ರಾಷ್ಟ್ರೀಯ ಉದ್ಯಾನ ಸುತ್ತ ಗಣಿ, ಕಟ್ಟಡ ನಿರ್ಮಾಣಕ್ಕೆ ಸುಪ್ರೀಂ ಬ್ರೇಕ್‌

Published : Jun 04, 2022, 12:30 PM IST
ರಾಷ್ಟ್ರೀಯ ಉದ್ಯಾನ ಸುತ್ತ ಗಣಿ, ಕಟ್ಟಡ ನಿರ್ಮಾಣಕ್ಕೆ ಸುಪ್ರೀಂ ಬ್ರೇಕ್‌

ಸಾರಾಂಶ

* ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ಬಫರ್‌ ವಲಯ * ಇಲ್ಲಿ ಗಣಿಗಾರಿಕೆ ನಡೆಯುವಂತಿಲ್ಲ * ಕಾರ್ಖಾನೆ, ಕಟ್ಟಡ ತಲೆಯೆತ್ತುವಂತಿಲ್ಲ * ಸುಪ್ರೀಂ ಕೋರ್ಚ್‌ ಮಹತ್ವದ ಆದೇಶ * ಈ ಚಟುವಟಿಕೆಗಳ ಬಗ್ಗೆ 3 ತಿಂಗಳಲ್ಲಿ ವರದಿಗೆ ಸೂಚನೆ

ನವದೆಹಲಿ(ಜೂ.04): ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ಬಫರ್‌ ವಲಯ’ ಎಂದು ಪರಿಗಣಿಸಬೇಕು ಎಂದು ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯ, ಈ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯಬಾರದು ಹಾಗೂ ಕಾರ್ಖಾನೆಗಳು, ಕಾಯಂ ಕಟ್ಟಡಗಳು ತಲೆಯೆತ್ತಕೂಡದು ಎಂಬ ಮಹತ್ವದ ಸೂಚನೆ ನೀಡಿದೆ.

ಅರಣ್ಯ ರಕ್ಷಣೆ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎಲ್‌. ನಾಗೇಶ್ವರರಾವ್‌ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

‘ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್‌) ಎಂದು ಪರಿಗಣಿಸಬೇಕು. ಇಲ್ಲಿ ಗಣಿಗಾರಿಕೆಗೆ ಅನುಮತಿಸಕೂಡದು. ಕಾರ್ಖಾನೆ ಹಾಗೂ ಕಾಯಂ ಕಟ್ಟಡಗಳ ನಿರ್ಮಾಣ ನಡೆಯಬಾರದು. ಈ ವ್ಯಾಪ್ತಿಯಲ್ಲಿ ಈಗಾಗಲೇ ಕಟ್ಟಡಗಳು ತಲೆಯೆತ್ತಿದ್ದರೆ ಅಂಥ ಕಟ್ಟಡಗಳ ಪಟ್ಟಿಯನ್ನು ಎಲ್ಲ ರಾಜ್ಯಗಳ ಅರಣ್ಯ ಸಂರಕ್ಷಣಾಧಿಕಾರಿಗಳು ಸಿದ್ಧಪಡಿಸಬೇಕು ಹಾಗೂ ಇನ್ನು 3 ತಿಂಗಳ ಒಳಗೆ ನಮಗೆ ವರದಿ ಸಲ್ಲಿಸಬೇಕು’ ಎಂದು ನಿರ್ದೇಶಿಸಿತು.

‘ಸರ್ಕಾರದ ಸಹಾಯ ಪಡೆದು ಉಪಗ್ರಹ ಚಿತ್ರಗಳನ್ನು ಆಧರಿಸಿ ಅಥವಾ ಡ್ರೋನ್‌ ಮೂಲಕ ಚಿತ್ರೀಕರಣ ನಡೆಸಿ ಈ ಸಮೀಕ್ಷೆಯನ್ನು ಅರಣ್ಯ ಸಂರಕ್ಷಕರು ನಡೆಸಬಹುದು’ ಎಂದು ಕೋರ್ಚ್‌ ಸಲಹೆ ನೀಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್