ್ಲ.

Latest Videos

ನಿತೀಶ್ ಕುಮಾರ್ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಂತಹ ನಾಯಕರು ಪ್ರತಿಪಕ್ಷಗಳ ಸಭೆಯಲ್ಲಿದ್ದ ಇದ್ದ ಪಕ್ಷಗಳ ಸಂಖ್ಯೆ 17 ಎಂದಿದ್ದರೆ, ಯೆಚೂರಿಯಂತಹ ಇನ್ನೂ ಕೆಲವರು 15 ಪಕ್ಷಗಳಿವೆ ಎಂದಿದ್ದರು. ಅ ಮೂಲಕ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ಪಣ ತೊಟ್ಟ ಪಕ್ಷಗಳ ನಿಖರವಾದ ಸಂಖ್ಯೆಯ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ.

ಪಾಟ್ನಾದಲ್ಲಿಂದು ಮಹಾಘಟಬಂಧನ್‌ ಮೀಟಿಂಗ್‌: ಮೋದಿ ಕಟ್ಟಿಹಾಕಲು ವಿಪಕ್ಷ ನಾಯಕರ ರಣತಂತ್ರ!

ಪ್ರತಿಪಕ್ಷಗಳ ಸಭೆಗೆ ಬಿಜೆಪಿ ತೀವ್ರವಾಗಿ ಟೀಕೆ ಮಾಡಿದೆ. ಇದನ್ನು "ಬಹು-ತಲೆಗಳ ಸ್ವಾರ್ಥ ಮೈತ್ರಿ" ಎಂದು ಕರೆದಿದೆ ಮತ್ತು ಅದನ್ನು ಗುಂಪುಗಳಲ್ಲಿ ಬೇಟೆಯಾಡುವ ತೋಳಗಳಿಗೆ ಹೋಲಿಸಿದೆ. ಪ್ರಸ್ತುತ ಲೋಕಸಭೆಯಲ್ಲಿ, ಈ ಪಕ್ಷಗಳ ಒಟ್ಟು ಬಲವು 543 ಸ್ಥಾನಗಳಲ್ಲಿ 200 ಕ್ಕಿಂತ ಕಡಿಮೆಯಿದೆ, ಆದರೂ ಅವರ ನಾಯಕರು ಒಟ್ಟಾಗಿ 300 ಪ್ಲಸ್ ಟ್ಯಾಲಿಯೊಂದಿಗೆ ಬಹುಮತವನ್ನು ಹೊಂದಿರುವ ಬಿಜೆಪಿಯ ಮೇಲೆ ಪ್ರಬಲ ಪರಿಣಾಮ ಬೀರುವ ಭರವಸೆಯಲ್ಲಿದ್ದಾರೆ.

'ಗಂಡನನ್ನು ರಿಲೀಸ್‌ ಮಾಡಿ, ಇಲ್ದಿದ್ರೆ ಬಂಜೆ ಆಗ್ತೇನೆ..' ಮಹಿಳೆಯ ಮನವಿಗೆ ಒಪ್ಪಿ ಕೊಲೆ ಅಪರಾಧಿಗೆ 90 ದಿನದ ಪೆರೋಲ್‌!

ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿರುವ ಕಾಂಗ್ರೆಸ್, 2019 ರಲ್ಲಿ 52 ಸ್ಥಾನಗಳನ್ನು ಗೆದ್ದಿದ್ದರೆ, 2014ರಲ್ಲಿ ಪಕ್ಷ 44 ಸೀಟ್‌ಗಳಲ್ಲಷ್ಟೇ ಗೆಲುವು ಕಂಡಿತ್ತು. ಇದು ಪಕ್ಷದ ಸಾರ್ವಕಾಲಿಕ ಕನಿಷ್ಠ ಸಾಧನೆಯಾಗಿದೆ.

click me!